Advertisement

ಹಿಂದೂ ನಾಯಕರ ವಿರುದ್ಧ  ಪ್ರಕರಣ ದಾಖಲು: ವಿ.ಹಿಂ.ಪ. ಆಕ್ರೋಶ

03:45 AM Jul 11, 2017 | |

ಮಂಗಳೂರು: ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಶವಯಾತ್ರೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿ ದಂತೆ ಸಂಘ ಪರಿವಾರದ ಐವರು ನಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ಪೊಲೀಸರು ಕೂಲಂಕಷವಾಗಿ ಪರಿಶೀಲಿಸದೆ ಏಕಾಏಕಿ ಹಿಂದೂ ನಾಯಕರನ್ನು ಗುರಿಯಾಗಿಸಿರುವುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರತ್‌ ಶವಯಾತ್ರೆ ಮೆರವಣಿಗೆಯನ್ನು ಯಾವುದೇ ಸಂಘಟನೆಯವರು ಆಯೋಜಿಸಿರಲಿಲ್ಲ. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವು ಜವಾ ಬ್ದಾರಿಗಳನ್ನು ನಿರ್ವಹಿಸಲಾಗಿತ್ತು. ಶಾಂತಿಯಂಗಡಿ ಬಳಿ ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದು, ಅದಕ್ಕೆ ಸಂಘ ಪರಿವಾರದ ನಾಯಕರನ್ನು ಹೊಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಹಿಂದೂ ಸಂಘಟನೆಗಳ ನಾಯಕರಾದ ಶರಣ್‌ ಪಂಪ್‌ವೆಲ್‌, ಪ್ರದೀಪ್‌ ಪಂಪ್‌ವೆಲ್‌, ಸತ್ಯಜಿತ್‌ ಸುರತ್ಕಲ್‌, ಮುರಳಿಕೃಷ್ಣ ಹಸಂತಡ್ಕ, ಹರೀಶ್‌ ಪೂಂಜ ಅವರ ವಿರುದ್ಧ ಕಲ್ಲು ತೂರಾಟ ಆರೋಪದ ಮೇಲೆ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಂದು ವೇಳೆ ವಿನಾಕಾರಣ ಹಿಂದೂ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದರೆ ನಾವೂ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಅದರಿಂದ ಅಹಿತಕರ ಘಟನೆಗಳೇನಾದರೂ ನಡೆದರೆ ಅದಕ್ಕೆ ರಾಜ್ಯ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇರಳ ಮೂಲದವರಾರು?
ಕಲ್ಲೆಸೆತ ಪ್ರಕರಣದಲ್ಲಿ ಕೇರಳದ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದರೂ ಸಚಿವ ರಮಾನಾಥ ರೈ ಸೂಚನೆ ಮೇರೆಗೆ ಆರೋಪಿಗಳು ಕೇರಳ ಮೂಲದವರು ಎಂಬುದನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

ಈ ನಡುವೆ ಶರತ್‌ ಹತ್ಯೆ ಮತ್ತು ಪವನ್‌ರಾಜ್‌ ಹಾಗೂ ಚಿರಂಜೀವಿ ಅವರ ಮೇಲಿನ ಹಲ್ಲೆ ಪ್ರಕರಣ ನಡೆದು ಇಷ್ಟು ದಿನಗಳಾದರೂ ಇದುವರೆಗೆ ಪೊಲೀಸರು ಆರೋಪಿ ಗಳನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

Advertisement

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್‌ ಮಾತನಾಡಿ, ಶರತ್‌ ಕುಟುಂಬಕ್ಕೆ ವಿಹಿಂಪ, ಬಜರಂಗದಳ ವತಿಯಿಂದ 50,000 ರೂ. ನೆರವು ನೀಡಲಾಗುವುದು ಎಂದರು. ವಿಹಿಂಪ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗೌಡ, ಮನೋಹರ ಸುವರ್ಣ, ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಸಂಚಾಲಕ ಭುಜಂಗ ಕುಲಾಲ್‌, ಸಹ ಸಂಚಾಲಕ ಪುನಿತ್‌ ಅತ್ತಾವರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next