ರಾಮನಗರ: ಡಿಟಿಪಿ ಆಪರೇಟರ್ ಒಬ್ಬರು ಸೇರಿದಂತೆ ತಾವು ಮಾಧ್ಯಮಪ್ರತಿನಿಧಿಗಳೆಂದು ಅನಾವಶ್ಯಕವಾಗಿ ಓಡಾಡುತ್ತಿದ್ದ ಮೂವರು ನಕಲಿ ಪತ್ರಕರ್ತರ ವಿರುದ್ಧ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೀಸಿ ಕಚೇರಿ ಬಳಿ ತಪಾಸಣೆ ನಡೆಸುವವೇಳೆ ಮೂವರು ಸಿಕ್ಕಿಬಿದ್ದಿದ್ದು, ಈ ವೇಳೆತಾನು ಕರ್ನಾಟಕ ದಲಿತ ಪತ್ರಿಕೆಯ ವರದಿಗಾರನೆಂದು ಐಡಿ ಕಾರ್ಡು ತೋರಿಸಿದಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯೊಬ್ಬರು ಡಿಟಿಪಿ ಆಪರೇಟರ್ ಆಗಿದ್ದು, ನಗರದಲ್ಲಿ ಅರ್ಕಾವತಿ ಸೇತುವೆಯ ಬಳಿತಮ್ಮ ದ್ವಿಚಕ್ರವಾಹನದಲ್ಲಿ ಬಂದ ವೇಳೆಆಕೆಯನ್ನು ಪ್ರಶ್ನಿಸಿದ್ದಾರೆ. ಆಕೆ ತಾನುಮಾಧ್ಯಮ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾರೆ. ಪರಿಶೀಲನೆ ವೇಳೆ ಆಕೆಪ್ರಿಂಟಿಂಗ್ ಪ್ರಸ್‌ವೊಂದರಲ್ಲಿ ಡಿಟಿಪಿ ಆಪರೇಟರ್ ಎಂದು ಗೊತ್ತಾಗಿದೆ.ಮತ್ತೂಂದು ಪ್ರಕರಣದಲ್ಲಿ ಸಂಜೆ ಪತ್ರಿಕೆಯ ವರದಿಗಾರ ಎಂದು ಹೇಳಿ ಕೊಂಡಯುವಕನೊಬ್ಬನನ್ನು ಪೊಲೀಸರು ತಡೆದಿದ್ದಾರೆ.
ಆದರೆ ಆತ ಪತ್ರಿಕೆಯ ಸಂಪಾದಕನ ಹೆಸರು ಹೇಳಲು ತಡಬಡಾಯಿಸಿದ್ದಾನೆ. ಹೀಗಾಗಿ ಆತನ ವಾಹನವನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ.ಕರ್ತವ್ಯದ ಮೇಲೆ ಪರ್ತಕರ್ತರು ಓಡಾಡಲು ಅವಕಾಶವಿದೆ. ನಕಲಿ ಪತ್ರಕರ್ತರು ತಮ್ಮ ವಾಹನಗಳ ಮೇಲೆ “ಪ್ರಸ್”ಎಂದು ಹಾಕಿಕೊಂಡು ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದರು. ಇತ್ತೀಚೆಗೆಈವಿಚಾರವನ್ನು ನೈಜ ಪತ್ರಕರ್ತರು ಎಸ್ಪಿ ಎಸ್.ಗಿರೀಶ್ ಅವರ ಗಮನ ಸೆಳೆದಿದ್ದರು. ಈಹಿನ್ನೆಲೆಯಲ್ಲಿ ತಡೆದು ಪರಿಶೀಲನೆ ನಡೆಸಲಾಗಿದೆ.