Advertisement

ಕಾವೇರಿ ವಿವಾದ ಬಗೆಹರಿಯದ ಸಮಸ್ಯೆ

12:10 PM Jun 04, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ವಿವಾದ ರಾಜಕೀಯ ಜಟಿಲತೆಗೆ ಸಿಲುಕಿರುವ ಹಿನ್ನೆಲೆಯಲ್ಲಿ ಬಗೆಹರಿಯದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಲೇಖಕ ಬಿ.ಆರ್‌.ಲಕ್ಷ್ಮಣರಾವ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಂಕಿತ ಪುಸ್ತಕ ವತಿಯಿಂದ ನಗರದ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಘವೇಂದ್ರ ಹೆಗಡೆ ಅನುವಾದಿಸಿರುವ “ನಾಳೆಗೂ ಇರಲಿ ನೀರು’, ಚುಟುಕು ಕವಿ ಎಚ್‌.ದುಂಡಿರಾಜ್‌ ಅವರ “ಹನಿ ಮಾರ್ದನಿ’, ಡಾ.ವಿ.ಪಿ.ನಾರಾಯಣ ಅವರು ಸಂಪಾದಿಸಿರುವ “ಬಸವಣ್ಣನ ವಚನಗಳು’, “ಅಕ್ಕನ ವಚನಗಳು’, “ಅಲ್ಲಮನ ವಚನಗಳು’, ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾವೇರಿ ನದಿ ನೀರಿನ ವಿವಾದವನ್ನು ಒಂದು ನೆಲೆಗಟ್ಟಿನಲ್ಲಿ ಬಗೆಹರಿಸಬಹುದಾಗಿತ್ತು. ಆದರೆ, ಇದು ರಾಜಕೀಯ ಸಮಸ್ಯೆಯಾಗಿ ಉಳಿದು ಕೊಂಡಿರುವ ಹಿನ್ನೆಲೆಯಲ್ಲಿ ಕಗ್ಗಂಟಾಗಿದೆ. ನೀರಿನ ನಿರ್ವಹಣೆ ವಿಚಾರದಲ್ಲಿ ಇಸ್ರೇಲ್‌ ಇಡೀ ವಿಶ್ವಕ್ಕೆ ಮಾದರಿ. ಇಸ್ರೇಲ್‌ ಒಂದು ಕಡೆ ಮರುಭೂಮಿಯ ಪ್ರದೇಶವಾಗಿದ್ದರೂ, ನೀರು ನಿರ್ವಹಣೆ ವಿಚಾರದಲ್ಲಿ ಜಾಣ್ಮೆ ತೋರಿದೆ.

ರಾಜಕೀಯದಿಂದ ನೀರು ನಿರ್ವಹಣೆ ಮುಕ್ತವಾಗಿರುವುದೇ ಆ ದೇಶ ಇಷ್ಟೊಂದು ಹೆಸರು ಮಾಡಲು ಸಾಧ್ಯವಾಯಿತು. ಈ ವಿಚಾರನ್ನು ಮನ ಮುಟ್ಟುವ ಹಾಗೇ ಲೇಖಕರು “ನಾಳೆಗೂ ಇರಲಿ ನೀರು’, ಕೃತಿಯಲ್ಲಿ ಹೇಳಿದ್ದಾರೆ. ಇದೀಗ ಇಸ್ರೇಲ್‌ ಮಾದರಿಯ ಕೃಷಿಗೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರು ಮುಂದಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಚುಟುಕು ಕವಿ ದುಂಡಿರಾಜ್‌ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ ಬಿ.ಆರ್‌.ಲಕ್ಷ್ಮಣರಾವ್‌, ಕನ್ನಡ ಸಾರಸ್ವತ ಲೋಕದಲ್ಲಿ ಹನಿಗವನಕ್ಕೆ ಒಂದು ದೊಡ್ಡ ಪರಂಪರೆ ಇದೆ. ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಅವರಿಂದ ಪ್ರೇರಿತರಾಗಿ ಕವಿತೆಗಳನ್ನು ಬರೆಯಲು ಆರಂಭಿಸಿದ ದುಂಡಿರಾಜ್‌, ಹನಿಗವನ ಕ್ಷೇತ್ರದ “ಅಕ್ಷಯ ಪಾತ್ರೆ’ ಎಂದು ವರ್ಣಿಸಿದರು. ಇದೇ ವೇಳೆ, ಲೇಖಕ ಡಾ. ಪಿ.ವಿ. ನಾರಾಯಣ ಅವರ ಬರಹಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಹಾಸ್ಯ ಲೇಖಕ ನರಸಿಂಹ ಮೂರ್ತಿ ಮಾತನಾಡಿ, ಅನುವಾದ ಕಷ್ಟಕರವಾದ ವಿಷಯ. ಆದರೂ, ಇಷ್ಟಪಟ್ಟು ಲೇಖಕರು ಕನ್ನಡಕ್ಕೆ ಒಂದು ಉತ್ತಮ ಅನುವಾದ ಪುಸ್ತಕವನ್ನು ನೀಡಿದ್ದಾರೆ ಎಂದು ರಾಘವೇಂದ್ರ ಹೆಗಡೆ ಅವರ ಕಾರ್ಯವನ್ನು ಪ್ರಶಂಸಿಸಿದರು.ಅಲ್ಲದೆ ಹನಿಗವನ ಕ್ಷೇತ್ರಕ್ಕೆ ದುಂಡಿರಾಜ್‌ ಸ್ಫೂರ್ತಿಯ ಸೆಲೆ ಎಂದು ಶ್ಲಾ ಸಿದರು. ಕಾರ್ಯಕ್ರಮದಲ್ಲಿ ಲೇಖಕರಾದ ರಾಘವೇಂದ್ರ ಹೆಗಡೆ, ಡಾ.ವಿ.ಪಿ.ನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಐವತ್ತನೇ ಪುಸ್ತಕ: “ಹನಿ ಮಾರ್ದನಿ’ ಚುಟುಕು ಕವಿ ಎಚ್‌. ದುಂಡಿರಾಜ್‌ ಅವರ 50ನೇ ಪುಸ್ತಕ. ವಿಶೇಷ ಅಂದರೆ ಉದಯವಾಣಿಯ ಅಂಕಣ ಮಾಲಿಕೆಯಲ್ಲಿ ಪ್ರಕಟವಾಗಿರುವ ದುಂಡಿರಾಜ್‌ ಅವರ ಆಯ್ದ ಚುಟುಕು ಕವಿತೆಗಳ ಗುತ್ಛ ಇದಾಗಿದೆ. ವ್ಯಂಗ, ವಿಡಂಭನೆ, ವಿನೋದದ ಜತೆಗೆ ಚಮತ್ಕಾರ ಈ ಕವಿತೆಗಳಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next