Advertisement

ಪುಣೆಯಲ್ಲಿ ಜಾತಿ ಪ್ರಮಾಣ ಪತ್ರ ಅರಿವು ಕಾರ್ಯಾಗಾರ

03:21 PM Apr 15, 2018 | Team Udayavani |

ಮುಂಬಯಿ: ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮೋತ್ಸವ ನಿಮಿತ್ತ ಯುನಿಟಿ ಸಮಾಜ ವೆಲ್ಫೆàರ್‌ ಫೌಂಡೇಶನ್‌ ಪಿಂಪ್ರಿ ಕ್ಯಾಂಪ್‌ ಪುಣೆ ಸಂಸ್ಥೆಯ ವತಿಯಿಂದ  ಜಾತಿ ಪ್ರಮಾಣ ಪತ್ರ ಅರಿವು ಮೂಡಿಸುವ ಕಾರ್ಯಕ್ರಮವು ಎ. 11 ರಂದು ಸಂಜೆ ಪುಣೆಯ ಪಿಂಪ್ರಿಯ ಸಂತ ತುಕರಾಮ ನಗರದ  ಹೊಟೇಲ್‌ ದಕ್ಷಿಣ್‌  ಸಭಾಗೃಹದಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಲೋನ ವಾಲ ನಗರ ಪರಿಷತ್‌ನ ಉಪ ನಗರಾಧ್ಯಕ್ಷ  ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್‌ ಎಸ್‌. ಪೂಜಾರಿ ಮತ್ತು ಅಭ್ಯಾಗತರುಗಳಾಗಿ ಮಂಗಳೂರು ತಾಲೂಕು ಪಂಚಾಯತ್‌ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್‌ ಪೂಜಾರಿ, ಕುಲಾಲ ಸಮುದಾಯದ ಸ್ಥಾನೀಯ ಮುಂದಾಳು ನ್ಯಾಯವಾದಿ  ಅಪ್ಪು ಮೂಲ್ಯ, ಒಬಿಸಿ ಸ್ಪೆಷಲಿಸ್ಟ್‌ ರೋಹಿತ್‌ ಎಂ. ಸುವರ್ಣ, ಬಿಲ್ಲವ ಮುಂದಾಳುಗಳಾದ  ಗಣೇಶ್‌ ಅಂಚನ್‌, ಶ್ರೀಧರ ಪೂಜಾರಿ ಉಪಸ್ಥಿತರಿದ್ದು ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಲೋನವಾಲ ನಗರ ಪರಿಷತ್‌ನ ಉಪ ನಗರಾಧ್ಯಕ್ಷ  ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್‌ ಎಸ್‌. ಪೂಜಾರಿ ಇವರು ಮಾತನಾಡಿ, ಹಿಂದುಳಿದ ವರ್ಗಗಳು ಮುನ್ನಡೆಯುವ ಬಗ್ಗೆ ಚಿಂತಿಸಬೇಕು ಎಂದರು.

ಭವಿಷ್ಯವನ್ನು ರೂಪಿಸುವಲ್ಲಿ ಸರಕಾರಿ ಸ್ವಾಮ್ಯದ ಎಲ್ಲಾ ಪ್ರಯೋಜನಗಳನ್ನು ತನ್ನದಾಗಿಸಿಕೊಳ್ಳಬೇಕು. ವಿಶೇಷವಾಗಿ ಶೈಕ್ಷಣಿಕವಾಗಿ ಲಭಿಸುವ ಯಾವುದೇ ಸೌಲತ್ತುಗಳನ್ನು ಪಡೆಯುವ ಪ್ರಯತ್ನ ಮಾಡ‌ಬೇಕು. ಆ ನಿಟ್ಟಿನಲ್ಲಿ  ಸಾಮಾನ್ಯ ಹಿಂದುಳಿದ ವರ್ಗ (ಒಬಿಸಿ) ದವರಿಗೆ ಲಭ್ಯವಿರುವ ಯಾವುದೇ ಅವಕಾಶ, ಸೌಲತ್ತುಗಳನ್ನು ತಮ್ಮದಾಗಿಸಬೇಕು. ಈ ನಿಟ್ಟಿನಲ್ಲಿ ಇಂದು ಆಯೋಜಿಸಿರುವ ಕಾರ್ಯಕ್ರಮವು ಅರ್ಥ ಪೂರ್ಣವಾಗಿದೆ. ಇಂತಹ ಮಾಹಿತಿ ನೀಡುವ ಕಾರ್ಯಕ್ರಮಳನ್ನು ಎಲ್ಲಾ ಸಂಘಟನೆಗಳು ಆಯೋಜಿಸಿ ಸಮಾಜ ಬಾಂಧವರಿಗೆ ಸಹಕರಿಸಬೇಕು ಎಂದರು.

ಒಬಿಸಿಯಲ್ಲಿ ಸಿಗುವ ಸವಲತ್ತುಗಳನ್ನು ಪಡೆಯಲು ಹಿಂದೇಟು ಹಾಕ ಬಾರದು. ಕೆಲವರಲ್ಲಿ ಇದರ ಬಗ್ಗೆ ಕೀಳರಿಮೆಯಿದೆ. ಅದನ್ನು ಹೋಗಲಾಡಿಸುವಲ್ಲಿ ನಾವೆಲ್ಲರು ಮುಂದಾಗಬೇಕು ಎಂದರು.

Advertisement

ಬಿಲ್ಲವ, ಬೆಳ್ವಡ, ಬಂಜಾರ, ದೇವಾಡಿಗ, ಗಾಣಿಗ, ಕುಲಾಲ್‌, ಲಮಾನಿ, ಮೂಲ್ಯ ಪದ್ಮಶಾಲಿ ಸಫಲಿಗ ಸಮುದಾಯದವರು ಅನೇಕರು ಪಾಲ್ಗೊಂಡು ಕಾರ್ಯಕ್ರಮದ ಫಲಾನುಭವ ಪಡೆದರು. ಕಿರಣ್‌ ವೈ. ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಸಂಗೀತಾ  ಸುವರ್ಣ ವಂದಿಸಿದರು.  

 ಚಿತ್ರ -ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next