Advertisement

ಜಂಗ್ಲಿ ರಂಗಾಪೂರ ರೆಸಾರ್ಟ್ ಅಕ್ರಮ ಆರಂಭ ಮಾಡಿದ್ದಕ್ಕೆ ಕೇಸ್ ದಾಖಲು 

11:34 PM May 28, 2020 | Hari Prasad |

ಗಂಗಾವತಿ: ಕೊವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ತಾಲ್ಲೂಕಿನ ಜಂಗ್ಲಿ ರಂಗಾಪೂರದಲ್ಲಿರುವ ಜಂಗಲ್ ಟ್ರೀ ರೆಸಾರ್ಟ್ ಮಾಲೀಕರು ಅಕ್ರಮವಾಗಿ ರೆಸಾರ್ಟ್ ಆರಂಭಿಸಿ ಸಿಂಧನೂರು ಮೂಲದ ಮೂರು ಜನರಿಗೆ ರೂಂಗಳನ್ನು ಬಾಡಿಗೆ ನೀಡಿದ್ದರು.

Advertisement

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಎಲ್. ಡಿ. ಚಂದ್ರಕಾಂತ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.

ಕೋವಿಡ್ ವೈರಸ್ ಹರಡದಂತೆ ಜಿಲ್ಲಾಡಳಿತ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ವಿಧಿಸಿ ಹೊಟೆಲ್ ರೆಸಾರ್ಟ್ ಬಂದ್ ಮಾಡಲು ಡಂಗೂರ ಹಾಕಿದರೂ ಜಂಗ್ಲಿ ರಂಗಾಪೂರ ಗ್ರಾಮದ ಜಂಗಲ್ ಟ್ರಿ ರೆಸಾರ್ಟ್ ಮೇ.25 ರಂದು ಅಕ್ರಮವಾಗಿ ರೆಸಾರ್ಟ್ ಆರಂಭ ಮಾಡಿ ಸಿಂಧನೂರು ಮೂಲದ ಮೂರು ಜನರಿಗೆ ರೂಂ ಬಾಡಿಗೆ ನೀಡಿದ್ದರು.

ಕೋವಿಡ್ ಹರಡುವ ಭೀತಿಯಿಂದ ಗ್ರಾಮಸ್ಥರು ಪ್ರತಿಭಟನೆ ಮಾಡಿದಾಗ ರೂಂನಲ್ಲಿದ್ದವರನ್ನು ಖಾಲಿ ಮಾಡಿಸಲಾಗಿದೆ ಎಂದು ರೆಸಾರ್ಟ್ ಮಾಲೀಕ ಶಿವಸಾಗರ ನಾಯಕ ಒಪ್ಪಿಕೊಂಡಿದ್ದು ಇವರ ವಿರುದ್ಧ ಐಪಿಸಿ 269 ಮತ್ತು270 ಅನ್ವಯ ದೂರು ದಾಖಲಿಸುವಂತೆ ತಹಸೀಲ್ದಾರ್ ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next