Advertisement

ಬ್ಯಾಂಕಾಪುರದ ವ್ಯಂಗ್ಯಚಿತ್ರ ಪ್ರದರ್ಶನ

03:02 PM Dec 01, 2018 | |

ಬ್ಯಾಂಕ್‌ಗೆ ಸಮಾಜದ ಎಲ್ಲ ಸ್ತರಗಳ ಜನರೂ ಬರುತ್ತಾರೆ. ಬ್ಯಾಂಕ್‌ ಅಕೌಂಟ್‌ ತೆರೆಯಲು ಬರುವವರು, ಠೇವಣಿ ಇಡಲು ಬರುವ ಶ್ರೀಮಂತರು, ಸಹಿ ಹಾಕಲೂ ಬಾರದ ಅನಕ್ಷರಸ್ಥರು, ಹಣ ಕಳೆದಿದ್ದೀರೆಂದು ಮ್ಯಾನೇಜರ್‌ ಜೊತೆ ಜಗಳಕ್ಕೆ ಬರುವವರು… ಹೀಗೆ ನೂರಾರು ಬಗೆಯ ಜನರನ್ನು ಅಲ್ಲಿ ಕಾಣಬಹುದು. ಹಾಗಾಗಿ ಅಲ್ಲಿ ಹಾಸ್ಯ ಪ್ರಸಂಗಗಳಿಗೇನೂ ಬರವಿಲ್ಲ. ಆ ಎಲ್ಲ ಪ್ರಸಂಗಗಳನ್ನು ತಮ್ಮ ಮೊನಚು ಗೆರೆಗಳಿಂದ ಚಿತ್ರವನ್ನಾಗಿಸಿ ದವರು ಎಚ್‌.ಎಸ್‌.ವಿಶ್ವನಾಥ.

Advertisement

ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಎಚ್‌ಎಸ್‌ವಿ, ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರಕಾರರು. ರಾಜ್ಯದ ಅನೇಕ ಪತ್ರಿಕೆ, ಮಾಸಿಕ, ವಾರಪತ್ರಿಕೆಗಳಲ್ಲಿ ಪ್ರಕಟವಾದ ಇವರ ಸಾವಿರಾರು ವ್ಯಂಗ್ಯಚಿತ್ರಗಳು ಜನರಿಗೆ ಮೆಚ್ಚಿಗೆಯಾಗಿವೆ. ನಿವೃತ್ತಿಯ ನಂತರ, ತಮ್ಮ ವೃತ್ತಿಜೀವನಕ್ಕೆ ಸಂಬಂ ಧಿಸಿದ ಎಲ್ಲ ವ್ಯಂಗ್ಯಚಿತ್ರಗಳನ್ನು ಸೇರಿಸಿ Bankartoons ಎಂಬ ಸಂಕಲನವನ್ನು ಹೊರತಂದಿ ದ್ದಾರೆ. ಈಗ, ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಬ್ಯಾಂಕಾಟೂìನ್‌ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಇಂದು ಬೆಳಗ್ಗೆ 11 ಗಂಟೆಗೆ, ಕಾರ್ಪೋರೇಷನ್‌ ಬ್ಯಾಂಕ್‌ನ ಅಸಿಸ್ಟಂಟ್‌ ಜನರಲ್‌ ಮ್ಯಾನೆಜರ್‌ ಕೆ. ದಿವಾಕರ್‌ ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನ 15 ದಿನ ನಡೆಯಲಿದೆ.

 ಎಲ್ಲಿ? ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ

 ಮಿಡ್‌ಫೋರ್ಡ್‌ ಹೌಸ್‌, ಮಿಡ್‌ಫೋರ್ಡ್‌
ಗಾರ್ಡನ್‌, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ
ಯಾವಾಗ?: ಡಿ.1-15, ಬೆಳಗ್ಗೆ 10-ಸಂಜೆ 6
„ ಹೆಚ್ಚಿನ ವಿವರಗಳಿಗೆ: 99800091428

Advertisement

Udayavani is now on Telegram. Click here to join our channel and stay updated with the latest news.

Next