ಕಾರವಾರ : ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಹತ್ತು ಲಕ್ಷ ನಗದನ್ನು ಮಾಜಾಳಿ ಚೆಕ್ ಪೋಸ್ಟನಲ್ಲಿ ವಶಪಡಿಸಿಕೊಳ್ಳಲಾಗಿದೆ. ದಾಖಲೆಯಿಲ್ಲದ ಬೆಳ್ಳಿ ಸುಮಾರು 7.5 ಲಕ್ಷ ರೂ. ಮೊತ್ತದ್ದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿನ್ನ, ಬೆಳ್ಳಿ, ಹಣ ಸಾಗಾಟ ಮಾಡುವಾಗ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅದು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ಸೂಕ್ತ ದಾಖಲೆ ನೀಡಿ ಹಣ ಹಾಗೂ ಚಿನ್ನ ಬಿಡಿಸಿಕೊಳ್ಳಬಹುದು ಎಂದರು. ದಾಖಲೆ ಇಲ್ಲದೇ ಹೋದರೆ ಅವರು ಸರ್ಕಾರದ ವಶವಾಗುತ್ತದೆ. ಚುನಾವಣಾ ಶಾಖೆ ಎಲ್ಲಾ ಘಟನೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ ಎಂದರು.
ಗಾಂಜಾ ಚರಸ ಸೇರಿದಂತೆ ಇತರೆ ಸಾಮಾಗ್ರಿಗಳು ಸಹ ವಶವಾಗಿದೆ. ಈತನಕ ನಗದು ಸೇರಿ ಒಟ್ಟು69.80 ಲಕ್ಷ ರೂ. ಮೊತ್ತದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಸಂಬಂಧಿ ಈ ಕಾರ್ಯ ನಡೆಯುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದಿದ್ದು, ಇದು ಮೇ15 ರತನಕ ಜಾರಿಯಲ್ಲಿರುತ್ತದೆ. ವಿವಿಧ ಪ್ರಚಾರದ ಪೋಸ್ಟರೆ ಕಿತ್ತುಹಾಕುವ ಕೆಲಸ ನಡೆದಿದೆ ಎಂದು ಅವರು ವಿವರಿಸಿದರು. ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದರೂ ಸಹ ಕಾಮಗಾರಿ ನಡೆಯಬೇಕಾದ ಸ್ಥಳದಲ್ಲಿ ಕೆಲಸ ಆರಂಭವಾಗಿಲ್ಲ ಎಂದದಾರೆ , ಅಂಥ ಕೆಲಸಗಳನ್ನು ಚುನಾವಣೆ ಮುಗಿಯುವತನಕ ಆರಂಭಿಸುವಂತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಯಾವ ಕೆಲಸ ಆರಂಭವಾಗಿದೆ, ಯಾವುದು ಆರಂಭವಾಗಿಲ್ಲ. ಅನುದಾನ ಪಡೆದ ಕಾಮಗಾರಿಗಳು ಯಾವವು ಎಂಬ ಮಾಹಿತಿಯನ್ನು ಎಲ್ಲಾ ಇಲಾಖೆಗಳಿಂದ ಪಡೆಯುವ ಕಾರ್ಯ ನಡೆದಿದೆ ಎಂದು ಅವರು ವಿವರಿಸಿದರು.
ಪಕ್ಷದ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ಕಣ್ಣಿಡಲಾಗಿದೆ ಎಂದ ಅವರು ಈ ಬಗ್ಗೆ ವಿವಿಧ ಪಕ್ಷಗಳ ಮುಖಂಡರಿಗೆ ಮಾಹಿತಿ ಸಹ ನೀಡಲಾಗಿದೆ ಎಂದರು. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವ ರಾಜಕಾರಣಿಗಳು ಚುನಾವಣಾ ಶಾಖೆಯ ಅನುಮತಿ ಪಡೆಯಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಡಳಿತ ಮತದಾನ ಪ್ರಕ್ರಿಯೆಗೆ ಸಜ್ಜಾಗಿದೆ. ಅಂಗವಿಕಲ ಮತ್ತು 80 ವರ್ಷ ತುಂಬಿದವರಿಗೆ ಅಂಚೆ ಮತದಾನ ಸೌಲಭ್ಯ ಕಲ್ಪಿಸಲಾಗಿದೆ. ಅವರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುವುದಿದ್ದರೆ ಅದಕ್ಕೆ ಸಹ ಅವಕಾಶ ಇದೆ ಎಂದರು.
ಜಿಲ್ಲೆಯಲ್ಲಿ 11,83,461 ಲಕ್ಷ ಮತದಾರರು ಇದ್ದಾರೆ. ಇವರಲ್ಲಿ5,94,244ಪುರುಷರು,5,89,211 ಮಹಿಳಾ ಮತದಾರರು, 6 ಜನ ತೃತೀಯಲಿಂಗಿ ಮತದಾರರು ಇದ್ದಾರೆ. ಗ್ರಾಮೀಣ ಭಾಗದಲ್ಲಿ1122 ಪೊಲೀಂಗ್ ಸ್ಟೇಶನ್ಸ, ನಗರ ಭಾಗದಲ್ಲಿ 313 ಮತಗಟ್ಟೆ ಸ್ಥಾಪಿಸಲಾಗುವುದು. ಒಟ್ಟು ಜಿಲ್ಲೆಯಲ್ಲಿ 1435 ಮತಗಟ್ಟೆಗಳು ಇರುತ್ತವೆ ಎಂದರು. ಎ.13 ಎಂದು ಚುನಾವಣಾ ಅಧಿಸೂಚನೆ ಹೊರಡಲಿದೆ. ಅಭ್ಯರ್ಥಿಗಳು ಎ. 20 ರೊಳಗೆ ನಾಮಪತ್ರ ಸಲ್ಲಿಸಬೇಕು. ಎ.21 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಎ.24 ನಾಮಪತ್ರ ವಾಪಾಸಿಗೆ ಕೊನೆಯ ದಿನ. ಮೇ.10 ಮತದಾನ ನಡೆಯಲಿದೆ. ಮೇ.13 ಮತ ಎಣಿಕೆ ಮಾಡಲಾಗುವುದು ಎಂದರು. ಎಸ್ಪಿ ವಿಷ್ಣುವರ್ಧನ್, ಎಡಿಸಿ ರಾಜು ಮೊಗವೀರ, ವಾರ್ತಾಧಿಕಾರಿ ಜಯಂತ ಇದ್ದರು.