Advertisement
ಸುಧಾರಣೆ ಅಂದರೆ ಬದಲಾವಣೆ. ಬದಲಾವಣೆ ಅಭಿವೃದ್ಧಿಗೆ, ದೇಶದ ಪ್ರಗತಿಗೆ ಪೂರಕ ಮತ್ತು ಹೆದ್ದಾರಿ. ದೇಶವು ಸ್ವಾತಂತ್ರ್ಯವನ್ನು ಪಡೆದ ಅನೇಕ ವರ್ಷಗಳ ಅನಂತರ ಅಂದರೆ, 1969ರ ಬಳಿಕ ನಮ್ಮ ದೇಶದಲ್ಲಿ ಆರ್ಥಿಕ ಬದಲಾವಣೆಯ ಗಾಳಿ ಬೀಸತೊಡಗಿತು. ಆ ಬದಲಾವಣೆಯು ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣದೊಂದಿಗೆ ಪ್ರಾರಂಭಗೊಂಡಿತು. ಈ ಬದಲಾವಣೆಯ ಉದ್ದೇಶ ಬ್ಯಾಂಕುಗಳು ಶ್ರೀಮಂತರ ಸ್ವತ್ತು ಎಂಬುದಾಗಿ ಇದ್ದ ಭಾವನೆಯನ್ನು ಅಳಿಸಿ ಹಾಕುವುದಾಗಿತ್ತು. ದೇಶದ ಎಲ್ಲ ವರ್ಗದ ಜನರು ಬ್ಯಾಂಕಿಂಗ್ ಸೌಲಭ್ಯ ಪಡೆಯಬೇಕೆಂಬುದೇ ಅದರ ಗುರಿ.
Related Articles
Advertisement
ಇತ್ತೀಚೆಗೆ ಕಾರ್ಡ್ ಬಳಕೆಯ ಶುಲ್ಕವನ್ನು ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಉದ್ದೇಶದಿಂದ ಕಡಿತ ಮಾಡಲಾಗಿದೆ. ಜತೆಗೆ ಕನಿಷ್ಟ ಬ್ಯಾಲೆನ್ಸ್ ಶುಲ್ಕ ನಮ್ಮನ್ನು ಕಾಡಲಿದೆ. ಇತ್ತೀಚೆಗೆ ಮೂರು ಖಾಸಗಿ ಬ್ಯಾಂಕುಗಳು ಬಳಕೆದಾರನ ತಿಂಗಳ ನಾಲ್ಕನೇ ವ್ಯವಹಾರದ ಅನಂತರ 150 ರೂ. ಶುಲ್ಕ ವಿಧಿಸುವ ಕ್ರಮ ನಗದು ಬಳಕೆಯ ಪ್ರಮಾಣದ ಮೇಲೆ ಮತ್ತಷ್ಟು ಕಡಿವಾಣ ಹಾಕುವುದರಲ್ಲಿ ಸಂಶಯವಿಲ್ಲ. ಈ ಕ್ರಮವು ಮುಂದೊಂದು ದಿನ ಸಾರ್ವತ್ರಿಕವಾದರೂ ಆಶ್ಚರ್ಯವಿಲ್ಲ. ಇನ್ನು ನಮ್ಮ ಕೈಯಲ್ಲಿರುವ ನಗದಿನ ಮೇಲೂ ಮಿತಿ ಹೇರಿಕೆ. ಈ ಎಲ್ಲ ಕ್ರಮಗಳು ನಗದು ರಹಿತ ವ್ಯವಹಾರವನ್ನು ಒಪ್ಪಿಕೊಳ್ಳಲೇ ಬೇಕಾದ ಮನಸ್ಥಿತಿಗೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ನಗದು ಕೈಯಲ್ಲಿಟ್ಟುಕೊಳ್ಳಲಿಕ್ಕಿಲ್ಲದಿದ್ದರೆ ಬ್ಯಾಂಕಿಗೆ ಹೋಗುವುದು ಅನಿವಾರ್ಯ.
