Advertisement

ಮಂದಸ್ಮಿತನಿಗೆ ವ್ಯಂಗ್ಯಚಿತ್ರಾಭಿಷೇಕ 

08:15 AM Mar 02, 2018 | |

ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಗೆ ಎರೆದ 88ನೇ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಬಂದ ಜನಸ್ತೋಮವನ್ನು ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾರ್ಟೂನ್‌ ಪ್ರದರ್ಶನವೂ ಆಕರ್ಷಿಸಿತು. ಹಾಸನದ ಎಂ. ವಿ. ಶಿವರಾಮ್‌ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸಹಯೋಗದಲ್ಲಿ ಫೆ.17ರಿಂದ 26ರವರೆಗೆ ಪ್ರದರ್ಶನ ಏರ್ಪಡಿಸಿದ್ದರು. 

Advertisement

ರಾಜ್ಯದ ಹೆಚ್ಚಿನ ಎಲ್ಲ ವ್ಯಂಗ್ಯಚಿತ್ರಕಾರರ ಉತ್ತಮ ಕಾರ್ಟೂನ್‌ಗಳನ್ನು ಆಹ್ವಾನಿಸಿ ಇಲ್ಲಿ ಪ್ರದರ್ಶಿಸಲಾಗಿತ್ತು. ರಾಜಕೀಯ ವಿಡಂಬನೆಗಳನ್ನು ಸಾಮಾಜಿಕ ರೂಪ ನೀಡಿ ಹೇಳುವ ಕಲೆಯಲ್ಲಿ ಪರಿಣತಗೊಂಡ ವ್ಯಂಗ್ಯಚಿತ್ರಕಾರರ ಚಿತ್ರಗಳು ಹಾಗೂ ಪರಿಸರ ಮಾಲಿನ್ಯ, ರಸ್ತೆ ಸುರಕ್ಷತೆ, ಸ್ವತ್ಛ ಭಾರತ ಮುಂತಾದ ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಟೂನ್‌ಗಳು ವೀಕ್ಷಕರ ಗಮನ ಸೆಳೆದುವು. ಸಾಹಿತಿಗಳ, ಸಿನಿಮಾ ನಟರ ಮತ್ತಿತರ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರ ಕ್ಯಾರಿಕೇಚರ್‌ಗಳು ಕೂಡ ಪ್ರದರ್ಶನದ ಹೈ ಲೈಟ್‌ ಆಗಿದ್ದವು. 

ವಿ.ಆರ್‌.ಸಿ ಶೇಖರ್‌, ಜಿ. ಎಸ್‌. ನಾಗನಾಥ್‌, ಎಂ. ವಿ. ಶಿವರಾಂ, ನಂಜುಂಡ ಸ್ವಾಮಿ, ಜೇಮ್ಸ್‌ ವಾಜ್‌, ಜೀವನ್‌ ಶೆಟ್ಟಿ, ಪಿ. ಮಹಮ್ಮದ್‌, ಏಕನಾಥ್‌ ಬೊಂಗಾಳೆ, ಸಂಕೇತ್‌ ಗುರುದತ್ತ, ನಟರಾಜ್‌ ಅರಳಸುರುಳಿ, ಶೈಲೇಶ್‌ ಉಜಿರೆ, ರಾಮಧ್ಯಾನಿ, ರಘುಪತಿ ಶೃಂಗೇರಿ, ಯತೀಶ್‌ ಸಿದ್ಧಕಟ್ಟೆ, ಜಿ. ಎಂ. ಬೊಮ್ನಳ್ಳಿ, ದತ್ತಾತ್ರಿ, ಎಂ. ಎನ್‌. ಗಂಗಾಧರ ಅಡ್ಡೇರಿ, ಚೇತನ್‌, ಶರದ್‌ ಕುಲಕರ್ಣಿ, ಅರುಣ್‌ ಕುಮಾರ್‌, ಈರಣ್ಣ ಬೆಂಗಾಲಿ, ನಾರಾಯಣ ರೈ, ರಾಮಪ್ರಸಾದ್‌ ಭಟ್‌, ರಂಗನಾಥ್‌ ಸಿದ್ಧಾಪುರ, ಶ್ರೀಧರ್‌ ಕೋಮರವಲ್ಲಿ ಮತ್ತಿತರ ಕಲಾವಿದರ‌ ಸುಮಾರು 300 ವ್ಯಂಗ್ಯಚಿತ್ರಗಳು ಪ್ರದರ್ಶನ ಕಂಡವು.

ಪ್ರಪ್ರಥಮ ಬಾರಿಗೆ ಮಂದಸ್ಮಿತ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕದ ಜತೆಗೆ ನಗೆಗೆರೆಗಳ ಚಿತ್ರಾಭಿಷೇಕದ ಮೂಲಕ ಹಾಸ್ಯದ ಹೊನಲು ಹರಿಸಿ ವ್ಯಂಗ್ಯಚಿತ್ರಕಾರರು ಧನ್ಯರಾದರು. 

ವಿನ್ಯಾಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next