Advertisement

ಕ್ಯಾರಿ ಓವರ್‌, ಉಚಿತ ಬಸ್‌ ಪಾಸ್‌ಗಾಗಿ ಪ್ರತಿಭಟನೆ

07:00 AM Jul 26, 2018 | |

ಉಡುಪಿ: ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್‌ ಪದ್ಧತಿಯನ್ನು ಜಾರಿಗೆ ತರಬೇಕು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಸರ್ವಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜು.25ರಂದು ಮಣಿಪಾಲ ಈಶ್ವನರಗರ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
 
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಸ್ಥಾಪಕಾಧ್ಯಕ್ಷ ದಿನಕರ ಶೆಟ್ಟಿ ಅವರು, ಕ್ಯಾರಿ ಓವರ್‌  ಪದ್ಧತಿ ಇಲ್ಲದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಘ ನಿರಂತರ ಹೋರಾಟ ಮಾಡುತ್ತಿದೆ. ಈ ಬಾರಿ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಶೇ. 80 ಹಾಜರಾತಿಯನ್ನು ಕಡ್ಡಾಯಗೊಳಿಸಿರುವುದು ಕೂಡ ಸರಿಯಲ್ಲ ಎಂದು ಹೇಳಿದರು.

Advertisement

ಕೇವಲ ಸರಕಾರಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡಲಾಗುವುದು ಎಂಬ ತಮ್ಮ ಹೇಳಿಕೆಯನ್ನು ಮುಖ್ಯಮಂತ್ರಿಯವರು ವಾಪಸ್ಸು ಪಡೆಯಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಪಾಸ್‌ ನೀಡಬೇಕು. ಇದಕ್ಕೆ ಹೆಚ್ಚುವರಿಯಾಗಿ ಆರ್ಥಿಕ ಹೊರೆ ಉಂಟಾಗುವುದಾದರೆ ಅದನ್ನು ಎಲ್ಲಾ ಶಾಸಕರು ಭರಿಸಬೇಕು ಎಂದು ದಿನಕರ ಶೆಟ್ಟಿ ಹೇಳಿದರು.

ಸಂಘದ ಪದಾಧಿಕಾರಿ, ಮಂಗಳೂರು ವಿ.ವಿ. ಸೆನೆಟ್‌ ಮಾಜಿ ಸದಸ್ಯ ರಾಮಾಂಜಿ ಅವರು ಮಾತನಾಡಿ” ಶಾಸಕರು ವಿದ್ಯಾರ್ಥಿಗಳ ಸಮಸ್ಯೆಯ ಕುರಿತು ಸರಕಾರದ ಗಮನ ಸೆಳೆಯಬೇಕು’ ಎಂದು ಮನವಿ ಮಾಡಿದರು. ಖಾಸಗಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡು ತ್ತಿರುವ ಬಿಪಿಎಲ್‌ ವಿದ್ಯಾರ್ಥಿ ಗಳಿಗಾದರೂ ಉಚಿತ ಬಸ್‌ ಪಾಸ್‌ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ  ತಿಳಿಸಿದರು. ಪ್ರತಿಭಟನೆಯ ಅನಂತರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸೂರಜ್‌ ಇಂದ್ರಾಳಿ, ಕಾರ್ಯದರ್ಶಿ ರಘುವೀರ್‌, ಪದಾಧಿಕಾರಿಗಳಾದ ರಂಜನ್‌, ಸಚಿನ್‌, ಅಭಿರಾಜ್‌, ಅಶ್ವಿ‌ತ್‌  ಪಾಲ್ಗೊಂಡಿದ್ದರು. ಟಿ.ಎಂ.ಎ ಪೈ ಪಾಲಿಟೆಕ್ನಿಕ್‌, ಇಂದಿರಾ ಶಿವರಾವ್‌ ಪಾಲಿಟೆಕ್ನಿಕ್‌, ಜಿಪಿಟಿ ಪಾಲಿಟೆಕ್ನಿಕ್‌ ಹಾಗೂ ಐಟಿಐ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next