Advertisement

flight ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ ಸ್ಟೀಲ್‌ ಸಂಸ್ಥೆ ಸಿಇಒ ವಿರುದ್ಧ ಕೇಸು

01:01 AM Jul 22, 2024 | Team Udayavani |

ಹೊಸದಿಲ್ಲಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ಟೀಲ್‌ ಕಂಪೆನಿಯೊಂದರ ಸಿಇಒ ದಿನೇಶ್‌ ಕುಮಾರ್‌ ಸರೋಗಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಯಡಿ ಪ್ರಕರಣ ದಾಖಲಿಸಲಾಗಿದೆ.

Advertisement

ಅಬುಧಾಬಿಯಿಂದ ಕೋಲ್ಕತಾಗೆ ಬರುವ ವೇಳೆ ದಿನೇಶ್‌, ವಿಮಾನದಲ್ಲಿದ್ದ ಮಹಿಳೆ ಜತೆ ಸಂಭಾಷಣೆ ಆರಂಭಿಸಿ ಅವರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

X ನಲ್ಲಿನ ಪೋಸ್ಟ್‌ನಲ್ಲಿ, ಕೋಲ್ಕತಾದಿಂದ ಅಬುಧಾಬಿಗೆ ಬರುತ್ತಿದ್ದ ವಿಮಾನದಲ್ಲಿ ಸರೋಗಿ ತನ್ನೊಂದಿಗೆ ಹೇಗೆ ಸಂಭಾಷಣೆಯನ್ನು ಪ್ರಾರಂಭಿಸಿದರು ಎಂಬುದನ್ನು ಮಹಿಳೆ ವಿವರಿಸಿದ್ದಾರೆ. ಸರೋಗಿ ತನ್ನ “ಕೆಲವು ವಿಡಿಯೋ ತುಣುಕುಗಳನ್ನು” ತೋರಿಸುವ ಮೊದಲು ಅವರು ತಮ್ಮ ಹಿನ್ನೆಲೆ, ಹವ್ಯಾಸಗಳು ಮತ್ತು ಕುಟುಂಬಗಳ ಬಗ್ಗೆ “ಸಾಮಾನ್ಯ ಸಂಭಾಷಣೆ” ಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

“ನನಗೆ ಅಶ್ಲೀಲ ವಿಡಿಯೋ ತೋರಿಸಲು ಆರಂಭಿಸಿ ಫೋನ್ ಮತ್ತು ಇಯರ್‌ಫೋನ್‌ಗಳನ್ನು ನೀಡಿ ನನ್ನನ್ನು ಹಿಡಿಯಲು ಪ್ರಾರಂಭಿಸಿದ್ದು ನಾನು ಆಘಾತಗೊಂಡು ದಿಕ್ಕು ತೋಚದೆ ವಾಶ್‌ರೂಮ್‌ಗೆ ಓಡಿಹೋಗಿ ಸಿಬಂದಿಗೆ ದೂರು ನೀಡಿದೆ. ಸಿಬಂದಿಗಳು ನನ್ನನ್ನು ತಮ್ಮ ಆಸನ ಪ್ರದೇಶದಲ್ಲಿ ಕೂರಿಸಿ ಚಹಾ ಮತ್ತು ಹಣ್ಣುಗಳನ್ನು ನೀಡಿ ಸಮಾಧಾನಪಡಿಸಿದರು ” ಎಂದು X ಪ್ರೊಫೈಲ್‌ನಲ್ಲಿ ಹಾರ್ವರ್ಡ್‌ನಲ್ಲಿ ನಡೆದ ಭಾರತ ಸಮ್ಮೇಳನದ ಸಹ ಅಧ್ಯಕ್ಷೆ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next