ಬೆಂಗಳೂರು: ಮಹದಾಯಿ, ಕಳಸಾ ಬಂಡೂರಿ ನೀರು ಹಂಚಿಕೆ ವಿವಾದದ ಬೆನ್ನಲ್ಲೇ ಇದೀಗ ಕರ್ನಾಟಕಕ್ಕೆ ಕಾವೇರಿ ವಿವಾದದ ಶಾಕ್ ತಟ್ಟಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.
ಇದೀಗ ತಮಿಳುನಾಡು ಸಿಎಂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಪತ್ರ ಬರೆದು ರಾಜ್ಯಕ್ಕೆ ಭೇಟಿ ನೀಡುವುದಾಗಿ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸಿಎಂ ಸಿದ್ದರಾಮಯ್ಯನವರ ಜೊತೆ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬಿಡಲು ಬಾಕಿ ಇರುವ 81ಟಿಎಂಸಿ ಕಾವೇರಿ ನೀರಿನ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ನೆರೆಯ ಗೋವಾ ರಾಜ್ಯ ಮಹದಾಯಿ ವಿಚಾರದಲ್ಲಿ ಸಾಕಷ್ಟು ಕ್ಯಾತೆ ತೆಗೆಯುತ್ತಿದೆ. ಕರ್ನಾಟಕದ ಪಾಲಿನ ನೀರನ್ನು ಕೊಡುವ ಬದಲು, ಗೋವಾ ಬರೇ ಕ್ಯಾತೆ ಮಾಡುತ್ತಿದೆ. ಅಲ್ಲದೇ ಗೋವಾ ಸ್ಪೀಕರ್, ಸಿಎಂ ಕದ್ದು ರಾಜ್ಯಕ್ಕೆ ಬರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.