Advertisement
ಕ್ಯಾರೆಟ್‌ನ ಅಂತಹ ಕೆಲವು “ಬ್ಯೂಟಿ ರೆಸಿಪಿಗಳು’ ಇಲ್ಲಿವೆ!
ಇದು ಒಣ ಚರ್ಮದವರಿಗೆ ಉತ್ತಮ. ಇದರ ಲೇಪನದಿಂದ ಚರ್ಮ ತಾಜಾ, ಮೃದು ಹಾಗೂ ಕಾಂತಿಯುತವಾಗುತ್ತದೆ. ಚಳಿಗಾಲದಲ್ಲಿ ಈ ಮಾಸ್ಕ್ ಹಿತಕರ. ವಿಧಾನ: ಒಂದು ಕ್ಯಾರೆಟ್‌ನ್ನು ಕತ್ತರಿಸಿ ಮಿಕ್ಸರ್‌ನಲ್ಲಿ ಅರೆದು ತದನಂತರ ತೆಳ್ಳಗಿನ ಬಟ್ಟೆಯಲ್ಲಿ ಸೋಸಿ ಜ್ಯೂಸ್ (ರಸ) ತೆಗೆಯಬೇಕು. ಈ ಕ್ಯಾರೆಟ್ ರಸಕ್ಕೆ 2 ಚಮಚ ಜೇನುತುಪ್ಪ , 20 ಹನಿ ಬಾದಾಮಿ ತೈಲ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿ ಬೆರಳಿನಿಂದ ಮೃದುವಾಗಿ ಮಾಲೀಶು ಮಾಡಬೇಕು. 1/2 ಗಂಟೆಯ ಬಳಿಕ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟರ್ಕಿ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ಹೀಗೆ 5-6 ಬಾರಿ ಶಾಖ ನೀಡಿದ ನಂತರ ತಣ್ಣೀರಿನಲ್ಲಿ ಅದ್ದಿದ ಟವೆಲ್‌ನಿಂದ ಮುಖವನ್ನು ತೊಳೆಯಬೇಕು.
Related Articles
ವಯಸ್ಸಾದಂತೆ ಅಥವಾ ಚರ್ಮ ಒಣಗಿದಾಗ ಅಧಿಕ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೆರಿಗೆ ನಿವಾರಣೆಗೆ ಕ್ಯಾರೆಟ್‌ನಿಂದ ಈ ವಿಧಾನದಲ್ಲಿ ಫೇಸ್‌ಮಾಸ್ಕ್ ಬಳಸಿದರೆ ಹಿತಕರ.
Advertisement
ವಿಧಾನ: ಎರಡು ಕ್ಯಾರೆಟ್‌ನ ಹೊರ ಸಿಪ್ಪೆ ತೆಗೆದು ಕತ್ತರಿಸಿ, ಹಾಲಿನಲ್ಲಿ ಮೃದುವಾಗುವವರೆಗೆ ಬೇಯಿಸಬೇಕು. ತದನಂತರ ಚೆನ್ನಾಗಿ ಮಿಕ್ಸರ್‌ನಲ್ಲಿ ಅರೆದು, ಅದಕ್ಕೆ ಮೂರು ಚಮಚ ಜೇನು, ಮೂರು ಚಮಚ ಆಲಿವ್‌ತೈಲ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2-3 ಬಾರಿ ಈ ಫೇಸ್‌ಮಾಸ್ಕ್ ಬಳಸಿದರೆ ನೆರಿಗೆಗಳು ನಿವಾರಣೆಯಾಗಿ ಮೊಗದ ಕಾಂತಿ, ಅಂದ ವರ್ಧಿಸುತ್ತದೆ.
