Advertisement

ಆ್ಯಪ್‌ ಅಪ್‌ಡೇಟ್‌ಗೂ ಮೊದಲು ಎಚ್ಚರ : ಹಣ ದೋಚುವ ಗ್ಯಾಂಗ್

11:18 AM Jan 15, 2022 | Team Udayavani |

ಬೆಂಗಳೂರು: ಬಿಎಸ್‌ಎಫ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆಗಾಗಿ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಎರಡು ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ದಾಸರಹಳ್ಳಿ ನಿವಾಸಿ ಅಖೀಲೇಶ್ವರ ಮಣಿ ತ್ರಿಪಾಠಿ ಎಂಬುವರು ಅಪರಿಚಿತ ವ್ಯಕ್ತಿಯ ವಿರುದ್ಧ ದಕ್ಷಿಣ ವಿಭಾಗ ಸೆನ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ಅ.29ರಂದು ಅಪರಿಚಿತರ ವ್ಯಕ್ತಿಯೊಬ್ಬ ಮೂರು ಪ್ರತ್ಯೇಕ ನಂಬರ್‌ಗಳಿಂದ ಕರೆ ಮಾಡಿ, “ನಾವು ಬಿಎಸ್‌ಎಫ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಯಾಂಪಸ್‌ನಲ್ಲಿರುವ ಸೈನಿಕರಿಗೆ ವೈದ್ಯಕೀಯ ತಪಾಸಣೆ ನಡೆಸಬೇಕಿದೆ. ಹೀಗಾಗಿ ಪ್ರತಿ ಸಿಬ್ಬಂದಿ ವೈದ್ಯಕೀಯ ತಪಾಸಣೆಗೆ ಎರಡು ಸಾವಿರ ರೂ. ನಿಧಿ ಸಂಗ್ರಹಿಸುತ್ತಿದ್ದೇವೆ’ ಎಂದು ನಂಬಿಸಿದ್ದಾರೆ. ಬಳಿಕ ಫೋನ್‌ ಪೇ ಅಪ್‌ಡೇಟ್‌ ಮಾಡಿ ಎಂದು ತ್ರಿಪಾಠಿ ಅವರಿಂದ ಅಪ್‌ಡೇಟ್‌ ಮಾಡಿಸಿ ಒಟಿಪಿ ಹಾಕುತ್ತಿದ್ದಂತೆ 2,09,993 ರೂ. ಕಡಿತಗೊಂಡಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸರ್ಕಾರದಿಂದ ವೇತನ ಕೊಡಿಸುವುದಾಗಿ ವಂಚನೆ

ಅನುದಾನಿತ ಕಾಲೇಜ್‌ ಆಗಿ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದಲೇ ವೇತನ ಕೊಡಿಸುವುದಾಗಿ ಕಾಲೇಜಿನ ನೌಕರರಿಂದ ಅಕ್ರಮವಾಗಿ 78 ಲಕ್ಷ ರೂ. ಸಂಗ್ರಹಿಸಿ ವಂಚಿಸಿದ ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವುಮೆನ್‌ ಕಾಲೇಜಿನ ಮಾಜಿ ಗವರ್ನಿಂಗ್‌ ಕೌನ್ಸಿಲ್‌ ಚೇರ್ಮನ್‌ ವಿರುದ್ಧ ಸುದ್ದುಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೌಸಿಯಾ ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ಟ್ರಸ್ಟ್‌ನ ಅಧ್ಯಕ್ಷ ಡಾ.ಅಹ ಮದ್‌ ಶರೀಫ್‌ ಸಿರಾಜ್‌ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ಗೌಸಿಯಾ ಪಾಲಿಟೆಕ್ನಿಕ್‌ ಫಾರ್‌ ವುಮೆನ್‌ ಕಾಲೇಜಿನ ಗವರ್ನಿಂಗ್‌ ಕೌನ್ಸಿಲ್‌ನ ಮಾಜಿ ಚೇರ್ಮನ್‌ ಸುಭಾನ್‌ ಶರೀಫ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಸುಭಾನ್‌ ಶರೀಫ್‌ 2013 ರಿಂದ 2018ರ ವರಗೆ ಕಾಲೇಜಿನ ಅಧ್ಯಕ್ಷರಾಗಿದ್ದು, ನೌಕರರಿಗೆ ವೇತನ ಕೊಡದೇ ಕಾಲ ದೂಡಿ ದ್ದಾರೆ ಎಂದು ದೂರಿನಲ್ಲಿ ಶರೀಫ್ ಸಿರಾಜ್‌ ಆರೋಪಿ ಸಿದ್ದಾರೆ. ಪ್ರಕರಣದಲ್ಲಿ ಗೊಂದಲಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್‌ಗೆ ನುಗಿ ದರೋಡೆ 

ಸಿನಿಮೀಯ ಶೈಲಿಯಲ್ಲಿ ಬ್ಯಾಂಕಿಗೆ ನುಗ್ಗಿ ಮ್ಯಾನೇಜರ್‌ಗೆ ಚಾಕು ತೋರಿಸಿ 4ಲಕ್ಷ ರೂ. ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಡಿವಾಳದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಶುಕ್ರವಾರ ಬ್ಯಾಂಕಿನಲ್ಲಿ ಮ್ಯಾನೇಜರ್‌ ಕಾರ್ಯನಿರ್ವಹಿಸು ತ್ತಿದ್ದಾಗ ಒಳ ನುಗ್ಗಿದ ಆರೋಪಿ ಏಕಾಏಕಿ ಮ್ಯಾನೇಜರ್‌ ಕೊಠಡಿಗೆ ನುಗ್ಗಿದ್ದಾನೆ. ಬಳಿಕ ಹಣ ನೀಡುವಂತೆ ತಾಕೀತು ಮಾಡಿದ್ದಾನೆ. ಬಳಿಕ ಬ್ಯಾಂಕಿನಲ್ಲಿದ್ದ 4 ಲಕ್ಷ ರೂ.ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಮಡಿವಾಳ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸುತ್ತಿದ್ದಾ ರೆ. ದರೋಡೆಕೋರನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next