Advertisement

ನಗದು- ಮದ್ಯ ವಶ, ಅಭ್ಯರ್ಥಿ ದೇಣಿಗೆಗೆ ಕೇಸ್‌

11:53 PM Mar 31, 2019 | sudhir |

ಉಡುಪಿ: ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ದಿನ ದಿಂದ ಇದುವರೆಗೆ ಏಳು ಪ್ರಕರಣ ಗಳಲ್ಲಿ 16.65 ಲ.ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಪರಿಶೀಲನೆಯ ಅನಂತರ ಒಂದು ಪ್ರಕರಣ ದಲ್ಲಿ 3,25 ಲ.ರೂ. ಬಿಡುಗಡೆ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಅಬಕಾರಿ ಇಲಾಖೆಯವರು 15,580 ಲೀ. ಮದ್ಯ, ಪೊಲೀಸರು
2.520 ಲೀ. ಮದ್ಯ ವಶಪಡಿಸಿ ಕೊಂಡಿದ್ದು, ಈ ಸಂಬಂಧ ಮೂರು ಟ್ರಕ್‌ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿ ದ್ದಾರೆ. ಇವುಗಳ ಅಂದಾಜು ಮೊತ್ತ 1.06 ಕೋ.ರೂ. ಎಂದು ತಿಳಿಸಿದರು.

ದೇಣಿಗೆ: ಪ್ರಕರಣ ದಾಖಲು
ಪಕ್ಷೇತರ ಅಭ್ಯರ್ಥಿ ಅಮೃತ್‌ ಶೆಣೈ ಅವರು ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್‌ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಸಿ ವಿಜಿಲ್‌: 42 ದೂರು
ಸಿ ವಿಜಿಲ್‌ ಆ್ಯಪ್‌ ಮೂಲಕ 42 ದೂರುಗಳು ಸ್ವೀಕೃತವಾಗಿದ್ದು, 32 ಅರ್ಜಿಗಳನ್ನು ವಿಲೆಗೊಳಿಸಲಾಗಿದೆ. 10 ಡಮ್ಮಿ ಪ್ರಕರಣಗಳಾಗಿವೆ. ಸಿ ವಿಜಿಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಯಾರೂ ದೂರು ಸಲ್ಲಿಸಬಹುದು. ಈಗಷ್ಟೇ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿದೆ. ಯಾವುದೇ ಪೋಸ್ಟರ್‌, ಕರಪತ್ರಗಳನ್ನು ಹೆಸರು, ವಿಳಾಸವಿಲ್ಲದೆ ಮುದ್ರಿಸಬಾರದು ಎಂದು ಕೃಷ್ಣ ಕುನಾಲ್‌ ಹೇಳಿದರು.

ಪಕ್ಷಗಳು ಅಭ್ಯರ್ಥಿಗಳಿಗೆ ಕೊಡುವ ಮೊತ್ತವೂ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರುತ್ತದೆ. 26 ದಿನಗಳೊಳಗೆ ಲೆಕ್ಕಪತ್ರ ಕೊಡಬೇಕಾಗಿದ್ದು, ಅಭ್ಯರ್ಥಿ ವೆಚ್ಚ ಮತ್ತು ಪಕ್ಷ ಕೊಟ್ಟ ಲೆಕ್ಕವನ್ನು ತಾಳೆ ಹಾಕಿ ನೋಡಲಾಗುವುದು ಎಂದು ಕೃಷ್ಣ ಕುನಾಲ್‌ ತಿಳಿಸಿದರು. ಎಡಿಸಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

Advertisement

ವೀಕ್ಷಕರು
ಕೃಷ್ಣ ಕುನಾಲ್‌ – ಸಾಮಾನ್ಯ ವೀಕ್ಷಕರು- 8277013878
ಸಂದೀಪ್‌ ಪ್ರಕಾಶ್‌ ಕಾರ್ಣಿಕ್‌- ಪೊಲೀಸ್‌ ವೀಕ್ಷಕರು- 8277013926
ಮಲ್ಲಿಕಾರ್ಜುನ ಉತ್ತೂರೆ – ವೆಚ್ಚ ವೀಕ್ಷಕರು- 8277013973

ಆಯುಧ ಠೇವಣಿ
ಆಯುಧ ಪರವಾನಿಗೆ ಹೊಂದಿರುವವರು ಆಯಾ ಪೊಲೀಸ್‌ ಠಾಣೆಗಳಲ್ಲಿ ಅವುಗಳನ್ನು ಠೇವಣಿ ಇರಿಸಲು ಆದೇಶಿದಂತೆ ಜಿಲ್ಲೆಯ 4,630 ಪರವಾನಿಗೆ ಸಹಿತ ಆಯುಧಗಳ ಪೈಕಿ 3,693 ಆಯುಧಗಳನ್ನು ಠೇವಣಿ ಇಡಲಾಗಿದೆ. ರೈತರೂ ಆಯುಧಗಳನ್ನು ಠೇವಣಿ ಇರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next