Advertisement
ವಾಟ್ಸ್ ಆ್ಯಪ್ ಪ್ರೇರಣೆಸುಳ್ಯ ತಾಲೂಕಿನ ಬಾಳಿಲದ ಪ್ರಗತಿಪರ ಕೃಷಿಕ ನೆಟ್ಟಾರು ಗೋಪಾಲಕೃಷ್ಣ ಭಟ್ಟರ ಪತ್ನಿ ವಿಜಯಕುಮಾರಿ ವಾಟ್ಸ್ ಆ್ಯಪ್ ಗ್ರೂಪ್ ಒಂದರಲ್ಲಿ ಬಂದ ಸಂದೇಶವೊಂದರಿಂದ ಪ್ರೇರಿತರಾಗಿ ಕ್ಯಾಬೇಜ್ ಮತ್ತು ಹೋಕೋಸು ಬೆಳೆಯನ್ನು ತನ್ನ ಮನೆಯಲ್ಲೂ ಬೆಳೆಯುವ ಉತ್ಸಾಹ ತೋರಿ ಯಶಸ್ಸು ಕಂಡವರು. ಬೆಟ್ಟಂಪಾಡಿ ಹರಿಕೃಷ್ಣ ಕಾಮತ್ ಅವರ ಮನೆಯಿಂದ ಈ ಎರಡೂ ಬೆಳೆಗಳ ತರಕಾರಿ ಬೀಜಗಳನ್ನು ತಂದು ಕೃಷಿ ಆರಂಭಿಸಿದ್ದರು.
ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳಾದ ಇವುಗಳನ್ನು ಋತುಮಾನಕ್ಕೆ ತಕ್ಕಂತೆ ನವೆಂಬರ್ ತಿಂಗಳ ಮೊದಲ ವಾರ ಬಿತ್ತನೆ ಮಾಡಿದರು. ಮೊದಲ ಪ್ರಯೋಗವಾದ ಕಾರಣ ತಲಾ 15 ಬೀಜಗಳನ್ನು ಮಾತ್ರ ಬಿತ್ತನೆ ಮಾಡಿದರು. ಇವುಗಳ ಪೈಕಿ 5 ಕ್ಯಾಬೇಜು ಹಾಗೂ 10 ಹೂಕೋಸು ಗಿಡಗಳು ಸೊಂಪಾಗಿ ಬೆಳೆದವು. ಕೆಂಪು ಮಣ್ಣು, ಮರಳು, ಸುಡುಮಣ್ಣಿನ ಮಿಶ್ರಣದಲ್ಲಿ ಬೆಳೆಸಿದ ಈ ಗಿಡಗಳಿಗೆ ಪ್ರತಿನಿತ್ಯ ನೀರಿನ ಜೊತೆ ಹುಳಿ ಬರಿಸಿದ ಬೇವಿನ ಹಿಂಡಿ, ಸೆಗಣಿ ನೀರಿನಿಂದ ಶುದ್ಧ ಸಂಪೂರ್ಣ ಸಾವಯವ ಪೋಷಣೆ ನೀಡಿದ್ದಾರೆ. ಸಿದ್ಧವಾಗಿದೆ ಬೆಳೆ
ಸಾವಯವ ಪೋಷಣೆಯಿಂದ ಬೆಳೆದ ಗಿಡದಲ್ಲಿ ಮೂರೇ ತಿಂಗಳಲ್ಲಿ ಹೂಕೋಸು ಮತ್ತು ಕ್ಯಾಬೇಜ್ ಬೆಳೆದು ಕೊಯ್ಯಲು ಸಿದ್ಧವಾಗಿದೆ. ಈ ತಿಂಗಳಲ್ಲಿ ಬಾಳಿಲದ ವಿಜಯ ಕುಮಾರಿಯವರ ಮನೆಗೆ ಭೇಟಿ ನೀಡುವ ಆಸಕ್ತ ಕೃಷಿಕರಿಗೆ ಸಾವಯವವಾಗಿ ಬೆಳೆಸಿದ ಹೂಕೋಸಿನಿಂದ ಮಾಡಿದ ಖಾದ್ಯಗಳನ್ನು ಸವಿಯುವ ಭಾಗ್ಯ ಸಿಗಲಿದೆ.
Related Articles
ಕರಾವಳಿಯ ಹವಾಮಾನಕ್ಕೆ ಒಗ್ಗದ ಹೂಕೋಸು ಮತ್ತು ಕ್ಯಾಬೇಜ್ ನಮ್ಮ ಮನೆಯಂಗಳದಲ್ಲಿ ಸೊಂಪಾಗಿ ಬೆಳೆದು ಫಲ ನೀಡಿರುವುದು ಖುಷಿ ತಂದಿದೆ. ಮೊದಲ ಪ್ರಯೋಗವಾದ ಕಾರಣ ಸೀಮಿತ ಮಟ್ಟಕ್ಕೆ ಬೆಳೆ ಸಿಕ್ಕಿದೆ.
– ವಿಜಯಕುಮಾರಿ , ಗೃಹಿಣಿ
Advertisement
ಉಮೇಶ್ ಮಣಿಕ್ಕಾರ