ದೊಡ್ಡಬಳ್ಳಾಪುರ: ನಗರದ ಹೊರವಲಯದ ಕೊಡಿಗೆ ಹಳ್ಳಿಯಲ್ಲಿನ ಆತ್ರೇಯಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಹಾಗೂ ಶಾಸಕಟಿ. ವೆಂಕಟರಮಣಯ್ಯ ಭೇಟಿ ನೀಡಿ,ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ತಾಲೂಕಿನಲ್ಲಿಪ್ರತಿದಿನವೂ ಕೋವಿಡ್ ಸೋಂಕಿತರ ಸಂಖ್ಯೆಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನ ಇತ್ತೂರು ಮಾಡೇಶ್ವರ ಸಮೀಪದಲ್ಲಿನ ವಸತಿ ಶಾಲೆಗಳಲ್ಲಿ ಕೊವಿಡ್ ಸೋಂಕಿತರ ಆರೈಕೆ ಕೇಂದ್ರವನ್ನುಆರಂಭಿಸಲಾಗಿದೆ.
ಹೋಂ ಕ್ವಾರೆಂಟೈನ್‌ನಲ್ಲಿಇರಲು ಅವಕಾಶ ಇಲ್ಲದವರಿಗೆ ಈ ಕೇಂದ್ರಗಳಲ್ಲಿಅಗತ್ಯ ಔಷಧಿಯೊಂದಿಗೆ ಚಿಕಿತ್ಸೆನೀಡಲಾಗುವುದು.ಆತ್ರೇಯ ಆಯುರ್ವೇದ ಆಸ್ಪತ್ರೆಯಲ್ಲಿ 100 ಹಾಸಿಗೆಳನ್ನುಸಿದ್ದಪಡಿಸಲಾಗುತ್ತಿದ್ದು, ಇಲ್ಲಿ ದಾಖಲಾಗುವರೋಗಿಗಳಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆಕಲ್ಪಿಸಲಾಗುವುದು ಎಂದರು.
ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲು :ಆತ್ರೇಯಾ ಆಯುರ್ವೇದ ವೈದ್ಯಕೀಯಮಹಾವಿದ್ಯಾಲಯ, ಆಸ್ಪತ್ರೆ ಹಾಗೂಸಂಶೋಧನಾ ಕೇಂದ್ರವು ನೂರು ಹಾಸಿಗೆಗಳುಳ್ಳ ಆಸ್ಪತ್ರೆಯೆಂದು ಸುಳ್ಳು ಪುರಾವೆ ನೀಡಿದ ಹಿನ್ನೆಲೆವಿಪತ್ತು ನಿರ್ವಹಣಾ ಕಾಯ್ದೆ 2005ರಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಭೇಟಿನೀಡಿ, ಪರಿಶೀಲಿಸಿದ ಸಂದರ್ಭದಲ್ಲಿ ಒಂದುಹಾಸಿಗೆಯ ವ್ಯವಸ್ಥೆಯೂ ಕಾಣದ ಹಿನ್ನೆಲೆ,ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾದೇವಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ನರೇಂದ್ರ ಬಾಬು ಇತರರಿದ್ದರು.