Advertisement

ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ: ಮಹಿಳಾ ದಿನಾಚರಣೆ

01:00 AM Mar 04, 2019 | Team Udayavani |

ಮಂಗಳೂರು: ತಾಯಂದಿರು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ದೇಶಾಭಿಮಾನ ಮತ್ತು ದೇಶ ಪ್ರೇಮದ ಬೀಜವನ್ನು ಬಿತ್ತಬೇಕು ಎಂದು ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಹೇಳಿದರು. 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ, ನಾವೆಲ್ಲ ಮಹಿಳೆಯರು ಒಟ್ಟಾಗಿ ನಮ್ಮ
ಸಮುದಾಯವನ್ನು ಸದೃಢ‌ಗೊಳಿಸೋಣ’ ಎಂಬ ಧ್ಯೇಯದೊಂದಿಗೆ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ ವತಿಯಿಂದ ರವಿವಾರ ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್‌ ಹೌಸ್‌ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಅವರು ಉದ್ಘಾಟಿಸಿ ಆಶೀರ್ವಚನವಿತ್ತರು. 

Advertisement

ಮಹಿಳೆಯರು ಮೊದಲು ತಾವು ಸದೃಢರಾಗಲು ಸಿಕ್ಕ ಅವಕಾಶಗಳ‌ನ್ನು ಉಪಯೋಗಿಸಬೇಕು ಎಂದ ಅವರು, ಸ್ತ್ರೀ ಮತ್ತು ಪುರುಷ ಇಬ್ಬರೂ ಸಮಾನರು, ಅವರೊಳಗೆ ತಾರತಮ್ಯ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೌಢ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಫಿಲೋಮಿನಾ ಲೋಬೊ ಅವರು, ಮಹಿಳೆಯರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ ಧೈರ್ಯದಿಂದ ಮುನ್ನ°ಡೆದು ಸಮುದಾಯವನ್ನು ಹೇಗೆ ಸದೃಢಗೊಳಿಸಬಹುದು ಎಂಬುದನ್ನು ವಿವರಿಸಿದರು. ಯೇನಪೊಯ ಮೆಡಿಕಲ್‌ ಕಾಲೇಜಿನ ಪ್ರೊಫೆಸರ್‌ ಡಾ| ಪ್ರಭಾ  ಅಧಿಕಾರಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. 

ಸಾಧಕಿಯರಿಗೆ ಸಮ್ಮಾನ
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಸ್ಟಮ್ಸ್‌ ಇಲಾಖೆಯಲ್ಲಿ ಹುದ್ದೆಯನ್ನು ಪಡೆದುಕೊಂಡ ಹ್ಯಾಮ್ಲಿನ್‌ ಡಿ’ಸೋಜಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹಲವು ಪದಕಗಳನ್ನು ಗೆದ್ದ ಆ್ಯಗ್ನೆಸ್‌ ಸಲ್ಡಾನ್ಹಾ ಅವರನ್ನು ಬಿಷಪ್‌ ಸಮ್ಮಾನಿಸಿದರು. ಕೆಥೋಲಿಕ್‌ ಸಭಾದ ಕಾರ್ಯದರ್ಶಿ ಸೆಲೆಸ್ತಿನ್‌ ಡಿ’ಸೋಜಾ ಮುಖ್ಯ ಅತಿಥಿಗಳನ್ನು, ಕೋಶಾಧಿಕಾರಿ ವಿವಿಡ್‌ ಡಿ’ಸೋಜಾ ಸಮ್ಮಾನಿತರನ್ನು ಹಾಗೂ ಮಾಜಿ ಅಧ್ಯಕ್ಷೆ ಫ್ಲೆàವಿ ಡಿ’ಸೋಜಾ ಅವರು ಡಾ| ಪ್ರಭಾ ಅಧಿಕಾರಿ ಅವರನ್ನು ಪರಿಚಯಿಸಿದರು. ಸಮ್ಮಾನಿತರ ಪರವಾಗಿ ಹ್ಯಾಮ್ಲಿÉನ್‌ ಡಿ’ಸೋಜಾ ಮಾತನಾಡಿದರು. 

ಫಾ| ಆಕ್ವಿನ್‌ ಬಲಿ ಪೂಜೆಯನ್ನು ನೆರವೇರಿಸಿದರು. ಸಂಚಾಲಕಿ ಐಡಾ ಫುರ್ಟಾಡೊ ಸ್ವಾಗತಿಸಿ, ಅಧ್ಯಕ್ಷ ರೋಲ್ಫಿ ಡಿ’ಕೋಸ್ತಾ ಪ್ರಸ್ತಾವನೆಗೈದರು. ಸಹ ಸಂಚಾಲಕಿ ನೊರಿನ್‌ ಪಿಂಟೊ ವಂದಿಸಿದರು. ಡಾ| ಟ್ರೀಜಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಕೆಥೋಲಿಕ್‌ ಸಭೆಯ 11 ವಲಯಗಳ ಸ್ತ್ರೀ ಹಿತಾ ಸಮಿತಿಗಳ ಸಂಚಾಲಕಿಯರು ಉಪಸ್ಥಿತರಿದ್ದರು.  

ಶ್ರದ್ಧಾಂಜಲಿ
ದೇಶ ರಕ್ಷಣೆಗಾಗಿ ತಮ್ಮ ಜೀವವನ್ನು ಸಮರ್ಪಿಸಿದ ಸೈನಿಕರಿಗೆ ಮೊಂಬತ್ತಿ ಬೆಳಗಿಸಿ, ಹೂವನ್ನು ಸಮರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾ ಯಿತು. ಬಿಷಪ್‌ ಅವರು ಶ್ರದ್ಧಾಂಜಲಿಯ ಮಾತುಗಳನ್ನು ಆಡಿದರು. ಮಾಜಿ ಸೈನಿಕ ವಿಕ್ಟರ್‌ ರೊಸಾರಿಯೊ ಕೊರೆಯಾ ಸೈನ್ಯದಲ್ಲಿ ತಮ್ಮ ಜೀವನದ ಅನುಭವಗಳನ್ನು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next