Advertisement
ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೂಂದೆಡೆ ಅಧಿವೇಶನಕ್ಕೂ ಮೊದಲೇ ವರದಿ ಸ್ವೀಕಾರಗೊಂಡರೆ, ವಿಪಕ್ಷಗಳಿಗೆ ಅನಾಯಾಸವಾಗಿ ಆಹಾರವಾಗಲಿದೆ. ಒಂದು ವೇಳೆ ಈಗ ಇದರಿಂದ ಪಾರಾದರೆ, ಲೋಕಸಭಾ ಚುನಾವಣೆ ಮುಗಿಯುವವರೆಗೂ ಇದು ನೇಪಥ್ಯಕ್ಕೆ ಸರಿಯಲಿದೆ. ಈ ಮಧ್ಯೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅವಧಿ ಇದೇ ಜ. 31ಕ್ಕೆ ಪೂರ್ಣಗೊಳ್ಳಲಿದೆ. ಈ ಇಕ್ಕಟ್ಟಿನಿಂದ ಪಾರಾಗಲು ಸರಕಾರ ಮತ್ತೂಮ್ಮೆ ಅಧ್ಯಕ್ಷರ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ “ಉದಯವಾಣಿ’ ಜತೆಗೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ವರದಿ ಅಂತಿಮಗೊಂಡಿದ್ದು, ಸಲ್ಲಿಕೆಗಾಗಿ ಮುಖ್ಯಮಂತ್ರಿಯಲ್ಲಿ ಸಮಯ ಕೇಳಿದ್ದೇವೆ, ಬಜೆಟ್ ಸಿದ್ಧತೆಯಲ್ಲಿ ಅವರು ವ್ಯಸ್ತರಾಗಿದ್ದಾರೆ. ಸರಕಾರಕ್ಕೆ ನಾವು ವರದಿ ಕೊಡಲಿದ್ದು, ಆ ವರದಿಯನ್ನು ಸರಕಾರ ಸಚಿವ ಸಂಪುಟದ ಮುಂದಿಡಲಿದೆ. ವರದಿ ಕೊಡುವುದು ಮಾತ್ರ ನಮ್ಮ ಕೆಲಸ ಎಂದು ತಿಳಿಸಿದರು.