Advertisement

ಚಿಕ್ಕಮಗಳೂರು: ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ತಡೆದ ಜನರ ಮೇಲೆ ಕೇಸ್!

11:59 AM May 22, 2021 | Team Udayavani |

ಚಿಕ್ಕಮಗಳೂರು: ಕೋವಿಡ್ ನಿಯಮಗಳ ನಡುವೆ ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ಗ್ರಾಮಸ್ಥರೇ ತಡೆದು ವಾಪಾಸ್ ಕಳುಹಿಸಿದ್ದ ಸುದ್ದಿಯನ್ನು ಶುಕ್ರವಾರ ಓದಿದ್ದೀರಿ. ಆದರೆ ಇದೀಗ ಅಧಿಕಾರಿಗಳನ್ನು ತಡೆದ ಜನರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ.

Advertisement

ಕೋವಿಡ್ ನಿಯಮಗಳ ನಡುವೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಹತ್ತಕ್ಕೂ ಹೆಚ್ಚು ಜೀಪು ಮತ್ತು ಕಾರಿನಲ್ಲಿ ಮೋಜು ಮಸ್ತಿಗೆಂದು ತೆರಳಿದ್ದರು. ಈ ವೇಳೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದಿದ್ದರು.

ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿಗೆ ಬರಬೇಡಿ ಎಂದು ಗ್ರಾಮಸ್ಥರು ತಡೆದಿದ್ದರು. ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಅಧಿಕಾರಿಗಳು ಅಲ್ಲಿಂದ ಹಿಂತುರುಗಿ ಕೆಮ್ಮಣ್ಣಗುಂಡಿಯತ್ತ ಪ್ರಯಾಣಿಸಿದ್ದರು. ಈ ಸುದ್ದಿ ಮತ್ತು ವಿಡಿಯೋ ಗಳು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಲಾಠಿ ಏಟು: 17 ವರ್ಷದ ಬಾಲಕ ಸಾವು, ಪೊಲೀಸರ ಅಮಾನತು

Advertisement

ಆದರೆ ಇದೀಗ ಅರಣ್ಯಾಧಿಕಾರಿಗಳನ್ನು ತಡೆದು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ನಾಲ್ವರು ಗ್ರಾಮಸ್ಥರ ವಿರುದ್ಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಕೋವಿಡ್ ನಿಂದ ನಮ್ಮ ಗ್ರಾಮವನ್ನು ನಾವು ರಕ್ಷಿಸಬಾರದೇ, ಅಧಿಕಾರಿಗಳು ಕೋವಿಡ್ ನಿಯಮವನ್ನು ಮೀರಿದರೆ  ಪ್ರಶ್ನಿಸಬಾರದೇ? ಅಧಿಕಾರಿಗಳಿಗೆ ಒಂದು ನಿಯಮ, ಜನರಿಗೆ ಒಂದು ನಿಯಮವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ,

Advertisement

Udayavani is now on Telegram. Click here to join our channel and stay updated with the latest news.

Next