Advertisement

ದೇಶದ ಐಕ್ಯತೆಗೆ ಜಾತಿಯತೆ ಜಾಗೃತಿ ಮಾರಕ

06:29 PM Jul 11, 2022 | Team Udayavani |

ಚನ್ನರಾಯಪಟ್ಟಣ: ದೇಶದಲ್ಲಿ ಜಾತಿಯತೆ ತಾಂಡವಾಡುತ್ತಿದ್ದು ಜಾತಿಯ ಮೇಲೆ ಒಡೆದು ಆಳುವವರ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜದ ಸ್ವಾಥ್ಯವನ್ನು ಕದಡುತ್ತಿದ್ದಾರೆ ಎಂದು ರಂಗಭೂಮಿ ತಜ್ಞ ಶ್ರೀನಿವಾಸ ಪ್ರಭು ಆತಂಕ ವ್ಯಕ್ತ ಪಡಿಸಿದರು.

Advertisement

ಪಟ್ಟಣದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವಿಪ್ರ ನೌಕರ ಸಂಘದಿಂದ ಹಮ್ಮಿಕೊಂಡಿದ್ದ ಉಪ ನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ದೇಶದಲ್ಲಿ ಇರುವ ಪ್ರತಿ-ಜಾತಿಯನ್ನು ಎಲ್ಲರೂ ಗೌರವಿಸಬೇಕು. ಹಾಗೆಂದ ಮಾತ್ರಕ್ಕೆ ಎಂದಿಗೂ ಜಾತಿ ವಾದಿಗಳಾಗಬಾರದು. ಕೆಲವರು ತಮ್ಮ ಜಾತಿಯ ಅಫೀಮಿನಲ್ಲಿ ಇರುತ್ತಾರೆ. ಇದು ಸಮಾಜಕ್ಕೆ ಮಾರಕ ವಾಗಿದೆ ಎಂದು ತಿಳಿ ಹೇಳಿದರು.

ಜಾತಿ ಆಧಾರದ ಮೇಲೆ ಮತ ವಿಭಜನೆ: ಹಿಂದೂಗಳಲ್ಲಿ ಜಾತಿ ವಿಷಬೀಜ ವಿಪರೀತವಾಗುತ್ತಿದೆ. ಜಾತಿಯ ನಡುವೆ ಪಂಗಡಗಳು ಒಳ ಪಂಗಡಗಳ ಮೂಲಕ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂಸ ಸಮಾಜದಲ್ಲಿ ಸಹಿಷ್ಣತೆ ಕಡಿಮೆಯಾಗುತ್ತಿದೆ. ಅಧಿಕಾರದ ದಾಹಕ್ಕಾಗಿ ಜಾತಿ ವಿಷ ಬೀಜವನ್ನು ಬಿತುತ್ತಿದ್ದಾರೆ.
ಮಕ್ಕಳು ಜಾತಿಯಿಂದ ಎಂದಿಗೂ ಗುರುತಿಸಿಕೊ ಳ್ಳುವುದಿಲ್ಲ. ಆದರೆ, ಮತದಾರರಾದ ಮೇಲೆ ಜಾತಿಯ ಹಣೆ ಪಟ್ಟಿಯನ್ನು ಕಟ್ಟುವ ಕೆಲಸ ಆಗುತ್ತಿದೆ ಎಂದರು.

ಆಸ್ತಿಗಾಗಿ ಶೋಷಣೆ: ಬ್ರಾಹ್ಮಣ ವಿರೋಧಿ ಅಲೆಯನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತಿದೆ. ಅಸ್ಪೃಶ್ಯತೆಗೆ ಬ್ರಾಹ್ಮಣರು ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಸಾಕಷ್ಟು ಮಂದಿ ಕೆಳವರ್ಗದವರನ್ನು ಮೇಲೆತ್ತಿದ್ದು ಬ್ರಾಹ್ಮಣ ಎಂಬುದನ್ನು ಮರೆತಿದ್ದಾರೆ. ಶೋಷಕರಿಂದ ಶೋಷಿತರ ಸಂಖ್ಯೆ ಹೆಚ್ಚುತ್ತಿದೆ ಹೊರತು ಬ್ರಾಹ್ಮಣರಿಂದಲ್ಲ, ಪ್ರತಿ ಜಾತಿಯಲ್ಲಿಯೂ ಶೋಷಕರಿದ್ದಾರೆ. ಹಣ ಹಾಗೂ ಅಂತಸ್ತಿಗಾಗಿ ಶೋಷಣೆ ನಡೆಯುತ್ತಿದೆ. ಇದನ್ನು ಹೋಗಲಾಡಿಸಬೇಕು ಎಂದರು.

ಅಸಹಿಷ್ಣತೆ ಹೆಚ್ಚಿದೆ: ಆರೋಗ್ಯವಂತ ಸಮಾಜದಲ್ಲಿ ಅಸ್ಪೃಶ್ಯತೆ ಇರಬಾರದು. ಆದರೆ ಇಂದಿಗೂ ಅಸ್ಪೃಶ್ಯತೆ ನಿರ್ಮೂ ಲನಕ್ಕಾಗಿ ಸರ್ಕಾರಗಳು ಹಣ ವ್ಯಯಿಸುತ್ತಿವೆ. ಅಧಿಕಾರ ಹಾಗೂ ಪ್ರಭಾವಿಗಳು ಇರುವೆಡೆ ಅಸ್ಪೃಶ್ಯತೆ ಇದೆ ಹೊರತು ಅಲ್ಪಸಂಖ್ಯಾತರು ಇರುವ ಕಡೆ ಎಂದಿಗೂ ಶೋಷಣೆಗಳು ನಡೆಯುತ್ತಿಲ್ಲ. ಎಲ್ಲ ಮೇಲ್ಜಾತಿ ಜನರು ಶೋಷಣೆ ಮಾಡುತ್ತಿದ್ದಾರೆ, ಅಸಹಿಷ್ಣತೆ ಹುಟ್ಟು ಹಾಕುತ್ತಿದ್ದಾರೆ ಎಂದರು.

Advertisement

ಶೋಷಿತರ ದನಿಯಾಗಿರುವ ಬ್ರಾಹ್ಮಣರು: ವ್ಯಾಸರು ಕನಕರನ್ನು ಸಮಾಜಕ್ಕೆ ನೀಡಿದ್ದಾರೆ. ಬ್ರಾಹ್ಮಣರು ಜ್ಞಾನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ನೀಡಿರುವ ಸಾಕಷ್ಟು ಇತಿಹಾಸವಿದೆ. ಇದನ್ನು ಯಾರು ಹೇಳುತ್ತಿಲ್ಲ. ಸಿಡಿದೇಳುವ ಮನೋಭಾವ ಬ್ರಾಹ್ಮಣರಿಗೆ ಇಲ್ಲ, ಹಾಗಾಗಿ ಅವರ ಮೇಲೆ ಷಡ್ಯಂತ್ರಗಳು ನಡೆಯುತ್ತಿವೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿಪ್ರ ನೌಕರ ಸಂಘದ ಅಧ್ಯಕ್ಷ ನಂಜುಂಡಪ್ರಸಾದ್‌, ಬ್ರಾಹ್ಮಣ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಜೋಯಿಸ್‌, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next