Advertisement

Caste census report; ಕಸದ ಬುಟ್ಟಿಯಲ್ಲಿ ಬಿದ್ದಿದ್ದ..: ಶಾಮನೂರು ಶಿವಶಂಕರಪ್ಪ ಆಕ್ರೋಶ

09:11 PM Mar 02, 2024 | Team Udayavani |

ದಾವಣಗೆರೆ: ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಹತ್ತು ವರ್ಷಗಳಷ್ಟು ಹಿಂದಿನ ಜಾತಿ ಗಣತಿ ವರದಿಯನ್ನು ಈಗ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ. ಅದನ್ನು ಕಾಂತರಾಜು ಬರೆದಿದ್ದಾರೋ, ಜಯಪ್ರಕಾಶ ಹೆಗ್ಡೆ ಬರೆದಿದ್ದಾರೋ ಯಾರಿಗೂ ಗೊತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ಶನಿವಾರ ಸಂಜೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ಕೋಟಿಯಷ್ಟು ಇರುವ ಲಿಂಗಾಯತರ ಜನಸಂಖ್ಯೆಯನ್ನು ವರದಿಯಲ್ಲಿ ಕಡಿಮೆ ತೋರಿಸಲಾಗಿದೆ. ಒಕ್ಕಲಿಗರು, ಬ್ರಾಹ್ಮಣರು ಸಹ ತಮ್ಮ ಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದಿದ್ದಾರೆ. ಎಲ್ಲರೂ ಸೇರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿವಾರು ಜನಗಣತಿ ವರದಿಯನ್ನು ಸರ್ಕಾರ ಸ್ವೀಕಾರ ಮಾಡಿದೆ. ಆದರೆ, ಅದನ್ನು ಇನ್ನೂ ಸದನದಲ್ಲಿ ಪಾಸ್ ಮಾಡಿಲ್ಲ. ಸ್ವೀಕಾರ ಮಾಡುವುದರಲ್ಲಿ ತಪ್ಪೇನಿದೆ? ಆದರೆ, ವರದಿಗೆ ನಮ್ಮ ವಿರೋಧವಂತೂ ಇದ್ದೇ ಇದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದಿಂದಲೇ ಜಾತಿ ಗಣತಿ ಮಾಡುವ ಚಿಂತನೆ ಇದೆ. ಅದಕ್ಕಾಗಿ ನಮ್ಮ ಬಳಿ ಹಣ, ಸಿಬ್ಬಂದಿ ಎಲ್ಲವೂ ಇದೆ. ಯಾವಾಗ ಗಣತಿ ಮಾಡಿಸುತ್ತೇವೆಂದು ಈಗಲೇ ಹೇಳಲಾಗದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಪ್ರತಿಯಿಕ್ರಿಸಿದ ಶಾಮನೂರು ಶಿವಶಂಕರಪ್ಪ, ಟಿಕೆಟ್ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next