ಹೊಸದಿಲ್ಲಿ: ಯಾತ್ರಿಕರಿದ್ದ ಬಸ್ ಮೇಲೆ ಉಗ್ರರ ದಾಳಿ ನಡೆದು ಹತ್ತು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ರವಿವಾರ ಸಂಜೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರತೀಯ ಸೇನೆಯು ಹುಡುಕು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಸ್ಸಿನ ಮೇಲೆ ಗುಂಡಿನ ದಾಳಿಯ ನಂತರ, ವಾಹನವು ಕಮರಿಗೆ ಬಿದ್ದು ಕನಿಷ್ಠ 10 ಯಾತ್ರಿಕರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು.
ಇದೀಗ ಸಿಸಿಟಿವಿ ದೃಶ್ಯವೊಂದು ವೈರಲ್ ಆಗಿದ್ದು, ಅದರಲ್ಲಿ ಬಸ್ ಬರುತ್ತಿದ್ದಾಗ ನಾಲ್ವರು ಉಗ್ರರು ಇರುವುದು ಪತ್ತೆಯಾಗಿದೆ. ಮತ್ತೊಂದೆಡೆ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸಿನ್ಹಾ ಅವರಿಂದ ವರದಿ ಕೇಳಿದ್ದಾರೆ.
ಲಷ್ಕರ್ ಎ ತೋಯ್ಬಾ ಟಾಪ್ ಕಮಾಂಡರ್ ಅಬು ಹಂಝಾ ಈ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.
ಎಸ್ ಡಿಆರ್ ಎಫ್ ಪಡೆಯುವ ಸ್ಥಳಕ್ಕೆ ಆಗಮಿಸಿದೆ. ಡ್ರೋನ್ ಗಳಲ್ಲಿ ಬಳಸಿ ಸುತ್ತಲಿನ ದಟ್ಟ ಕಾಡಿನ ಪ್ರದೇಶದಲ್ಲಿ ಹುಡುಕು ಕಾರ್ಯಾಚರಣೆ ನಡೆಸಲಾಗಿದೆ.
ಬಸ್ ಬಂದಾಗ ಉಗ್ರರು ಗುಂಡಿನ ಮಳೆ ಸುರಿದರು. ಆಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಮರಿಗೆ ಬಿತ್ತು ಎಂದು ರಿಯಾಸಿ ಎಸ್ ಪಿ ಮೊಹಿತಾ ಶರ್ಮಾ ಹೇಳಿದ್ದಾರೆ.