ಪಾರಾದೀಪ್: ಬಿಜೆಡಿ ಶಾಸಕ ಬಿಜಯ್ ಶಂಕರ್ ದಾಸ್ ಅವರು ತಮ್ಮ ಮದುವೆಗೆ ಗೈರಾದ ಹಿನ್ನೆಲೆಯಲ್ಲಿ ಶನಿವಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ವಿವಾಹ ನೋಂದಣಾಧಿಕಾರಿ ಕಚೇರಿಗೆ ಬಾರದೆ ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತಿರ್ತೋಲ್ ಶಾಸಕ ಬಿಜಯ್ ಶಂಕರ್ ದಾಸ್ ವಿರುದ್ಧ ಜಗತ್ ಸಿಂಗ್ ಪುರ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 420 (ವಂಚನೆ), 195A (ಯಾವುದೇ ವ್ಯಕ್ತಿಗೆ ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕುವುದು), 294 (ಅಶ್ಲೀಲ ಕೃತ್ಯಗಳು), 509 (ಮಹಿಳೆಯರ ಗೌರವವನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ), 120 ಬಿ (ಅಪರಾಧದ ಪಿತೂರಿ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಇನ್‌ಸ್ಪೆಕ್ಟರ್-ಇನ್‌ಚಾರ್ಜ್ ಪ್ರವಾಸ್ ಸಾಹು ಹೇಳಿದರು.
ಇದನ್ನೂ ಓದಿ:ವಿಚ್ಛಿದ್ರಕಾರಿ ಶಕ್ತಿಗಳ ಕೈವಾಡ: ಮಾತುಕತೆಗೆ ಬರುವಂತೆ ನಡ್ಡಾ ಆಹ್ವಾನ
ಮೇ 17 ರಂದು ದಂಪತಿಗಳು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ನಿಗದಿತ 30 ದಿನಗಳ ನಂತರ ಶುಕ್ರವಾರ (ಜೂ.17) ಮದುವೆಯ ವಿಧಿವಿಧಾನಗಳಿಗಾಗಿ ಮಹಿಳೆ ತನ್ನ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದರೂ, ಶಾಸಕರು ಗೈರಾಗಿದ್ದರು.
“ಆಕೆಯನ್ನು ಮದುವೆಯಾಗುವುದಿಲ್ಲ ಎಂದೆನೂ ನಾನು ಹೇಳಿಲ್ಲ. ಆದರೆ ಮದುವೆ ನೋಂದಣಿಗೆ ಇನ್ನೂ 60 ದಿನಗಳು ಇವೆ. ಆದ್ದರಿಂದ ನಾನು ಬಂದಿಲ್ಲ. ಮದುವೆ ರಿಜಿಸ್ಟ್ರಾರ್ ಕಚೇರಿಗೆ ಹೋಗಲು ಆಕೆ ಅಥವಾ ಬೇರೆಯವರು ನನಗೆ ತಿಳಿಸಲಿಲ್ಲ” ಎಂದು 30 ವರ್ಷದ ಶಾಸಕ ಬಿಜಯ್ ಶಂಕರ್ ದಾಸ್ ಸುದ್ದಿಗಾರರಿಗೆ ತಿಳಿಸಿದರು.
ಮೂರು ವರ್ಷಗಳಿಂದ ಬಿಜಯ್ ಶಂಕರ್ ದಾಸ್ ಜೊತೆ ಸಂಬಂಧ ಹೊಂದಿದ್ದು, ನಿಗದಿತ ದಿನಾಂಕದಂದು ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.