Advertisement

Cauvery Dispute; ತಮಿಳುನಾಡಿಗೆ ನೀರು ಬಿಡಲು ಪ್ರಾಧಿಕಾರ ಸೂಚನೆ; ರಾಜ್ಯದಲ್ಲಿ ಭಾರಿ ವಿರೋಧ

06:03 PM Sep 18, 2023 | Team Udayavani |

ಮೈಸೂರು: ತಮಿಳುನಾಡಿಗೆ ಮತ್ತೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚಿಸಿದ್ದು, ರಾಜ್ಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿದೆ.

Advertisement

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಪಾಲಿಸಲು‌ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಬರ ಘೋಷಣೆ‌ ಮಾಡಿದೆ. ಕರ್ನಾಟಕದ ಶೇಕಡ 90ರಷ್ಟು ಭಾಗದಲ್ಲಿ ಬರ ಪರಿಸ್ಥಿತಿಯಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಬರವಿದೆ. ಕುಡಿಯುವ ನೀರಿಗೆ ರಾಜ್ಯದಲ್ಲಿ ಸಮಸ್ಯೆಯಾಗುತ್ತಿದೆ‌‌. 80 ಸಾವಿರ ಎಕರೆಯಲ್ಲಿ ಕಬ್ಬು ಬೆಳೆದಿದ್ದೇವೆ. ಹೀಗಾಗಿ ಪ್ರಾಧಿಕಾರದ ತೀರ್ಪು ಅವೈಜ್ಞಾನಿಕ, ಅವಾಸ್ತವಿಕವಾಗಿದೆ. ತೀರ್ಪು ಕೊಡುವ ಮುನ್ನ ರಾಜ್ಯಕ್ಕೆ ಭೇಟಿ ನೀಡಿ ವಾಸ್ತವತೆ ಪರಿಶೀಲಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Prajwal Revanna: ಸಂಸದ ಸ್ಥಾನದಿಂದ ಅಸಿಂಧು ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ದೆಹಲಿಯಲ್ಲಿ ಮಾಡಿರುವ ತೀರ್ಮಾನ ಏಕಪಕ್ಷೀಯವಾದದ್ದು. ಇದನ್ನು ರಾಜ್ಯ ಸರ್ಕಾರ ಖಡಾಖಂಡಿತವಾಗಿ ತಿಸ್ಕರಿಸಬೇಕು. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಬೇಕು. ಸರ್ವಪಕ್ಷಗಳು ನಿಲುವಿಗೆ ಬದ್ದವಾಗಿರಬೇಕು. ಒಂದು ವೇಳೆ ನೀರು ಬಿಟ್ಟರೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ. ರೈತರೇ ಕಾವೇರಿ ನೀರು ನಿಲ್ಲಿಸವ ಕೆಲಸ ಮಾಡಬೇಕಾಗುತ್ತದೆ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

Advertisement

ಆದೇಶ ಧಿಕ್ಕರಿಸಿ: ಶಾಂತಕುಮಾರ್

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಧಿಕ್ಕರಿಸಬೇಕು, ಯಾವುದೇ ಕಾರಣಕ್ಕೂ ನೀರು ಬಿಡುವ ನಿರ್ಧಾರ ಮಾಡಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ನೀರು ಬಿಡುವುದಿಲ್ಲ ಎನ್ನುವ ತೀರ್ಮಾನ ಕೈಗೊಂಡಿದೆ ನುಡಿದಂತೆ ನಡೆದುಕೊಳ್ಳಬೇಕು. ಇಂದಿನ ಪರಿಸ್ಥಿತಿಯಲ್ಲಿ ಜಲಾಶಯಗಳು ಖಾಲಿಯಾಗಿದೆ, ನೀರು ಬಿಡುವುದಿಲ್ಲ ಎನ್ನುವ ಬದ್ಧತೆಯನ್ನು ತೋರಬೇಕು. ಆದೇಶ ಧಿಕ್ಕರಿಸಬೇಕು. ರಾಜ್ಯದ ಜನರ ಹಿತ ರಕ್ಷಣೆಗಾಗಿ ಸರ್ಕಾರ ಕೆಲಸ ಮಾಡಬೇಕು. ಈಗಾಗಲೇ ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬಲಿಕೊಟ್ಟಾಗಿದೆ. ಮುಂದುವರಿದು ನಗರ ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ಒದಗಿಸಲು ಸಾಧ್ಯವಾಗದೆ ಅವರನ್ನು ಬಲಿ ಕೊಡುವ ಸ್ಥಿತಿ ನಿರ್ಮಾಣ ಮಾಡಬಾರದು ಎನ್ನುವುದನ್ನು ಮರೆಯಬಾರದು ಎಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next