Advertisement
ತುಮಕೂರು: ದೇಸಿಯ ತಳಿಯ ಹಸು, ಎತ್ತುಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಒಂದೇ ಬಾರಿಸಾವಿರಾರು ದೇಸಿಯ ತಳಿಯ ಹಸು, ಎತ್ತುಗಳ ಜಾತ್ರೆ ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದು,ಮಠದ ಸುತ್ತ ಎಲ್ಲಿ ನೋಡಿದರೂ ಹಸು, ಎತ್ತುಗಳನಡುವೆ ರೈತರ ಸಂಭ್ರಮ ಮನೆ ಮಾಡಿದೆ.
Related Articles
Advertisement
ಸುಡು ಬಿಸಿಲ ಬೇಗೆ ಏರುತ್ತಿರುವಂತೆಯೇ ಜಾನುವಾರುಗಳಿಗೆ ನೆರಳು, ವಿದ್ಯುತ್, ಕುಡಿವ ನೀರು,ಆರೋಗ್ಯ ತಪಾಸಣೆ ಹಾಗೂ ಸಂಜೆವೇಳೆ ಮನರಂಜನೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಜಾತ್ರೆಗೆ ಬರುವ ಎಲ್ಲರಿಗೆ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮಠದ ಸುತ್ತ ಇರುವ ಈ ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನುಕೊಳ್ಳುವುದು, ಮಾರು ವುದು ಕಂಡುಬರುತ್ತದೆ. 50 ಸಾವಿರದಿಂದ 10 ಲಕ್ಷ ಬೆಲೆಬಾಳುವ ರಾಸುಗಳು ಸೇರಲಿವೆ.ಒಂದೊಂದು ಜೋಡಿ ರಾಸುಕೊಳ್ಳಲು ರೈತರು ಬಹುದೂರದಿಂದ ಬರುತ್ತಾರೆ. ಉತ್ತಮರಾಸುಗಳಿಗೆ ಬಹುಮಾನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಜತೆಗೆ ಶ್ರೀ ಸಿದ್ಧಗಂಗಾ ಜಾತ್ರೆ ರೈತರಿಗೆ ಹೆಚ್ಚು ಸುರಕ್ಷತೆಯಿಂದ ಕೂಡಿದೆ. ದೇಸಿಯ ತಳಿಗಳುಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಕೋವಿಡ್ ಕಾಲದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿ ಈ ದನಗಳ ಜಾತ್ರೆಗೆ ಮೆರಗು ನೀಡಿವೆ.
ಜಾತ್ರೆಗೆ ಆಂಧ್ರಪ್ರದೇಶ ತ.ನಾಡಿನಿಂದಲೂ ಆಗಮನ :
ಈ ವರ್ಷವೂ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರಾಸುಗಳು ಬಂದಿವೆ. 8 ಲಕ್ಷ ಮೇಲ್ಪಟ್ಟು ಬೆಲೆ ಬಾಳುವ ರಾಸುಗಳು ಈಗಾಗಲೇ ಬಂದಿವೆ. ಹಳ್ಳಿಕಾರ್ ತಳಿ ಎತ್ತುಗಳನ್ನು ಖರೀದಿಸಲು ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿತ್ರದುರ್ಗ, ಕಲಬುರಗಿ, ರಾಯಚೂರು, ಬಳ್ಳಾರಿ,ಗದಗ, ಬಿಜಾಪುರ, ದಾವಣಗೆರೆ ಭಾಗದಿಂದಲೂರೈತರು ಬರುತ್ತಿದ್ದಾರೆ. ನೆರೆಯ ರಾಜ್ಯಗಳಾದಆಂಧ್ರಪ್ರದೇಶ, ತಮಿಳುನಾಡು ಮೊದಲಾದಕಡೆಗಳಿಂದಲೂ ರೈತರು ಎತ್ತಿನ ಜಾತ್ರೆಗೆ ಬರುವುದು ಈ ಹಿಂದಿನಿಂದಲೂ ರೂಢಿಯಲ್ಲಿದೆ. ಮಂಗಳವಾರಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಸೇರುತ್ತಿವೆ. ರಾಸುಗಳನ್ನು ಕೊಳ್ಳಲು, ಮಾರಲು ಉತ್ತಮ ಅವಕಾಶವಿದೆ.
ಮಠದಲ್ಲಿ ನಿರಂತರ ದಾಸೋಹ :
ಕೋವಿಡ್ ಮಹಾಮಾರಿಯಿಂದ ಜನ ಸಂಕಷ್ಟ ಅನುಭವಿಸಿ ಈಗ ಚೇತರಿಸಿಕೊಳ್ಳುತ್ತಿದ್ದು, ಜಾತ್ರೆ, ಉತ್ಸವಗಳು ಎಂದಿನಂತೆ ಪ್ರಾರಂಭವಾಗುತ್ತಿವೆ. ಸಿದ್ಧಗಂಗಾ ಜಾತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿಯೂರಾಸುಗಳು ಸೇರಲಾರಂಭಿಸಿವೆ ಜಾತ್ರೆಯಲ್ಲಿ ರೈತರಿಗೆ ಅನುಕೂಲವಾಗುವಂತೆ, ಮಠದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮನರಂಜನೆಗಾಗಿ ಕೃಷಿ ಮತ್ತು ವಿಜ್ಞಾನ ವಸ್ತುಪ್ರದರ್ಶನವೂ ಆರಂಭಗೊಂಡಿದ್ದು, ಶ್ರೀಮಠದಲ್ಲಿ ಎಲ್ಲಾ ಭಕ್ತರಿಗೆ, ರೈತರಿಗೆ ದಾಸೋಹ ನಿರಂತರವಾಗಿ ನಡೆಯುತ್ತಿದೆ.
ಸೀಮೆ ಹಸುಗಳನ್ನು ಸಾಕಲು ಜನ ಮುಂದಾಗಿರುವ ಹಿನ್ನೆಲೆಯಲ್ಲಿ ನಮ್ಮ ನಾಟಿ ಹಸುಗಳು, ಎತ್ತುಗಳ ಸಂಖ್ಯೆಕಡಿಮೆಯಾಗುತ್ತಿದೆ. ನಮ್ಮ ತಂದೆ ಕಾಲದಿಂದಲೂ ಸಿದ್ಧಗಂಗಾಮಠದ ಜಾತ್ರೆಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದು ಪ್ರತಿ ವರ್ಷಬಹುಮಾನ ಬಂದಿದೆ. ನಮ್ಮ ರಾಜ್ಯದಲ್ಲೇ ಎತ್ತುಗಳ ದೊಡ್ಡ ಜಾತ್ರೆ ಆಗಿದ್ದು ಸಿದ್ಧಗಂಗಾ ಶ್ರೀಗಳು ಅಗತ್ಯ ಸೌಕರ್ಯ ಒದಗಿಸಿದ್ದಾರೆ. – ರಾಮಣ್ಣ, ಸಿದ್ದರಾಮಣ್ಣ ಅಗಳಿ
-ಚಿ.ನಿ.ಪುರುಷೋತ್ತಮ್