ಕೊರಟಗೆರೆ: ರೈತರ ಜಾನುವಾರುಗಳನ್ನು ಕದ್ದು ನೇರ ಕಸಾಯಿ ಖಾನೆಗೆ ಮಾರಾಟ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಮಾಲು ಸಹಿತ ಬಂಧಿಸುವಲ್ಲಿ ಕೋಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಕಳವು ಮಾಡಲಾಗಿದ್ದ 10 ಜಾನುವಾರುಗಳ ಜಾಡು ಹಿಡಿದ ಕೊರಟಗೆರೆ ಪೊಲೀಸ್ ತಂಡ 3 ಜನ ಅಂತರ್ ಜಿಲ್ಲಾ ಕಳ್ಳರನ್ನ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ವಿಜಯನಗರದ ಮೂರನೇ ಬ್ಲಾಕ್ ನ ಸೈಯದ್ ಜಬಿ, ಚಿಕ್ಕಬಳ್ಳಾಪುರ ವಿಜಯಪುರ ಟೌನ್ ನ ಅಬ್ಜದ್ ಪಾಷಾ, ಚಿಕ್ಬಳ್ಳಾಪುರ ಶಿಡ್ಲಘಟ್ಟ ಟೌನ್ನ ನಾಸಿರ್ ಖಾನ್ ಎಂಬುವವರು ಬಂಧಿತ ಅಂತರ್ ಜಿಲ್ಲಾ ಕಳ್ಳರಾಗಿದ್ದಾರೆ.
ಕೋಳಾಲ ಸರಹದ್ದಿನ ಗೋಕುಲ ಗ್ರಾಮದ ದಿನೇಶ್ ಎಂಬ ರೈತನ 2 ಸೀಮೆ ಹಸುಗಳು, ಮಧ್ಯ ವೆಂಕಟಾಪುರ ರಾಜು ಎಂಬುವರ 2 ಸೀಮೆ ಹಸುಗಳು, ಲಕ್ಕೈನ್ ಪಾಳ್ಯದ ಲಕ್ಷ್ಮಯ್ಯನ 1 ಹಸು, ಮೂಡ್ಲುಪಾಳ್ಯ ಸುಬ್ರಾಯರ 1 ಹಸು, ತಿಮ್ಮಸಂದ್ರ ಹರ್ಷವರ್ಧನನ 2 ಹಸುಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ರೈತರ ಜಾನುವಾರುಗಳ ಸರಣಿ ಕಳ್ಳತನ ಇತ್ತೀಚೆಗೆ ಕೊರಟಗೆರೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಅದರ ಜಾಡು ಹಿಡಿದು ಹೊರಟ ತಂಡ 2.5 ಲಕ್ಷರು ನಗದು ಹಾಗೂ ಅದಕ್ಕೆ ಬಳಸುತ್ತಿದ್ದ ಇನ್ನಿತರ ವಸ್ತುಗಳ ಸಹಿತ ಸೆರೆಹಿಡಿದಿದ್ದಾರೆ.
ಕೊರಟಗೆರೆ ಕೋಳಾಲ ಸರಹದ್ದಿನಲ್ಲಿ ಇತ್ತೀಚಿಗೆ ರೈತರ ರಾಸುಗಳು ರಾತ್ರಿ ವೇಳೆ ಸರಣಿ ಕಳ್ಳತನ ನೆಡೆಯುತಿದ್ದದ್ದು ಪೊಲೀಸ ರಿಗೆ ತಲೆ ನೋವಾಗಿ ಪರಿಣಮಿಸಿ ಇದರ ಜಾಡು ಹಿಡಿದ ಪೊಲೀಸ್ ತಂಡಕ್ಕೆ ಅಂತರ್ ಜಿಲ್ಲಾ ಕಳ್ಳರು ಸಿಕ್ಕಿ ಬಿದ್ದಿದ್ದು ಕೊರಟಗೆರೆ ಸರಹದ್ದು ಸೇರಿದಂತೆ ಜಿಲ್ಲೆಯ ಹಲವೆಡೆ ಕಳ್ಳತನದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಟಾಟಾ ಎಸಿ ಹಾಗೂ ಟೆಂಪೋ ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾತ್ರಿ ವೇಳೆ ಒಂಟಿ ಮನೆ ಹಾಗೂ ತೋಟದ ಮನೆಗಳ ಬಳಿ ಕಟ್ಟಲಾದ ರಾಸುಗಳನ್ನು ವಾಹನಗಳ ಮೂಲಕ ಕಸಾಯಿ ಖಾನೆಗೆ ಸಾಗಿಸಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮುಸ್ತಿನಲ್ಲಿ ತೊಡಗುತ್ತಿದ್ದರು ಎನ್ನಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ವಾಡ್ ಅಡಿಷನಲ್ ಎಸ್ಪಿ ಉದೇಶ್, ಡಿವೈ ಎಸ್ ಪಿ ರಾಮಕೃಷ್ಣ.ಕೆ.ಜಿ ಮಾರ್ಗದರ್ಶನದಂತೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಕೋಳಾಲ ಪಿಎಸ್ ಐ ಮಹಾಲಕ್ಷ್ಮಮ್ಮಹೆಚ್ ಎನ್ ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ಮೋಹನ್ ಕುಮಾರ್, ಮಂಜುನಾಥ್ ಆರ್ ಪಿ, ಮಧುಕುಮಾರ್ ತಾಂತ್ರಿಕ ಸಿಬ್ಬಂದಿಗಳಾದ ನರಸಿಂಹರಾಜು ಅವರ ತಂಡ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.