ಇಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಸುಪ್ರಿಂಕೋರ್ಟ್ ತಿಳಿಸಿದೆ. ಕಾವೇರಿ ವಿಶೇಷ ಮೇಲ್ಮನವಿಗಳ ವಿಚಾರಣೆ
ಸಂದರ್ಭದಲ್ಲಿ ರಾಜ್ಯದ ಪರ ವಕೀಲರ ನಾರಿಮನ್, ನ್ಯಾಯಾಧಿಕರಣ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದಾಗ, ಪದೇ ಪದೇ ನ್ಯಾಯಾಧಿಕರಣ ತಪ್ಪುಗಳನ್ನು ಹೇಳಬೇಡಿ. ನ್ಯಾಯಾಧಿಕರಣದ ಆಕ್ಷೇಪಣೆಗಳನ್ನು ದಾಖಲಿಸಿದ್ದೀರಿ.
Advertisement
ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ. ನ್ಯಾಯಾಧಿಕರಣಕ್ಕೆ ಮತ್ತೆ ಪ್ರಕರಣ ವರ್ಗಾವಣೆ ಮಾಡುವುದಿಲ್ಲ, ಸುಪ್ರೀಂಕೋರ್ಟ್‌ನಲ್ಲೇ ಇತ್ಯರ್ಥ ಪಡಿಸಲಾಗುವುದು ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು. ಇದಕ್ಕೂ ಮುಂಚೆ ವಾದ ಮಂಡಿಸಿದ ನಾರಿಮನ್, ಆರಂಭದಿಂದಲೂ ತಮಿಳುನಾಡಿನ ನಡೆಯನ್ನು ಕರ್ನಾಟಕ ವಿರೋಧಿಸಿದೆ. ಆದರೂ ನ್ಯಾಯಾಧಿಕರಣದಲ್ಲಿ ಕೇವಲ ತಮಿಳುನಾಡಿನ ವಾದಕ್ಕೆ ಮನ್ನಣೆ ಸಿಕ್ಕಿದೆ ಎಂದರು.
ನ್ಯಾಯಾಧಿಕರಣದಲ್ಲಿ ಎರಡೂ ರಾಜ್ಯಗಳ ಮೂಲ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿಲ್ಲ. ತಮಿಳುನಾಡು ಹಳೆಯ ಒಪ್ಪಂದಗಳನ್ನು ಉಲ್ಲಂ ಸಿದೆ. ಒಪ್ಪಂದ ಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದೆ. ನ್ಯಾಯಾಧಿಕರಣ ರಾಜ್ಯದ ಪ್ರಮುಖ ವಾದ ಆಲಿಸಿಲ್ಲ. ಸುಪ್ರೀಂ ಈ ಬಗ್ಗೆ ಗಮನ ಹರಿಸಬೇಕು ಎಂದು ನಾರಿಮನ್ ಹೇಳಿದರು. ಒಂದು ಹಂತದಲ್ಲಿ ನ್ಯಾಯಪೀಠ, ಒಪ್ಪಂದಗಳನ್ನು ನಾವು ಮುರಿದು ಹಾಕುತ್ತೇವೆ. ಬಳಿಕ ನೀರು ಯಾವ ಆಧಾರದ ಮೇಲೆ ಹಂಚಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಭಾರತ ಒಕ್ಕೂಟ ವ್ಯವಸ್ಥೆಯ ದೇಶ, ಎರಡೂ ರಾಜ್ಯಗಳು ನೀರಿಗಾಗಿ ಕಿತ್ತಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿತು. ನಾರಿಮನ್ ವಾದ ಮಂಡನೆ ವೇಳೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ, 1924ರ ಒಪ್ಪಂದ ಮುಂದುವರಿಸಲು ಮನವಿ ಮಾಡಿದರು. ವಿಚಾರಣೆ 15 ದಿನಗಳ ನಡೆಯುವ ಸಾಧ್ಯತೆಯಿದೆ.