Advertisement
ಪಿಸ್ತಾದ ಮಿಶ್ರಣ ತಯಾರಿಗೆಹುಡಿ ಮಾಡಿದ ಪಿಸ್ತಾ- ಮುಕ್ಕಾಲು ಕಪ್
ಹುಡಿ ಮಾಡಿದ ಸಕ್ಕರೆ-ಕಾಲು ಕಪ್
ಹಸುರು ಬಣ್ಣ- 3 ಹನಿ (ಬೇಕಾದಲ್ಲಿ)
ಹಾಲಿನ ಹುಡಿ- 1 ಟೇಬಲ್ ಸ್ಪೂನ್
ನೀರು-3 ಟೇಬಲ್ ಸ್ಪೂನ್
(ಹಿಟ್ಟಿ ಸಿದ್ದಪಡಿಸಲು ಬೇಕಾದಷ್ಟು)
ಗೋಡಂಬಿ ಮಿಶ್ರಣದ ತಯಾರಿಗೆ
ಹುಡಿ ಮಾಡಿದ ಗೋಡಂಬಿ- ಒಂದು ಕಪ್
ಸಕ್ಕರೆ-ಅರ್ಧ ಕಪ್
ನೀರು-ಕಾಲು ಕಪ್
ಏಲಕ್ಕಿ ಹುಡಿ-ಸ್ವಲ್ಪ
ತುಪ್ಪ-ಒಂದು ಟೇಬಲ್ ಸ್ಪೂನ್
ಕೇಸರಿ-ಬೇಕಾದಲ್ಲಿ
ಪಿಸ್ತಾದ ಹಿಟ್ಟು ತಯಾರಿ: ಒಂದು ದೊಡ್ಡ ಪಾತ್ರೆಗೆ ಪಿಸ್ತಾ ಹುಡಿ ಹಾಗೂ ಸಕ್ಕರೆ ಹುಡಿ ಹಾಕಿ. ಅನಂತರದ ಅದಕ್ಕೆ ಬೇಕಾದಲ್ಲಿ ಹಸುರು ಬಣ್ಣ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಬೆರೆಸಿಕೊಳ್ಳಿ. ಅನಂತರ ಹಾಲಿನ ಹುಡಿ ಹಾಕಿ ಬೆರಸಿಕೊಂಡು ಚಿಗುಟಲ್ಲದ ಹಿಟ್ಟು ಸಿದ್ಧಪಡಿಸಿಕೊಳ್ಳಿ ಸಕ್ಕರೆ ಸಿರಪ್ ತಯಾರಿ: ಮೊದಲು ಅರ್ಧ ಕಪ್ ಸಕ್ಕರೆ ಹಾಗೂ ಕಾಲು ಕಪ್ ನೀರು ತೆಗೆದುಕೊಳ್ಳಿ ಒಲೆಯ ಮೇಲಿಟ್ಟು ಒಂದೆಳೆ ಪಾಕ ತಯಾರಿಸಿಕೊಳ್ಳಿ. ಈ ಸಿರಪ್‌ಗೆ ಗೋಡಂಬಿ ಹುಡಿಯನ್ನು ಬೆರೆಸಿ. ಈ ವೇಳೆ ಒಲೆಯ ಉರಿ ಸಣ್ಣಕ್ಕಿರಲಿ. ಅನಂತರ ಅದಕ್ಕೆ ಏಲಕ್ಕಿ ಹುಡಿ ಮತ್ತು ಬೇಕಾದಲ್ಲಿ ಕೇಸರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಗೋಡಂಬಿಯ ಮಿಶ್ರಣ ಪಾತ್ರೆಯ ತಳ ಬಿಡಲಾರಂಭಿಸಿದಾಗ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಬೆರೆಸಿಕೊಳ್ಳಿ. ಹಿಟ್ಟಿನ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ ಹಿಟ್ಟನ್ನು ಕೆಳಗಿರಿಸಿಕೊಳ್ಳಿ. ಒಂದು ಬಟರ್ ಪೇಪರ್‌ಗೆ ತುಪ್ಪ ಹಾಕಿ ಗೋಡಂಬಿ ಹಿಟ್ಟನ್ನು ಅದಕ್ಕೆ ಹಾಕಿ. ಅನಂತರ ಕೈಗೆ ಸ್ವಲ್ಪ ತುಪ್ಪ ಹಾಕಿ ಹಿಟ್ಟನ್ನು 30 ಸೆಕೆಂಡ್‌ಗಳವರಗೆ ಚೆನ್ನಾಗಿ ಬೆರೆಸಿ. ಗೋಡಂಬಿ ಎಣ್ಣೆ ಬಿಡುವವರೆಗೆ ಬೆರೆಸಿಕೊಳ್ಳುವುದು ಬೇಡ. ಮೃದು ವಾದ ಹಿಟ್ಟು ಸಿದ್ಧವಾದ ಬಳಿಕ ಬಟರ್ ಪೇಪರ್ ಅನ್ನು ಮೇಲೆ ಹಾಕಿ ತಣ್ಣೆಯನ್ನು ಅದರ ಮೇಲೆ ಒತ್ತಿ ಏಕರೂಪದ ಪದರವನ್ನು ಸಿದ್ಧಪಡಿಸಿಕೊಳ್ಳಿ. ಅನಂತರ ಸಾಧಾರಣ ದಪ್ಪದ ಚಪಾತಿ ತಯಾರಿಸಿಕೊಳ್ಳಿ.
Related Articles
Advertisement