ಮಣಿಪಾಲ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಅಂದಿನ ಸರಕಾರ ಸೇಡಿನ ರಾಜಕಾರಣ ಮಾಡಿ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಹೀಗಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿವಕುಮಾರ್ ವಿರುದ್ಧದ ಹಿಂದಿನ ಸರಕಾರದ ಆದೇಶವನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅಂದಿನ ಸರಕಾರ ಸ್ಪೀಕರ್ ಒಪ್ಪಿಗೆ ಹಾಗೂ ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆ ದಿಲ್ಲ. ಮುಖ್ಯಮಂತ್ರಿ ಮೌಖಿಕ ಆದೇಶ ನೀಡಿದ್ದರು. ಇದು ರಾಜಕೀಯ ಪ್ರೇರಿತವಾಗಿತ್ತು ಎಂದರು.
ನಮ್ಮ ಇಲಾಖೆ ಅಥವಾ ನನ್ನ ಮೇಲಿನ ಭ್ರಷ್ಟಾ ಚಾರದ ಆರೋಪವಿದ್ದರೆ ತನಿಖೆಯಾಗಲಿ ಎಂದ ಅವರು, ಅಂಗನವಾಡಿ ಮೇಲ್ವಿಚಾರಕಿಯರ ಮೊಬೈಲ್ ಸ್ವಿಚ್ ಆಫ್ ಸಂಬಂಧಿಸಿ ಕೇಂದ್ರದಿಂದ ಅನುದಾನ ಬರಬೇಕಿದೆ. ಈಗ 74 ಕೋ.ರೂ. ಬಂದಿದ್ದು, ಶೀಘ್ರ ಸಮಸ್ಯೆ ಬಗೆಹರಿಯ ಲಿದೆ. ಅಂಗನ ವಾಡಿ ಬಾಡಿಗೆ ಕಟ್ಟಡಗಳ ಬಾಡಿಗೆ ಪಾವತಿಸದಿರುವ ಸಮಸ್ಯೆಯನ್ನೂ ಬಗೆಹರಿಸುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳ ಸಭೆ
ಉಡುಪಿ ನಗರಕ್ಕೆ ವಾರಾಹಿಯ ಕುಡಿಯುವ ನೀರಿನ ಯೋಜನೆಯನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಬೇಕು. ವಾರಾಹಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಲು ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭೆ ಶೀಘ್ರ ನಡೆಯಲಿದೆ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಲಾಗುವುದು ಎಂದರು.
ಸಮುದ್ರದ ಉಪ್ಪು ನೀರು, ನದಿ ನೀರಿಗೆ ಸೇರುವುದನ್ನು ತಡೆಯುವ ಖಾರ್‌ಲ್ಯಾಂಡ್ ಯೋಜನೆ ನಿರ್ಮಾಣದ 11 ಕಾಮಗಾರಿ ವರದಿಗೆ ಪ್ರಾದೇ ಶಿಕ ನಿರ್ದೇಶಕರಿಂದ (ಪರಿಸರ) ಅನು ಮೋದನೆ ಪಡೆದು ನಿಗದಿತ ಕಾಲಾವಧಿ ಯಲ್ಲಿ ಪೂರ್ಣಗೊಳಿಸಲಾಗುವುದು. ಕುಮ್ಕಿ ಜಾಗದಲ್ಲಿ ಮನೆಕಟ್ಟಿರುವ 94ಸಿ/ 94 ಸಿಸಿಯಡಿ ಅರ್ಜಿ ಹಾಕಿ ರುವ ಬಗ್ಗೆಯೂ ಚರ್ಚೆ ನಡೆಯಿತು. ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು. ಅವು ಗಳನ್ನು ನಿಯಾನುಸಾರವಾಗಿ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಶೀಘ್ರ ಪರಿಹಾರ
ಗಂಗೊಳ್ಳಿಯ ದೋಣಿ ಅಗ್ನಿ ದುರಂತದ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ಕೊಡಿಸುವ ಭರವಸೆ ನೀಡಿದರು.