Advertisement

ಸಾತೋಡ್ಡಿ ಜಲಪಾತ: ಪ್ರವಾಸಿಗರು ಜಾಗೃತರಾಗಿರಲು ಮನವಿ

12:32 PM Jul 21, 2023 | Team Udayavani |

ಯಲ್ಲಾಪುರ: ರಾಜ್ಯದ ಪ್ರಸಿದ್ದ ಯಲ್ಲಾಪುರ ತಾಲೂಕಿನ ಸಾತೋಡ್ಡಿ ಜಲಪಾತ ವೀಕ್ಷಣೆಗೆ ಎಗ್ಗಿಲ್ಲದೇ ಪ್ರವಾಸಿಗರು ಬರುತ್ತಿದ್ದಾರೆ.

Advertisement

ಎರಡು-ಮೂರು ದಿನದಿಂದ ಸುರಿದ ಭಾರೀ ಮಳೆಗೆ ಜಲಪಾತ ತುಂಬಿ ಧುಮ್ಮುಕ್ಕುತ್ತಿರುವ ನಯನ ಮನೋಹರ ದೃಶ್ಯ ಮತ್ತೆಲ್ಲೂ ನೋಡ ಸಿಗದು. ಆದರೆ ಸಂತೋಷವೂ ಕೆಲವೊಮ್ಮೆ ಸಂಕಟಕ್ಕೂ ಕಾರಣವಾಗಬಹುದೆಂಬ ಕಾರಣಕ್ಕೆ ಪ್ರವಾಸಿಗರಿಗೆ ಅಲ್ಲಿಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಕೆಲ ಕಿವಿಮಾತು ಹೇಳಿದ್ದಾರೆ.

ಸಾತೊಡ್ಡಿ ಸುತ್ತ-ಮುತ್ತ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಬೀಳುತ್ತಿದ್ದು, ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ಜಲಪಾತ ನೋಡಲು ಬಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂದು ಕುಂಬ್ರಾಳ ಕಂಚನಗದ್ದೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ ಪ್ರವಾಸಿಗರಲ್ಲಿ ವಿನಂತಿ ಮಾಡಿದ್ದಾರೆ.

ಜಲಪಾತದಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ಪ್ರವಾಸಿಗರು ನೀರಿಗಿಳಿಯುವ ಸಾಹಸ ಮಾಡಬಾರದು. ಜಲಪಾತಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ಗುಡ್ಡ ಕುಸಿಯುವ ಭೀತಿ ಇರುವ ಕಾರಣ ಪ್ರವಾಸಿಗರು ಎಚ್ಚರ ವಹಿಸುವುದು ಅಗತ್ಯ. ಜಲಪಾತ ವೀಕ್ಷಣೆಗೆ ಹೋದವರು ಹೆಚ್ಚು ಸಮಯ ಅಲ್ಲಿ ಕಳೆಯದೇ, ನೋಡಿದ ತಕ್ಷಣ ವಾಪಸಾಗುವಂತೆ ಪ್ರವಾಸಿಗರಲ್ಲಿ ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next