Advertisement
ಕೆಎಸ್‌ಆರ್‌ಪಿ ಸಹಿತ ಹಲವು ತಂಡಗಳು, ಅಧಿಕಾರಿಗಳು, ಹೋಂ ಗಾರ್ಡ್ಸ್, ಆರೋಗ್ಯ ಕಾರ್ಯಕರ್ತರು ಸ್ಥಳದಲ್ಲಿದ್ದು ಜಿಲ್ಲೆಗೆ ಅಗತ್ಯ ಪ್ರವೇಶ ಬಯಸಿದವರ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಜತೆಗೆ ವೈದ್ಯಕೀಯ ಸ್ಕ್ರೀನಿಂಗ್‌ಗೆ ಒಳಪಡಿಸಲಾಯಿತು. ಮುಂಡ್ಕೂರು ಜಾರಿಗೆಕಟ್ಟೆಯ ಮೂಲಕ ದ.ಕ. ಪ್ರವೇಶಿಸಲೆತ್ನಿಸಿದವ ರನ್ನು ಉಡುಪಿ ಪೊಲೀಸರು ತನಿಖೆಗೊಳಪಡಿಸುತ್ತಿದ್ದಾರೆ.
ಬೈಂದೂರು: ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳಲ್ಲಿ ರುವ ವ್ಯಕ್ತಿಗಳನ್ನು ಶಿರೂರು ಟೋಲ್‌ಗೇಟ್ ಬಳಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯವರನ್ನು ಹೊರತುಪಡಿಸಿ ಅನಗತ್ಯವಾಗಿ ಒಳಬರುವ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬೈಂದೂರು ಭಾಗದಲ್ಲಿ ಕಿರಾಣಿ ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಬೆಳಗ್ಗೆ ರಸ್ತೆಗಿಳಿದ ಜನರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದಾರೆ. ಪೊಲೀಸರಿಂದ ಪಾಠ!
ಪಡುಬಿದ್ರಿ: ಯಾವುದೇ ಮುನ್ನೆಚ್ಚರಿಕೆಗಳನ್ನು ಲೆಕ್ಕಿಸದೆ ದ್ವಿಚಕ್ರ ವಾಹನಗಳಲ್ಲಿ ಜಾಲಿ ರೈಡ್ ಹೊರಟ ಯುವಜನರಿಗೆ ಹೆಜಮಾಡಿಯ ಗಡಿಯಲ್ಲಿ ಪೊಲೀಸರು ಪಾಠ ಹೇಳಿ ಮನೆಗಟ್ಟಿದ್ದಾರೆ. ಕೇವಲ ಹಾಸ್ಟೆಲ್ ಮಕ್ಕಳನ್ನು ಕರೆದು ತರಲು ಮಂಗಳೂರಿನತ್ತ ಹೋಗುತ್ತಿದ್ದ ತಂದೆ ತಾಯಿ, ಹೃದಯ ಸಂಬಂಧಿ ತುರ್ತು ಚಿಕಿತ್ಸಾ ಸೇವೆಗಳಿಗಾಗಿ ಮಂಗಳೂರಿನತ್ತ ಹೋಗಬಯಸಿದ ಆ್ಯಂಬುಲೆನ್ಸ್‌ಗಳನ್ನಷ್ಟೇ ಬಿಡಲಾಗಿದೆ ಎಂದು ಸಿಪಿಐ ದಿನೇಶ್ ಕುಮಾರ್ “ಉದಯವಾಣಿ’ಗೆ ತಿಳಿಸಿದ್ದಾರೆ.