ರಾಮನಗರ: ‘ಜಾತಿಗಣತಿ ವರದಿ ಸಿದ್ದಪಡಿಸಿರುವ ಜಯಪ್ರಕಾಶ್ ಹೆಗ್ಡೆ ಯಾವ ಪಕ್ಷದವರು? ಅವರನ್ನ ನೇಮಕಮಾಡಿದ್ದೇ ಬಿಜೆಪಿಯವರು.ಪೂರ್ಣ ಮಾಹಿತಿ ತಿಳಿಯದೇ ಸುಮ್ಮನೆ ವಿರೋಧ ಮಾಡಬಾರದು’ ಎಂದು ಸ್ವಪಕ್ಷೀಯ ಸಚಿವರು ಸೇರಿ ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಜಾತಿಗಣತಿ ವರದಿಗೆ ಕಾಂಗ್ರೆಸ್ ನಾಯಕರ ಅಪಸ್ವರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ‘ಜಾತಿಗಣತಿಯನ್ನ ಇನ್ನೂ ಯಾರೂ ಕೂಡಾ ಓದಿಲ್ಲ.
ಅದನ್ನ ಮೊದಲು ಓದಿದ ಬಳಿಕ ತಪ್ಪಿದ್ದರೆ, ಸರಿ ಮಾಡೋಣ ಎಂದು ಪ್ರತಿಕ್ರಿಯಿಸಿದರು.
ಜಾತಿಗಣತಿ ಚುನಾವಣಾ ಗಿಮಿಕ್ ಎಂಬ ಈಶ್ಚರಪ್ಪ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ ಪಾರ್ಟಿಯೇ ಗಿಮಿಕ್ ಪಾರ್ಟಿ.ಅಲ್ಲಿರುವವರೆಲ್ಲಾ ಗುಮಿಕ್ ಲೀಡರ್ ಗಳು.ಈಶ್ವರಪ್ಪನವರ ಮಾತಿಗೆ ಹೆಚ್ಚು ಮಹತ್ವ ಕೊಡಲ್ಲ.ಜಾತಿ ಗಣತಿ ವರದಿ ಬಹಿರಂಗ ಆದಮೇಲೆ ಮಾತ್ರ ಅದರ ಬಗ್ಗೆ ವ್ಯಾಖ್ಯಾನ ಮಾಡಬಹುದು.ನಮ್ಮ ಮನೆಗಂತೂ ಬಂದು ಸಮೀಕ್ಷೆ ಮಾಡಿದ್ದಾರೆ’ ಎಂದರು.
ಕಾಂಗ್ರೆಸ್ ಸಮಾವೇಶಕ್ಕೆ ಕೆಎಸ್ಆರ್ ಟಿಸಿ ನಿಯೋಜನೆಯಿಂದ ಬಸ್ ಸಮಸ್ಯೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರದಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ”ಸಮಾವೇಶಗಳು ಆಗಬೇಕು, ವಿದ್ಯಾರ್ಥಿಗಳ ಪರೀಕ್ಷೆಯೂ ಆಗಬೇಕು.ಬಸ್ ಗಳ ಕೊರತೆ ಇರೋದು ನಿಜ.ಈಗಾಗಲೇ ರಾಮನಗರ ಜಿಲ್ಲೆಗೆ 25 ಹೊಸ ಬಸ್ ಗಳನ್ನ ನೀಡಿದ್ದೇವೆ.ಇನ್ನೂ 75ಬಸ್ ಗಳನ್ನ ಶೀಘ್ರದಲ್ಲೇ ಕೊಡುತ್ತೇವೆ.ಸದ್ಯ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮವಗಿಸುತ್ತೇವೆ” ಎಂದರು.
ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ತನಿಖೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ,’ಈ ಬಗ್ಗೆ ಸರಕಾರ ತನಿಖೆ ಮಾಡುತ್ತಿದೆ.ಯಾರೇ ತಪ್ಪುಮಾಡಿದ್ದರೂ ಕ್ರಮ ಆಗಲೇ ಬೇಕು.ಅಲ್ಲಿ ನಾಸೀರ್ ಬೆಂಬಲಿಗರು ಘೋಷಣೆ ಕೂಗಿದ್ದಾರಾ ಅಥವಾ ಹೊರಗಡೆಯಿಂದ ಬಂದು ಘೋಷಣೆ ಕೂಗಿದ್ದಾರಾ ಗೊತ್ತಿಲ್ಲ.ತನಿಖೆ ಬಳಿಕ ಎಲ್ಲವೂ ಬಹಿರಂಗವಾಗಲಿದೆ’ ಎಂದರು.