Advertisement

ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪ್ರಾಧ್ಯಾಪಕ ರ ಮೇಲೆ ಪ್ರಕರಣ ದಾಖಲು

11:30 AM Jan 23, 2022 | Team Udayavani |

ಅಂಕೋಲಾ : ಕೋವಿಡ್ ಹರಡಲು ಕಾರಣರಾದ ಪಟ್ಟಣದ ಗೋಖಲೆ ಸೆಂಟಿನರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಆರ್.ಶಿರೋಡಕರ ಎಂಬುವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರಾಧ್ಯಾಪಕ ಶಿರೋಡಕರ ಇತ್ತೀಚೆಗೆ ಪರ ರಾಜ್ಯಕ್ಕೆ ಹೋಗಿ ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುವಾಗ ಅವರಿಗೆ ಕೋವಿಡ್ ಪಾಸಿಟಿವ್ ಎಂದು ವರದಿಯಾಗಿತ್ತು. 14 ದಿನ ಕಡ್ಡಾಯವಾಗಿ ಕ್ವಾರಂಟೈನದಲ್ಲಿರಲು ಸೂಚಿಸಲಾಗಿತ್ತು. ಆದರೂ ಅವರು ಕಾಲೇಜಿಗೆ ಬಂದು ಪಾಠ ಮಾಡಿದ್ದರ ಪರಿಣಾಮ 13 ವಿದ್ಯಾರ್ಥಿಗಳಿಗೂ ಕೊರೋನ‌ ಪಾಸಿಟಿವ್ ವರದಿಯಾಗಿತ್ತು. ಮತ್ತು  ಕಾಲೇಜು ಸೀಲ್ ಡೌನ ಮಾಡಲಾಗಿತ್ತು.

ಬೇಜವಾಬ್ದಾರಿಯಿಂದ ಕೋವಿಡ್ ವರದಿಯನ್ನು ಮರೆಮಾಚಿ  ಅಪಾಯಕಾರಿಯಾದ ರೋಗದ ಸೋಂಕು ಬೇರೆಯವರಿಗೆ ಹರಡುತ್ತದೆ ಅಂತಾ ತಿಳಿದೂ ಸಹಾ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ ನಿರ್ಲಕ್ಷತನದಿಂದ ಉದ್ದೇಶಪೂರ್ವಕವಾಗಿ  ಕಾಲೇಜ್‍ನಲ್ಲಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಕಾಲೇಜಿನ 13 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ಹರಡಿಸಿರುವದರ ಕುರಿತು ಪುರಸಭೆಯ ಮುಖ್ಯಾಧಿಕಾರಿ ಶ್ರುತಿ ಗಾಯಕವಾಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next