Advertisement
ಈ ಸಿನಿಮಾ ಕಾಮಾಟಿಪುರದ ಮಹಿಳೆಯೊಬ್ಬರ ಜೀವನಾಧಾರಿತ ನೈಜ ಕಥಾ ಹಂದರವನ್ನು ಒಳಗೊಂಡಿದ್ದು, ಚಿತ್ರದ ಶೀರ್ಷಿಕೆಯಲ್ಲಿಯೂ ಇದೇ ಹೆಸರನ್ನೇ ನೀಡಲಾಗಿದೆ. ಇದೀಗ ಗಂಗೂ ಬಾಯಿ ಕಾಥಿಯಾವಾಡಿ ಅವರ ಪುತ್ರ ಬಾಪೂಜಿ ರಾವ್ ಜಿ ಶಾ ಅವರು ಆಲಿಯಾ ಭಟ್ ಸೇರಿದಂತೆ ಬನ್ಸಾಲಿ ಪ್ರೊಡಕ್ಷನ್ ಮೇಲೆ ದೂರು ದಾಖಲಿಸಿದ್ದಾರೆ.
Related Articles
Advertisement
ಕ್ರೈಮ್ ಆಧಾರಿತವಾದ ಈ ಸಿನಿಮಾದಲ್ಲಿನ ಕೆಲವು ಅಂಶಗಳು ಗಂಗೂ ಬಾಯಿ ಅವರ ಮಾನಹಾನಿ ಮಾಡುವಂತಿದೆ. ಅಲ್ಲದೆ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವಂತಿದೆ ಎಂದು ಬಾಪೂಜಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ವುಹಾನ್ ಕೋವಿಡ್ ವರದಿ ಮಾಡಿದ ಪತ್ರಕರ್ತೆಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಚೀನಾ ಕೋರ್ಟ್!
ಈ ಸಿನಿಮಾದಲ್ಲಿ ಮಹಿಳೆಯನ್ನು ಅಶ್ಲೀಲ ಚಿತ್ರಿಸಲಾಗಿದೆ ಆದ್ದರಿಂದ ಚಿತ್ರ ತಂಡದ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಧ್ಯತೆಗಳಿವೆ ಎಂದು ಬಾಪೂಜಿ ಪರ ವಕೀಲರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಬಾಂಬೆ ಸಿವಿಲ್ ಕೋರ್ಟ್ ನಡೆಸಲಿದೆ ಎಂದು ವರದಿಯಾಗಿದೆ.
ಸಿನಿಮಾ ಪಸ್ತುತ ವರ್ಷದಲ್ಲಿಯೇ ಬಿಡುಗಡೆ ಹೊಂದಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣ ಅರ್ಧದಲ್ಲಿಯೇ ಸ್ಥಗಿತಗೊಂಡಿತ್ತು. ಆದರೆ ಇದೀಗ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಆ ಬಳಿಕವೇ ಚಿತ್ರ ಬಿಡುಗಡೆ ಹೊಂದುವ ಸಾಧ್ಯತೆಗಳಿವೆ ಎನ್ನಲಾಗಿದೆ.