Advertisement

‘ಎಲ್ಲರೂ ಓಟ್‌ ಮಾಡಿ ಆದರೆ ಹೊಸ ಪ್ರಧಾನಿಯನ್ನು ಆರಿಸಿ!’

01:26 PM Mar 13, 2019 | Karthik A |

ಲಕ್ನೋ: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಫೈನಲ್‌ ಮಾಡಲು ತಲೆಕೆಡಿಸಿಕೊಳ್ಳುತ್ತಿವೆ. ಅಭ್ಯರ್ಥಿಗಳು ಫಿಕ್ಸ್‌ ಆದ ಮೇಲೆ ಮತದಾರರನ್ನು ಮತದಾನ ಕೇಂದ್ರದತ್ತ ಬರುವಂತೆ ಮಾಡುವುದು ರಾಜಕೀಯ ಪಕ್ಷಗಳಿಗೆ ಮತ್ತು ಚುನಾವಣಾ ಆಯೋಗಕ್ಕೆ ದೊಡ್ಡ ತಲೆನೋವಿನ ಕೆಲಸವೇ ಸರಿ. ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲೇ ತಮ್ಮ ಹಕ್ಕನ್ನು ಚಲಾಯಿಸಲು ಜನರು ನಿರಾಸಕ್ತಿ ತೋರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ.

Advertisement

ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಒಂದನ್ನು ಮಾಡುವ ಮೂಲಕ ದೇಶದ ಪ್ರಮುಖ ರಾಜಕೀಯ ನಾಯಕರನ್ನು ಉದ್ದೇಶಿಸಿ ‘ಮುಂಬರುವ ಚುನಾವಣೆಯಲ್ಲಿ ಹೆಚ್ಚೆಚ್ಚು ಮತದಾರರು ಮತಗಟ್ಟೆಗೆ ಬರುವಂತೆ ಮಾಡುವಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯ’ ಎಂದು ಬರೆದಿದ್ದರು ಮತ್ತು ತಮ್ಮ ಈ ಟ್ವೀಟ್‌ ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್‌.ಸಿ.ಪಿ. ಮುಖ್ಯಸ್ಥ ಶರದ್‌ ಪವಾರ್‌, ಬಿ.ಎಸ್‌.ಪಿ. ವರಿಷ್ಠೆ ಮಾಯಾವತಿ, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಮುಂತಾದವರನ್ನು ಟ್ಯಾಗ್‌ ಮಾಡಿದ್ದರು.

ಪ್ರಧಾನಿ ಮೋದಿ ಅವರ ಈ ಟ್ವೀಟ್‌ ಗೆ ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜೀ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರು ವ್ಯಂಗಭರಿತ ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಧಾನಿಯವರು ದೇಶದಲ್ಲಿ ಮಹಾಪರಿವರ್ತನೆಯನ್ನು ತರಲು ಮಹಾಘಟಬಂಧನಕ್ಕೂ ಒಂದು ಆಹ್ವಾನವನ್ನು ನೀಡಿರುವುದು ಸಂತೋಷದ ವಿಷಯವೇ. ಹಾಗಾಗಿ ನಾನು ಈ ಮೂಲಕ  ಕೇಳಿಕೊಳ್ಳುವುದೇನೆಂದರೆ, ಎಲ್ಲರೂ ಮತ ಚಲಾಯಿಸಿ ಮತ್ತು ಆ ಮೂಲಕ ಹೊಸ ಪ್ರಧಾನಮಂತ್ರಿಯನ್ನು ಆರಿಸಿ’ ಎಂದು ವ್ಯಂಗ್ಯಭರಿತ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next