Advertisement

ನಾಲ್ವರ ಮೇಲೆ BMW ಕಾರು ಹರಿಸಿದ ಮಹಿಳೆ: ಅಪಘಾತಕ್ಕೆ ನಾಯಿಯೇ ಕಾರಣ ಎಂದು ಸಬೂಬು !

04:04 PM Aug 02, 2020 | Mithun PG |

ನವದೆಹಲಿ: ನಾಲ್ವರ ಮೇಲೆ 29 ವರ್ಷದ ಮಹಿಳೆಯೊಬ್ಬರು ಬಿಎಂಡಬ್ಲ್ಯೂ ಕಾರು ಹರಿಸಿದ ಘಟನೆ ದಕ್ಷಿಣ ದೆಹಲಿಯಲ್ಲಿ ಜುಲೈ 31ರ ಶುಕ್ರವಾರ ರಾತ್ರಿ ನಡೆದಿದೆ.

Advertisement

ಕಾರು ಹರಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದು, ಲಜ್ ಪತ್ ನಗರದ ಅಮರ್ ಕಾಲೋನಿಯಲ್ಲಿ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ.

ಅಪಘಾತವಾದ ಕೂಡಲೇ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಆಕೆಯನ್ನು ರೋಶ್ನಿ ಆರೋರ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಈಕೆ ಫ್ಯಾಷನ್ ಡಿಸೈನರ್ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಐಸ್​ಕ್ರೀಂ ತಿನ್ನಲೆಂದು ಕಾರನ್ನು ನಿಲ್ಲಿಸಿದ್ದು, ಕಾರಿನಲ್ಲಿ ನನ್ನೊಂದಿಗೆ ಸಾಕು ನಾಯಿ ಕೂಡ ಇತ್ತು. ಅದು ಏಕಾಏಕಿ ನನ್ನ ಮೇಲೆ ಎಗರಿದ ಪರಿಣಾಮ ಗಾಬರಿಯಲ್ಲಿ ಬ್ರೇಕ್​ ಪೆಡಲ್​ ಬದಲು ಕಾರಿನ ಆ್ಯಕ್ಸಿಲೇಟರ್​ ಒತ್ತಿದೆ. ಹೀಗಾಗಿ ಅಪಘಾತವಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

Advertisement

ಅಪಘಾತದ ಸಂದರ್ಭದಲ್ಲಿ ಐಷರಾಮಿ ಕಾರು ಎದುರಿಗಿದ್ದ ಐಸ್​ಕ್ರೀಂ ಗಾಡಿಗೆ ಜೋರಾಗಿ ಗುದ್ದಿದ್ದು, ಗಾಡಿಯು ಅನತಿ ದೂರದವರೆಗೆ ಸಾಗಿ ಬಳಿಕ ಪಲ್ಟಿ ಹೊಡೆದಿದೆ. ಐಸ್​ಕ್ರೀಂ ಗಾಡಿಯ ಮಾಲೀಕ ಸೇರಿ ಅದರ ಸುತ್ತ ನಿಂತಿದ್ದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದೆ.

ತಕ್ಷಣವೇ ಅರೋರಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅವರು ಮದ್ಯಪಾನ ಮಾಡಿರಲಿಲ್ಲ ಎಂಬುದು ಖಚಿತವಾಗಿದೆ. ಹಾಗಾಗಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಆಗ್ನೇಯ ದೆಹಲಿಯ ಡಿಸಿಪಿ ಆರ್​.ಪಿ. ಮೀನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next