ನೇಮಕ ಮಾಡಿದ ಆದೇಶವನ್ನು ಓದಿದ ಬಳಿಕ ನೂತನ ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Advertisement
ಕಾರ್ಯದರ್ಶಿ ವಂ| ಜೆರಾಲ್ಡ್ ಡಿ’ಸೋಜಾ ಅವರು ಮಂಡಳಿಯ ಕಡತಗಳನ್ನು ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ವಂ| ಶೇರಾ ಮಾತನಾಡಿ, ಈ ಸಂಸ್ಥೆಯಲ್ಲಿ ಹಿಂದೆ ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವೆ. ಆದರೆ 30 ವರ್ಷಗಳ ಹಿಂದಿನ ಪರಿಸ್ಥಿತಿ ಈಗಿಲ್ಲ. ಪ್ರಸ್ತುತ ಆಡಳಿತವನ್ನು ನಡೆಸುವುದು ಅಷ್ಟು ಸುಲಭವಲ್ಲ. ಹಿರಿಯರು ನನ್ನ ಮೇಲಿನ ವಿಶ್ವಾಸದಿಂದ ಈ ಮಹತ್ತರವಾದ ಜವಾಬ್ದಾರಿಯನ್ನು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಂ| ಡೆನಿಸ್ ಮೊರಾಸ್ ಮಾತನಾಡಿ, ಶೇರಾ ಅವರು ಮಂಡಳಿಯ ಒಳ ಹೊರಗು ಬಲ್ಲವರು. ಅನೇಕ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿಯೂ ಅಪಾರ ಅನುಭವ ಹೊಂದಿದ್ದಾರೆ ಎಂದರು. ಆಡಳಿತ ಮಂಡಳಿಯ ಸದಸ್ಯ ವಂ| ಆ್ಯಂಟನಿ ಪ್ರಕಾಶ್ ಮೊಂತೆರೋ ನೂತನ ಕಾರ್ಯದರ್ಶಿಯವರನ್ನು ಪರಿಚಯಿಸಿ ಆಡಳಿತ ಮಂಡಳಿ ಸದಸ್ಯರ ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳ ಪರವಾಗಿ ಶುಭಕೋರಿ ಸಹಕಾರ ನೀಡುವ ಭರವಸೆ ನೀಡಿದರು. ನಿಕಟಪೂರ್ವ ಕಾರ್ಯದರ್ಶಿ ವಂ| ಜೆರಾಲ್ಡ್ ಡಿ’ಸೋಜಾ ಸ್ವಾಗತಿಸಿ, ಆಡಳಿತ ಮಂಡಳಿಯ ಸದಸ್ಯೆ ಡಾ| ಪ್ರಸಿಲ್ಲಾ ಡಿ’ಸೋಜಾ ವಂದಿಸಿದರು. ಪದುವಾ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಫ್ರಾನ್ಸಿಸ್ ಡಿ’ಕುನ್ಹಾ ನಿರ್ವಹಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಕೆಥೋಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೆ 8 ಕಾಲೇಜುಗಳು, 11 ಪಿ.ಯು. ಕಾಲೇಜುಗಳು, 43 ಹೈಸ್ಕೂಲ್ ಗಳು, 74 ಹೈಯರ್ ಪ್ರೈಮರಿ ಸ್ಕೂಲ್ ಗಳು, 24 ಆಂ.ಮಾ. ಶಾಲೆಗಳು ಹಾಗೂ ಕಾಸರಗೋಡು ಜಿಲ್ಲೆಯ 14 ಶಾಲೆಗಳು ಒಳಪಡುತ್ತವೆ.