Advertisement

ಕೇಂದ್ರದ ವಿರುದ್ಧ‌ ಕೇಸುಗಳ ಸರಮಾಲೆ

10:05 AM Feb 26, 2018 | Team Udayavani |

ಹೊಸದಿಲ್ಲಿ: ಕಳೆದ ವರ್ಷದಲ್ಲಿ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೂಡಲಾಗಿರುವ ದಾವೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಮಾಹಿತಿ ನೀಡಿದೆ.

Advertisement

2016ರಲ್ಲಿ ಸರಕಾರದ ನಾನಾ ನಿಯಮಗಳ ವಿರುದ್ಧ 3,497 ಪ್ರಕರಣಗಳು ದಾಖಲಾಗಿದ್ದರೆ, 2017ರ ಜನವರಿ 1ರಿಂದ ಡಿಸೆಂಬರ್‌ 31ರ ಅವಧಿಯಲ್ಲಿ 4,229 ಪ್ರಕರಣಗಳು ದಾಖಲಾಗಿವೆ ಎಂದಿರುವ ಸರಕಾರ, 2016ರ ನವೆಂಬರ್‌ನಲ್ಲಿ ಕೈಗೊಳ್ಳಲಾದ ನೋಟುಗಳ ಅಮಾನ್ಯ, ಜಿಎಸ್‌ಟಿ ಜಾರಿ ಸೇರಿದಂತೆ ಇನ್ನಿತರ ತೆರಿಗೆ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮೊಕದ್ದಮೆಗಳು ದಾಖಲಾಗಿವೆ ಎಂದಿದೆ.

ಇನ್ನು, ಈ ವರ್ಷ, ಜನವರಿ 1ರಿಂದ ಫೆ. 22ರ ಅವಧಿಯಲ್ಲಿ 859 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿರುವ ಸಚಿವಾಲಯ, 2014ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಾಗ, ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ 4,748 ಪ್ರಕರಣಗಳಿದ್ದರೆ, 2015ರಲ್ಲಿ ಇವುಗಳ ಸಂಖ್ಯೆ 3,909ಕ್ಕೆ ಇಳಿಕೆಯಾಗಿತ್ತು ಎಂದಿದೆ. 2013ರಲ್ಲಿ 4,772 ಹಾಗೂ 2012ರಲ್ಲಿ 4,149 ಪ್ರಕರಣಗಳು ದಾಖಲಾಗಿದ್ದವು ಎಂದು ವಿವರಣೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next