Advertisement

ಪುರಿಬಾಜಿಯಲ್ಲಿ ಹಲ್ಲಿ ಬಿದ್ದ ಪ್ರಕರಣ; ಹೋಟೆಲ್‌ ಮಾಲೀಕರಿಂದ ಪರಿಹಾರ

01:28 PM Apr 12, 2022 | Team Udayavani |

ಹುಬ್ಬಳ್ಳಿ: ವರೂರಿನ ಹೋಟೆಲ್‌ ವೊಂದರಲ್ಲಿ ಪೂರೈಸಿದ್ದ ಪುರಿ ಬಾಜಿಯಲ್ಲಿ ಹಲ್ಲಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವಾ ನ್ಯೂನತೆ ಕಾರಣ ಇಬ್ಬರು ಗ್ರಾಹಕರಿಗೆ ಸೇರಿ ಒಟ್ಟು 90 ಸಾವಿರ ರೂ. ಪರಿಹಾರ ನೀಡಲು ಹೋಟೆಲ್‌ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

Advertisement

2018ರ ಸೆ.26ರಂದು ಹುಬ್ಬಳ್ಳಿಯ ವರೂರಿನ ಕಾಮತ ಉಪಚಾರ ಹೋಟೆಲ್‌ಗೆ ಬೆಳಗಿನ ಉಪಹಾರಕ್ಕಾಗಿ ಹೋಗಿದ್ದ ಗ್ರಾಹಕರಾದ ವಿನಾಯಕ ಮತ್ತು ಸಹನಾ ಅವರು, ಪುರಿ ಭಾಜಿ ಹೇಳಿದ್ದರು.

ಪೂರೈಸಿದ ಉಪಹಾರದಲ್ಲಿ ಹಲ್ಲಿ ಬಿದ್ದಿರುವುದನ್ನು ಗಮನಿಸಿ ಹೋಟೆಲ್‌ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಷಪೂರಿತ ಉಪಹಾರ ಸೇವಿಸಿದ್ದ ಗ್ರಾಹಕ ವಿನಾಯಕ ಅವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಕಾರಣ ಶಿಗ್ಗಾಂವಿ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಈ ಕುರಿತು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋಗವು ಕಾಮತ ಉಪಚಾರ ಹೋಟೆಲ್‌ನವರಿಂದ ಗ್ರಾಹಕರಿಗೆ ಸೇವಾ ನ್ಯೂನತೆ ಆಗಿದೆ ಎಂದು ತೀರ್ಮಾನಿಸಿ, ಹೋಟೆಲ್‌ ನವರು ಇಬ್ಬರೂ ಗ್ರಾಹಕರಿಗೆ ಒಟ್ಟು 90 ಸಾವಿರ ರೂ. ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ಅವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next