Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ
Team Udayavani, Jan 16, 2025, 12:06 PM IST
ಬೆಂಗಳೂರು: ನಗರದ ವಿವಿಧ ಠಾಣೆಯ ಪೊಲೀಸರು 2024ರ ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ 62 ಪ್ರಕರಣ ದಾಖಲಿಸಿ, ಮೂವರು ವಿದೇಶಿ ಪ್ರಜೆಗಳು ಸೇರಿ 85 ಆರೋಪಿಗಳನ್ನು ಬಂಧಿಸಿದ್ಧಾರೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ಬಂಧಿತರಿಂದ 241 ಕೆ.ಜಿ ಗಾಂಜಾ, 48 ಗ್ರಾಂ ಕೊಕೇನ್, 130 ಗ್ರಾಂ ಚರಸ್, 12 ಕೆ.ಜಿ ಎಂಡಿಎಂಎ, 350 ಎಕಸ್ಸೈಸಿ ಮಾತ್ರೆಗಳು, 40 ಎಂಡಿ ಎಂಎ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ.
ಕಾನೂನು ಬಾಹಿರ ಚಟು ವಟಿಕೆ ನಡೆಸುತ್ತಿದ್ದವರ ವಿರುದ್ಧವೂ ಕಳೆದ ತಿಂಗಳ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಮಟ್ಕಾ, ಬೆಟ್ಟಿಂಗ್, ಅಕ್ರಮ ಮದ್ಯ ಮಾರಾಟ, ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ 325 ಪ್ರಕರಣ ದಾಖಲಿಸಿಕೊಂಡು, 411 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Invest Karnataka 2025:ವಾಣಿಜ್ಯ ನಗರಿಯ ಉದ್ಯಮ ದಿಗ್ಗಜರ ಜೊತೆ ಸಚಿವ ಎಂ. ಬಿ. ಪಾಟೀಲ ಚರ್ಚೆ
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: 15 ಬೈಕ್ ಕರಕಲು
Robbery: ಮನೆಗೆ ನುಗ್ಗಿ ಚಿನ್ನ, ನಗದು ದರೋಡೆ; ಬಾಲಕ ಸೇರಿದಂತೆ ಮೂವರ ಬಂಧನ
Arrested: ಬಿಡಿಸಿಸಿ, ಅಪೆಕ್ಸ್ ಬ್ಯಾಂಕ್‌ಗೆ 19 ಕೋಟಿ ರೂ. ವಂಚನೆ: ಮೂವರ ಸೆರೆ
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