ಬೆಂಗಳೂರು: ನೊಂದವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವಾಗುವಾಗ ಯಾವುದೇ ಜಾತಿ, ಮತ, ಧರ್ಮ ನೋಡಬಾರದು ಎಂದು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.
ನಗರದ ಮಲ್ಲೇಶ್ವರ ಬ್ರಾಹ್ಮಣ ಸಭಾದಿಂದ ವಿಪ್ರ ಎಂಬ ಕಾರ್ಯಕ್ರಮದಡಿ ಭಾನುವಾರ ದೇವಯ್ಯ ಪಾರ್ಕ್ ಸಮೀಪದ ವಾಗೆವಿ ಶೇಷಪ್ಪ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮತ, ಪಂಥ, ಜಾತಿ ನೋಡಿಕೊಂಡು ವಿದ್ಯಾರ್ಥಿಗಳಿಗೆ ನೆರವಾಗಬಾರದು. ಅವರು ಈ ದೇಶದ ಭವಿಷ್ಯದ ಪ್ರಜೆಗಳು. ಹಾಗಾಗಿ ಉತ್ತಮ ಅಂಕಗಳಿಸಿದವರ ಜತೆಗೆ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಬೇಕು. ಈ ಮೂಲಕ ದೇಶಾಭಿವೃದ್ಧಿಗೆ ಅವರನ್ನು ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.
ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಾಮಾನ್ಯವಾಗಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆಯಾ ಜನಾಂಗದ ಸಂಘಗಳಿಂದ ಗೌರವ ಸಿಗುತ್ತದೆ. ಆದರೆ, ಕಷ್ಟದಲ್ಲಿದ್ದು, ಓದಿ ಪಾಸಾದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದ್ದು, ಮಲ್ಲೇಶ್ವರದ ಬ್ರಾಹ್ಮಣ ಸಭಾ ಆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಪ್ರಕಾಶ್ ಅಯ್ಯಂಗಾರ್ ಮಾತನಾಡಿ, ಬಡತನದ ಕಷ್ಟದ ನಡುವೆಯೇ ಓದಿ ಪಾಸಾದ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘ ಮಾಡುತ್ತಿದೆ. ಇದು ಮತ್ತೂಬ್ಬರಿಗೆ ಉತ್ತೇಜನ ಸಿಗಲಿ ಎಂಬ ಉದ್ದೇಶ ನಮ್ಮದು ಎಂದರು.
ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳಿಗೆ ನಗದು ಹಾಗೂ ಫಲಕ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಆರ್.ಎನ್.ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ 2 ಸಾರ ರೂ.ನಗದು ಹಾಗೂ ಫಲಕ ನೀಡಿ ಗೌರಸಲಾುತು.ಕಾರ್ಯದರ್ಶಿ ಆರ್.ಎನ್.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.