Advertisement
ಮೆದುಳಿನ ಅರ್ಧಭಾಗದ ವಿಕಸನ ಪಾಠೇತರ ಚಟುವಟಿಕೆ ಯಿಂದ ಆಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಬರೇ ಪಾಠಗಳನ್ನು ಉರು ಹೊಡೆದು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಾತ್ರಕ್ಕೆ ಮಕ್ಕಳು ಪ್ರತಿಭಾಸಂಪನ್ನರೆಂದು ಹೇಳಲಾಗದು. ಲಲಿತಕಲೆ- ಕುಶಲಕಲೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದೂ ಮುಖ್ಯವಾಗುತ್ತದೆ. ಏಕೆಂದರೆ ಮನುಷ್ಯ ಭಾವಜೀವಿ. ಅವನಲ್ಲಿ ಭಾವನೆಗಳು ಅರಳಿದಾಗ ಅದನ್ನು ಪ್ರಸ್ತುತಪಡಿಸಲು ಇರುವ ಮಾಧ್ಯಮವೆಂದರೆ ಲಲಿತಕಲೆಗಳು. ಇವುಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಜೀವನದ ಬೇಸರಗಳನ್ನು ಮರೆತು ಪುನಶ್ಚೇತನಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೂ ಶಾಲಾ ಪಾಠಗಳ ಬೇಸರ ಮರೆತು ಪುನಶ್ಚೇತನಗೊಳ್ಳಲು ಮಧ್ಯೆ ಮಧ್ಯೆ ಕಲಾಚಟುವಟಿಕೆಗಳು ಅತ್ಯವಶ್ಯಕ. ಈ ಕ್ರಿಯೆ ಶಾಲೆಗಳಲ್ಲಿ ನಿರಂತರವಾದಾಗ ಮಕ್ಕಳ ಪ್ರತಿಭೆಯ ಅನಾವರಣವಾಗುತ್ತದೆ. ಅದಕ್ಕಾಗಿ ವಿಕಸನ ಶಿಬಿರಗಳು ಶಾಲೆಗಳಲ್ಲಿ ಆಗಾಗ್ಗೆ ನಡೆಯುತ್ತಿದ್ದರೆ ಚೆನ್ನ. ಇದಕ್ಕೆ ಪೂರಕವಾಗಿ ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಒಂದು ದಿನದ ವ್ಯಂಗ್ಯಚಿತ್ರ (ಕಾರ್ಟೂನ್) ರಚನಾ ಶಿಬಿರ ನಡೆದು ಮಕ್ಕಳು ಖುಷಿಪಟ್ಟರು. ಅವರಲ್ಲಿ ಸುಪ್ತವಾಗಿರುವ ಪ್ರತಿಭೆಗಳು ಅನಾವರಣಗೊಂಡವು.
Advertisement
ಕಾರ್ಟೂನ್ ಕ್ಯಾಂಪ್ ವಿದ್ಯಾರ್ಥಿಗಳು ನಕ್ಕು ನಲಿದರು
03:35 AM Jun 30, 2017 | |
Advertisement
Udayavani is now on Telegram. Click here to join our channel and stay updated with the latest news.