Advertisement
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ಪಾ ಮಾಲೀಕ ಅನಿಲ್ ವಿರುದ್ಧ ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಇದೇ ಸ್ಪಾನಲ್ಲಿ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಮತ್ತೂಂದೆಡೆ ಮಹಿಳೆಯ ವಿಚಾರಣೆಯಲ್ಲಿ ಮಧ್ಯ ಪ್ರದೇಶದಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿ, ಬಂಧನಕ್ಕೊಳಗಾಗಿದ್ದಳು ಎಂಬುದು ಗೊತ್ತಾಗಿದೆ. ಆದಾದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಆ ಮಹಿಳೆ ಇದೇ ನಿರ್ವಾಣ ಸ್ಪಾ ಸೆಂಟರ್ನಲ್ಲಿ ಕೆಲಸ ಮಾಡುವಾಗ ಕಳ್ಳತನ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ನಂತರ ಜೈಲಿನಿಂದ ಬಿಡುಗಡೆಯಾಗಿ ಬಂದು ಮಾಲೀಕ ಅನಿಲ… ವಿರುದ್ದ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು. ಮಹಿಳೆ ದೂರು ಆಧರಿಸಿ ಸ್ಪಾ ಮಾಲೀಕನ ಮೇಲೆ ಅತ್ಯಾಚಾರ ಜತೆ ಅಟ್ರಾಸಿಟಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ವೈಟ್ಫೀಲ್ಡ… ಎಸಿಪಿ ನೇತೃತ್ವದ ಪೊಲೀಸರು ಸ್ಪಾಗೆ ಹೋಗಿ ಮಹಜರು ಮಾಡಿದ್ದರು. ಸಿಸಿ ಕ್ಯಾಮೆರಾ ಪರಿಶೀಲನೆ, ಅಲ್ಲಿಯ ಸಿಬಂದಿ ಹೇಳಿಕೆ ಸೇರಿ ಸ್ಥಳ ಮಹಜರು ನಡೆಸಿದ್ದರು. ತನಿಖೆಯ ನಂತರ ಯಾವುದೇ ದಂಧೆ ಅಥವಾ ಅತ್ಯಾಚಾರ ನಡೆದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಪ್ರಸ್ತುತ ಆ ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. Advertisement
Case: ಸ್ಪಾ ಮಾಲೀಕನ ವಿರುದ್ಧ ರೇಪ್ ಕೇಸ್
11:54 AM Jan 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.