Advertisement

ಗುಣಮಟ್ಟದ ಬೀಜೋತ್ಪಾದನೆಯಿಂದ ಬಿತ್ತನೆ ಕೈಗೊಳ್ಳಿ

05:38 PM Mar 18, 2022 | Team Udayavani |

ಬಾಗಲಕೋಟೆ: ರೈತರು ನಕಲಿ ಬೀಜಗಳು ಬಿತ್ತದೆ ಗುಣಮಟ್ಟದ ಬೀಜಗಳಿಂದ ಬಿತ್ತನೆ ಮಾಡುವ ಮೂಲಕ ಉತ್ತಮ ಫಸಲು ಪಡೆದುಕೊಳ್ಳಲು ಮುಂದಾಗಬೇಕು ಎಂದು ತೋವಿ ವಿಶ್ವವಿದ್ಯಾಲಯದ ಕುಲಪತಿ ಡಾ|ಕೆ.ಎಂ. ಇಂದಿರೇಶ ಹೇಳಿದರು.

Advertisement

ನವನಗರದ ಸೆಕ್ಟರ್‌ ನಂ.1 ರಲ್ಲಿ ಬೀಜ ಘಟಕ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈರುಳ್ಳಿ ಬೀಜೋತ್ಪಾದನಾ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಸಂಶೋಧನಾ ನಿರ್ದೇಶಕ ಡಾ|ಎಚ್‌.ಪಿ. ಮಹೇಶ್ವರಪ್ಪ ಮಾತನಾಡಿ, ಬೀಜೋತ್ಪಾದನೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು. ರೈತರು ಯಾವಾಗಲೂ ಒಂದೇ ಬೆಳೆಯ ಮೇಲೆ ಅವಲಂಬಿತರಾಗದೆ ಬೇಡಿಕೆ ಇರುವ ಹೆಚ್ಚು ಇಳುವರಿ ಕೊಡುವ ತಳಿಗಳ ಜೋತ್ಪಾದನೆಯನ್ನು ಮಾಡಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ|ರಾಹುಲಕುಮಾರ ಬಾವಿದೊಡ್ಡಿ ಮಾತನಾಡಿ, ತೋವಿವಿಯ ಶಿಫಾರಿತ ಹಾಗೂ ತೋವಿವಿಯಲ್ಲಿ ಲಭ್ಯವಿರುವ ಬೀಜಗಳನ್ನು ಪಡೆದು ಬಿತ್ತನೆ ಮಾಡುವುದು ರೈತರ ಅಭಿಲಾಷೆಯಾಗಬೇಕು. ರೈತರ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ಹೆಚ್ಚಿನ ಬೀಜೋತ್ಪಾದನೆ ಕೈಗೊಂಡರೆ ಹೆಚ್ಚು ರೈತರಿಗೆ ಬೀಜ ಒದಗಿಸಬಹುದು ಎಂದರು.

ವಿಸ್ತರಣಾ ನಿರ್ದೇಶಕ ಡಾ|ಎಸ್‌.ಐ. ಅಥಣಿ ಮಾತನಾಡಿ, ರೈತರು ವಿಶ್ವವಿದ್ಯಾಲಯದಿಂದ ಬಿಡುಗಡೆಯಾಗಿರುವ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದು ಅವುಗಳನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ರೈತರು ತಾವೇ ವೈಜ್ಞಾನಿಕ ರೀತಿಯಲ್ಲಿ ಬೀಜೋತ್ಪಾದನೆಯನ್ನು ಕೈಗೊಂಡು ಇತರೆ ರೈತರಿಗೆ ಗುಣಮಟ್ಟದ ಬೀಜಗಳನ್ನು ಒದಗಿಸಬೇಕು ಹಾಗೂ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಂಡು ಉತ್ತಮ
ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ವಿಶ್ವವಿದ್ಯಾಲಯಕ್ಕೆ ನೀಡಲು ಕೈಜೋಡಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

Advertisement

ಬೀಜ ಘಟಕದ ವಿಶೇಷಾಧಿ ಕಾರಿ ಡಾ| ಎಂ.ಎಸ್‌. ಲೋಕೇಶ್‌, ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ|ಕುಲಪತಿ ಹಿಪ್ಪರಗಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ವಿಸ್ತರಭಾ ಮುಂದಾಳು ಡಾ|ಶಶಿಕುಮಾರ ಎಸ್‌., ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಸಹಾಯಕ ನಿರ್ದೇಶಕ ಶ್ರೀಕಾಂತ ಗಿಡಗಂಟಿ ಹಾಗೂ ವಿಶ್ವವಿದ್ಯಾಲಯದ ಇತರೆ ಅ ಕಾರಿಗಳು, ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಈರುಳ್ಳಿ ಬೀಜೋತ್ಪಾದಕರಿಗೆ ತಾಂತ್ರಿಕ ಮಾರ್ಗದರ್ಶನ, ಸಲಹೆ, ಸಂಯೋಜನೆ ಕುರಿತಾಗಿ ಚರ್ಚೆ ಹಾಗೂ ಸಂವಾದ ನಡೆಸಿದರು.

ವಿಸ್ತರಣಾ ಮುಂದಾಳು ಡಾ| ಶಶಿಕುಮಾರ ಎಸ್‌. ಸ್ವಾಗತಿಸಿದರು. ಡಾ|ಎಂ.ಎಸ್‌. ಲೋಕೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ| ಶಿವಯೋಗಿ ರ್ಯಾವಳದ, ಡಾ| ಬಾಪುರಾಯಗೌಡ ಪಾಟೀಲ ಬೀಜೋತ್ಪಾದನೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಸಹಾಯಕ ಪ್ರಾಧ್ಯಾಪಕಿ ಡಾ|ನಮಿತಾ ರಾವುತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next