ಬೀದರ: ಬಡವರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸೇವೆಗಳು ಸುಲಭವಾಗಿ ಲಭಿಸುವಂತಾಗಬೇಕು ಎಂದು ಹಿರಿಯ ಪತ್ರಕರ್ತ, ಮೋಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಶಿವಶರಣಪ್ಪ ವಾಲಿ ಹೇಳಿದರು. ನಗರದ ವಾಲಿಶ್ರೀ ಆಸ್ಪತ್ರೆಯು ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಆರಂಭಿಸಿರುವ ಸುಸಜ್ಜಿತ ಕ್ಯಾಥ್‌ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸೇವಾ ಕ್ಷೇತ್ರಗಳಾಗಿವೆ. ಸೇವಾ
ಮನೋಭಾವ ಇದ್ದವರು, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ತುಡಿತ ಇದ್ದವರು ಈ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಬಹುದು ಎಂದರು.
ಆರೋಗ್ಯ ಸೇವೆಗಳು ತುಟ್ಟಿಯಾಗಿರುವುದರಿಂದ ಬಡವರು ತೊಂದರೆ ಅನುಭವಿಸುವ ಘಟನೆಗಳು ಆಗಾಗ ನಡೆಯುತ್ತಿವೆ. ವಾಲಿಶ್ರೀ ಆಸ್ಪತ್ರೆಯವರು ಬಡವರಿಗೆ ಆದ್ಯತೆ ನೀಡಬೇಕು. ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳು ನಗುಮುಖದೊಂದಿಗೆ ಗುಣಮುಖರಾಗಿ ಮರಳುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಾಲಿಶ್ರೀ ಆಸ್ಪತ್ರೆಯ ಸಿಇಒ ಡಾ| ವಿ.ವಿ. ನಾಗರಾಜ, ಹೃದ್ರೋಗತಜ್ಞ ಡಾ| ಶ್ರೀಕಾಂತರೆಡ್ಡಿ ಅವರು ಕ್ಯಾಥ್‌ಲ್ಯಾಬ್ ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿನ ಸೌಕರ್ಯಗಳು ಮತ್ತು ನೀಡಲಾಗುವ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಹೃದಯ ಸಂಬಂಧಿ ಕಾಯಿಲೆಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಬಹುದು. ದೂರದ, ದೊಡ್ಡ-ದೊಡ್ಡ ನಗರಗಳಿಗೆ ಹೋಗುವ ಕಷ್ಟ ತಪ್ಪಲಿದೆ ಎಂದು ಡಾ| ವಿ.ವಿ ನಾಗರಾಜ್ ಹೇಳಿದರು. ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಸಾಧನಗಳಿವೆ. ಕಿಡ್ನಿಸ್ಟೋನ್ ಸಮಸ್ಯೆಗೆ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಸರ್ಜರಿ ಇಲ್ಲದೆಯೇ ಕಿಡ್ನಿಸ್ಟೋನ್ ನಿವಾರಿಸಬಹುದು ಎಂದು ಯುರೋಲೊಜಿಸ್ಟ್ ಡಾ| ವಿನೋದ ಖೇಳಗಿ ತಿಳಿಸಿದರು.
ನ್ಯೂರೋಸರ್ಜನ್ ಡಾ| ಲಿಂಗರಾಜ ಕಾಡಾದಿ ಮಾತನಾಡಿದರು. ಬೀದರ್ ಮೇಡಿಕಲ್ ಕಾಲೇಜಿನ ನಿರ್ದೇಶಕ ಡಾ| ಚಂದ್ರಕಾಂತ ಚಿಲ್ಲರ್ಗಿ, ಪ್ರಾಚಾರ್ಯ ಡಾ| ರಾಜೇಶ ಪಾರಾ, ವೈದ್ಯಕೀಯ ಅ ದೀಕ್ಷಕ ಶಿವಕುಮಾರ ಶೆಟಕಾರ್ ಅವರು ವಾಲಿಶ್ರೀ ಆಸ್ಪತ್ರೆ ಮತ್ತು ಕ್ಯಾಥ್‌ಲ್ಯಾಬ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಯಾಥ್‌ಲ್ಯಾಬ್, ನ್ಯೂರೋ ಐಸಿಯು, ಲ್ಯಾಪ್ರೊಸ್ಕೋಪಿಕ್ ಘಟಕಗಳನ್ನು ಶಿವಶರಣಪ್ಪ ವಾಲಿ ಮತ್ತು ಶಕುಂತಲಾ ವಾಲಿ ಅವರು ವೀಕ್ಷಿಸಿದರು. ವಾಲಿಶ್ರೀ ಆಸ್ಪತ್ರೆಯ ಚೇರ್‌ಮನ್ ಡಾ| ರಜನೀಶ ವಾಲಿ, ವ್ಯವಸ್ಥಾಪಕ ನಿರ್ದೇಶಕ ಡಾ| ರಾಜಶೇಖರ ಸೇಡಂಕರ್, ಮಲ್ಲಿಕಾರ್ಜುನ ವಾಲಿ, ಅರವಿಂದ ವಾಲಿ, ದೀಪಕ್ ವಾಲಿ, ವಾಲಿಶ್ರೀ ಗ್ರೂಪ್ ಆಫ್ ಕಂಪನೀಸ್ ನಿರ್ದೇಶಕ ಆದೀಶ್ ಆರ್. ವಾಲಿ, ಡಾ| ಖಾಜಾ ಮೈನೋದ್ದಿನ್, ಡಾ| ಪ್ರಸನ್ನ ರೇಷ್ಮೆ, ಡಾ| ಮಹೇಶ ಬಿರಾದಾರ್, ಡಾ| ಮದನಾ ವೈಜನಾಥ, ಡಾ| ಕೃಷ್ಣಾರೆಡ್ಡಿ, ಡಾ| ಸಂಜೀವಕುಮಾರ, ಡಾ| ಅವಿನಾಶ ಬೈರೆ, ಡಾ| ರೋಹಿತ ರಂಜೋಳಕರ್, ಡಾ| ಪ್ರೀತಿ ಬಿರಾದಾರ್, ಡಾ| ಶಿವಲೀಲಾ ಎಕಲೂರೆ, ಡಾ| ಲಾವಣ್ಯ ಸೋಲಪುರೆ, ಡಾ| ಶ್ರೀಕಾಂತ ಚಿಂಚೋಳಿಕರ್, ನ್ಯೂರೋಸರ್ಜನ್ ಡಾ| ಲಿಂಗರಾಜ ಕಾಡಾದಿ, ಯುರೋಲೊಜಿಸ್ಟ್ ಡಾ| ವಿನೋದ ಖೇಳಗಿ, ಡಾ| ಮಲ್ಲಿಕಾರ್ಜುನ ಜಿ.ಎಸ್., ಡಾ| ವಿಶ್ವನಾಥ ಪಾಟೀಲ್, ಡಾ ಸುಪ್ರೀತ್ ಹುಗ್ಗೆ, ಡಾ| ನೀರಜಾ ಅಕ್ಕಿ ಇದ್ದರು.