Advertisement
ಮಂಗಳವಾರ ಬೆಳಗ್ಗೆ 10.26ಕ್ಕೆದು ರ್ಘಟನೆ ಸಂಭವಿಸಿತ್ತು. ಕಟ್ಟಡ ಎಬ್ಬಿಸಲೆಂದು ನೆಲದಿಂದ 30 ಅಡಿಯಷ್ಟು ಆಳ ಗುಂಡಿಗಳನ್ನು ತೋಡಿದ್ದು, ಇದರ ತಳಭಾಗದಲ್ಲಿ ಒಟ್ಟು ಆರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭ ಬರೆ ಕುಸಿದು ಬಿದ್ದು, ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮಂಗಳೂರಿನ ಜಲ್ಲಿಗುಡ್ಡೆ ನಿವಾಸಿ ಪದ್ಮನಾಭ (35) ಹಾಗೂ ಕೊಪ್ಪಳದ ಅಡವಿಬಾವಿ ನಿವಾಸಿ ಶಿವು ಯಾನೆ ಶಿವಣ್ಣ (40) ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕುಷ್ಟಗಿಯ ಮಹಾಂತೇಶ್ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Related Articles
ಕಟ್ಟಡದ ಕಾಮಗಾರಿ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್, ಶೂ ಮೊದಲಾದ ಪರಿಕರಗಳನ್ನು ನೀಡಬೇಕು ಎಂಬ ನಿಯಮವಿದೆ. ಆದರೆ ಇದಾವುದನ್ನೂ ಕಾಮಗಾರಿ ವೇಳೆ ಕಾರ್ಮಿಕರಿಗೆ ಪೂರೈಕೆ ಮಾಡಿಲ್ಲ. ಇದನ್ನು ಬಳಸದೇ ಇರುವುದರಿಂದ ಪ್ರಕರಣ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಗಂಭೀರ ಗಾಯಗೊಂಡಿರುವ ಮಹಾಂತೇಶ್ ಅವರ ತಲೆಗೇ ಬಲವಾದ ಪೆಟ್ಟು ಬಿದ್ದಿದೆ.
Advertisement
ಅವೈಜ್ಞಾನಿಕ ಕಾಮಗಾರಿಬರೆಯನ್ನು 30 ಅಡಿ ಆಳಕ್ಕೆ ಕೊರೆದು ಆವರಣ ಗೋಡೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿತ್ತು. ಆವರಣ ಗೋಡೆ ಎಬ್ಬಿಸಲೆಂದು ಬರೆಯನ್ನು ಟೊಳ್ಳಾಗಿ ಕೊರೆದಿರುವುದು ದುರಂತಕ್ಕೆ ಪ್ರಮುಖ ಕಾರಣ. ತಳದಲ್ಲಿ ಬರೆಯನ್ನು ಟೊಳ್ಳಾಗಿ ಕೊರೆದರೆ, ಮೇಲ್ಭಾಗದ ಮಣ್ಣು ಕುಸಿದು ಬೀಳುವುದು ಸಹಜ. ಹೀಗಾಗಿ, ಕಾಮಗಾರಿ ನಿರ್ವಹ ಣೆಯೂ ಅವೈಜ್ಞಾನಿಕವಾಗಿದೆ. ಅಕ್ರಮ ಕಟ್ಟಡ!
ವರ್ಷಗಳ ಹಿಂದೆ ಕಟ್ಟಡ ಕಾಮಗಾರಿಗಾಗಿ ಪರವಾನಿಗೆ ಪಡೆದುಕೊಳ್ಳಲಾಗಿತ್ತು. ಇದರ ಅವಧಿ 2018ರ ಎಪ್ರಿಲ್ 14ಕ್ಕೆ ಕೊನೆಗೊಂಡಿತ್ತು. ಎ. 17ರಂದು ಪರವಾನಿಗೆ ನವೀಕರಣಕ್ಕೆ ಅರ್ಜಿ ನೀಡಿದ್ದು, ಇನ್ನೂ ಪರವಾನಿಗೆ ನೀಡಿರಲಿಲ್ಲ. ಅವಧಿ ಮೀರುವ ದಿನಾಂಕದ ಒಂದು ತಿಂಗಳು ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. ಆದ್ದರಿಂದ ಇದನ್ನು ಅನಧಿಕೃತ ಕಟ್ಟಡ ನಿರ್ಮಾಣ ಎಂದು ಪರಿಗಣಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.