ವಿತ್ತೀಯ ಸೇರ್ಪಡೆಗೆ ಟ್ರಿಗರ್ಬ್ಯಾಂಕ್ ರಾಷ್ಟ್ರೀಕರಣದ ಮುಖ್ಯ ಉದ್ದೇಶ ದೇಶದ ಎಲ್ಲ ಜನರನ್ನು ಬ್ಯಾಂಕಿಂಗ್ ಸೇವೆಯತ್ತ ತಳ್ಳುವುದು. ಜತೆಗೆ ವಿತ್ತೀಯ ಸೇರ್ಪಡೆಗೆ ಪ್ರಯತ್ನ. ದೇಶದಲ್ಲಿ ವಿತ್ತೀಯ ಸೇರ್ಪಡೆಯ ಏಕಮೇವ ಉದ್ದೇಶದಿಂದ ಕೈಗೊಂಡ ಹಲವಾರು ಕಾರ್ಯಕ್ರಮಗಳು ಜನರನ್ನು ಖಾತೆಯನ್ನು ತೆರೆಯುವುದರಲ್ಲಿ ಪ್ರೇರೇಪಿಸಿದ್ದು ಮಾತ್ರ. ಬ್ಯಾಂಕ್ ಸೇವೆಯನ್ನು ಪೂರ್ಣವಾಗಿ ಬಳಸಿಕೊಂಡವರು ಹಲವರಷ್ಟೇ. ಬ್ಯಾಂಕು ಖಾತೆ ಇದೆಯೋ? -ಹೌದು. ಬಳಕೆ ಹೇಗೆ? ಉತ್ತರ ಅಸ್ಪಷ್ಟ. ಇತ್ತೀಚೆಗಿನ ಜನಧನ ಯೋಜನೆಯ ಅಡಿಯಲ್ಲಿ ದೇಶದಲ್ಲಿ 26 ಕೋಟಿ ಖಾತೆಗಳು ತೆರೆಯಲ್ಪಟ್ಟವು. ಖಾತೆ ಇದ್ದರೆ ವಿತ್ತೀಯ ಸೇರ್ಪಡೆಯಾಯಿತೆಂಬ ಭರವಸೆ ಇಲ್ಲ. ವಿತ್ತೀಯ ಸೇರ್ಪಡೆಯೆಂದಾಕ್ಷಣ ದೇಶದಲ್ಲಿ ಎಷ್ಟು ಬ್ಯಾಂಕು ಖಾತೆಗಳು ಇವೆ, ಅವುಗಳಲ್ಲಿ ಪಟ್ಟಣದಲ್ಲೆಷ್ಟು? ಹಳ್ಳಿಯಲ್ಲೆಷ್ಟು? ಎಷ್ಟು ಎಟಿಎಂ ಮೆಶಿನ್ ಇದೆ? ದೇಶದಲ್ಲಿ ಎಷ್ಟು ಪಾಯಿಂಟ್ ಆಫ್ ಸೇಲ್ಸ್ ಮೆಶಿನ್‌ಗಳಿವೆ, ಎಷ್ಟು ಜನರು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾರೆ? ಈ ಎಲ್ಲ ಅಂಶಗಳ ಮೇಲೆಯೇ ವಿತ್ತೀಯ ಸೇರ್ಪಡೆಯ ಲೆಕ್ಕಾಚಾರ ನಡೆದು ಬಂದದ್ದು. ಅಂದರೆ ವಿತ್ತೀಯ ಸೇರ್ಪಡೆಯೆಂಬುದು ದೇಶದಲ್ಲಿ ಬ್ಯಾಂಕಿಂಗ್ ಸೌಲಭ್ಯ ಎಷ್ಟು ಮಂದಿಯ ಮನೆಬಾಗಿಲಿಗೆ ತಲುಪಿದೆ ಎಂಬುದನ್ನು ಅವಲಂಬಿಸಿದೆ. ಆದರೆ ಇವತ್ತು ವಿತ್ತೀಯ ಸೇರ್ಪಡೆಯು ಡಿಜಿಟಲೈಸೇಶನ್ ಅಥವಾ ನಗದು ರಹಿತ ವ್ಯವಹಾರದತ್ತ ಜನರನ್ನು ತಳ್ಳುವ ಮೂಲಕವೂ ಸಾಧ್ಯವೆಂದು ನೋಟು ಅಮಾನ್ಯಿàಕರಣ ಸಾಬೀತು ಪಡಿಸಿದೆ. ಇವತ್ತು ಹಣದ ವ್ಯವಹಾರವನ್ನು ಆಧುನಿಕ ತಂತ್ರಜ್ಞಾನ ನೆರವಿನೊಂದಿಗೆ ಬ್ಯಾಂಕಿಂಗ್ ಸೌಲಭ್ಯದ ಮೂಲಕ ನಡೆಸಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿದೆ, ಇದುವರೆಗೆ ಬ್ಯಾಂಕಿಂಗ್ ಸೌಲಭ್ಯವಂಚಿತ ವರ್ಗದಲ್ಲಿದ್ದವರಿಗೂ ಇದೀಗ ಅನಿವಾರ್ಯವಾಗಿದೆ. ಈ ಅನಿವಾರ್ಯತೆಯೇ ವಿತ್ತೀಯ ಸೇರ್ಪಡೆಯ ದಾರಿಯನ್ನು ಮತ್ತಷ್ಟು ಸುಗಮಗೊಳಿಸಿದೆ ಎಂದರೆ ತಪ್ಪಾಗಲಾರದು. ಇವತ್ತು ಮೊಬೈಲೇ ನಮ್ಮ ಬ್ಯಾಂಕು. ನಮ್ಮ ಬ್ಯಾಂಕಿನಲ್ಲಿರುವ ಖಾತೆಯಲ್ಲಿ ಬ್ಯಾಲೆನ್ಸ್ ಮಾತ್ರ ಇರಲೇಬೇಕು. ಕ್ಯಾಶ್‌ಲೆಸ್ ವ್ಯವಹಾರವು ನೋಟು ಅಮಾನ್ಯಿàಕರಣದಿಂದ ಉಂಟಾದ ನೋವಿಗೆ ನಮ್ಮ ಬೆರಳ ತುದಿಯಿಂದಲೇ ವ್ಯವಹರಿಸಬಹುದಾದ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಅಗತ್ಯವಿರುವ ಮುಲಾಮನ್ನು ಹಚ್ಚಿದೆ. ಈ ಸುಧಾರಣೆ ಐಟಿ ಸ್ಟಾರ್ಟಪ್‌ಗ್ಳಿಗೆ ವರದಾನ. ಈ ಸುಧಾರಣೆಯು ದೇಶದಲ್ಲಿ ಉದ್ಯೋಗವನ್ನು ಬೆನ್ನುಹತ್ತಿ ಹೋಗಬಹುದಾದ ವರ್ಗವನ್ನು ಸೃಷ್ಟಿಸುವ ಬದಲಾಗಿ ಉದ್ಯೋಗವನ್ನು ಸೃಷ್ಟಿಸಬಹುದಾದ ವರ್ಗವನ್ನು ಹುಟ್ಟುಹಾಕುವ ಸಾಮರ್ಥ್ಯವನ್ನು ಪಡೆದಿದೆ. ಆತುರ ಹೆಚ್ಚಿದೆ
ನೋಟು ರದ್ದತಿಯ ಬಳಿಕ ದೇಶದಲ್ಲಿ ಎಷ್ಟು ಹಣವು ಹೊರ ಬಂದಿದೆ? ಅದರ ಮೌಲ್ಯವೆಷ್ಟು? ಎಷ್ಟು ಮೊತ್ತದ ಕಪ್ಪು ಹಣವು ದೇಶದ ಆರ್ಥಿಕತೆಯಿಂದ ಅಳಿದು ಹೋಯಿತು? ಈ ಪ್ರಕ್ರಿಯೆಯಿಂದಾಗಿ ಎಷ್ಟು ಮೊತ್ತದ ಹಣವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ನಿಧಿಗೆ ಜಮೆಯಾಗಿದೆ? ಜಮೆಯಾಗುತ್ತಿದೆ? ದೇಶದ ಖಜಾನೆಗೆ ಎಷ್ಟು ಮೊತ್ತದ ತೆರಿಗೆ ಬಂದಿದೆ, ತುಂಬಿದೆ? ತೆರಿಗೆಯ ಮೂಲಕ ಬಂದ ಹಣದಲ್ಲಿ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಎಷ್ಟು ಹಣವನ್ನು ಸರಕಾರ ಮೀಸಲಿಡಬಹುದು? ಮೇಕ್ ಇನ್ ಇಂಡಿಯಾ, ಸ್ಕಿಲ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾದಂತಹ ಕಾರ್ಯಕ್ರಮಗಳಿಗೆ ಎಷ್ಟು ಹಣ ವಿನಿಯೋಗವಾಗಬಹುದು? ಈ ಪ್ರಕ್ರಿಯೆ ದೇಶದ ಪ್ರಗತಿಗೆ ಎಷ್ಟು ಸಹಾಯಕ ಎಂಬೆಲ್ಲ ಲೆಕ್ಕಾಚಾರ ನಡೆಯುತ್ತಲೇ ಇದೆ. ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯಲು ಇನ್ನೆಷ್ಟು ಕಾಲ ಕಾಯಬೇಕೋ? ಹೌದು, ಕಾಯಲೇ ಬೇಕು. ಈ ಸುಧಾರಣೆಯ ಸಫಲತೆ ಈ ಎಲ್ಲ ಅಂಶಗಳ ಮೇಲೆ ಅವಲಂಬಿಸಿದೆ. ಫಲಿತಾಂಶ ಏನೇ ಇರಲಿ, ಒಂದಂತೂ ಸತ್ಯ. ದೇಶದ ಜನಸಾಮಾನ್ಯರನ್ನು ನಗದು ರಹಿತ ವ್ಯವಹಾರದತ್ತ ತೊಡಗಿಸಿಕೊಳ್ಳುವಲ್ಲಿ ಈ ಸುಧಾರಣೆಯು ವೇದಿಕೆಯನ್ನು ಸೃಷ್ಟಿಸಿದೆ ಎಂಬುದರಲ್ಲಿ ಸಂಶಯವಿಲ್ಲ. ನಗದು ರಹಿತ ವ್ಯವಹಾರ ಸ್ವತ್ಛಭಾರತ ನಿರ್ಮಾಣ ಮಾಡುವುದರಲ್ಲಿ ಎರಡು ಮಾತಿಲ್ಲ. – ರಾಘವೇಂದ್ರ ರಾವ್ ಬೈಲ್