ಕ್ಯಾರೆಟ್‌ನ ಪೀಲ್ ಆಫ್ ಫೇಸ್ಮಾಸ್ಕ್ಮುಖದ ಕೊಳೆ, ಎಣ್ಣೆಯ ಪಸೆ, ಜಿಡ್ಡು , ರಂಧ್ರಗಳ ನಿವಾರಣೆಗೆ ಹಾಗೂ ತೈಲಯುಕ್ತ ತ್ವಚೆಯವರಿಗೆ ಈ ಮಾಸ್ಕ್ ಹಿತಕರ. ವಿಧಾನ: ಮೊದಲು ಒಂದು ಬೌಲ್‌ನಲ್ಲಿ ಒಂದು ಚಮಚ ಜೆಲ್ಯಾಟಿನ್, 1/2 ಕಪ್ ಕ್ಯಾರೆಟ್ ಜ್ಯೂಸ್ ಹಾಗೂ 1/2 ಚಮಚ ನಿಂಬೆರಸ ಚೆನ್ನಾಗಿ ಬೆರೆಸಿ ಇಡಬೇಕು. ತದನಂತರ ಮೈಕ್ರೋವೇವ್ ಅಥವಾ ಗ್ಯಾಸ್‌ನ ಬರ್ನರ್‌ನಲ್ಲಿ ಸಣ್ಣ ಉರಿಯಲ್ಲಿ ಇದನ್ನು ಬಿಸಿ ಮಾಡಬೇಕು. ಆರಿದ ನಂತರ ಫ್ರಿಜ್‌ನಲ್ಲಿ 20-30 ನಿಮಿಷ ಇಡಬೇಕು. ಇದನ್ನು ಲೇಪಿಸುವ ಮೊದಲು ಮುಖಕ್ಕೆ ಆವಿ ತೆಗೆದುಕೊಳ್ಳಬೇಕು. ಅಥವಾ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ನಂತರ ಈ ಮಿಶ್ರಣವನ್ನು ದಪ್ಪವಾಗಿ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಬಳಿಕ ತೆಗೆಯಬೇಕು (ಪೀಲ್ ಆಫ್ ಮಾಡಬೇಕು) ತದನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ವಾರಕ್ಕೆ 1-2 ಬಾರಿ ಬಳಸಿದರೆ ಉತ್ತಮ ಪರಿಣಾಮ ಲಭ್ಯ. ಕ್ಯಾರೆಟ್ ಮಾಯಿಶ್ಚರೈಸಿಂಗ್ ಫೇಸ್‌ಮಾಸ್ಕ್
ಮುಖದ ತೇವಾಂಶ ವರ್ಧಿಸಿ ಒಣಗುವಿಕೆ, ಒರಟು ಚಮಚ ನಿವಾರಣೆ ಮಾಡಲು ಈ ಮಾಸ್ಕ್ ಹಿತಕರ. ಚಳಿಗಾಲದಲ್ಲಿಯೂ ಇದು ಬಹೂಪಯುಕ್ತ. ಒಣ ಹಾಗೂ ಒರಟು ಚರ್ಮ ಉಳ್ಳವರಿಗೆ ಇದು ಹೇಳಿಮಾಡಿಸಿದ ಫೇಸ್‌ಮಾಸ್ಕ್. ವಿಧಾನ: ಒಂದು ಕ್ಯಾರೆಟ್‌ನ್ನು ಸಣ್ಣಗೆ ತುರಿಮಣೆಯಲ್ಲಿ ತುರಿಯಬೇಕು. ಇದಕ್ಕೆ ಎರಡು ಸ್ಕೂಪ್ ಅವಾಕಾಡೊ ಅಥವಾ ಬೆಣ್ಣೆ ಹಣ್ಣಿನ ಮಿಶ್ರಣ ಬೆರೆಸಿ, ಒಂದು ಚಮಚ ಶುದ್ಧ ಆಲಿವ್ ತೈಲ ಸೇರಿಸಿ, 2 ಚಿಟಿಕೆ ಎಪ್ಸಮ್‌ಸಾಲ್ಟ್ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿಬೆರಳುಗಳಿಂದ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. ಒಣಗಿದ ಹಾಗೂ ರೂಕ್ಷ ಚರ್ಮವು ಇದರಿಂದ ಎಕ್ಸ್ ಫೋಲಿಯೇಟ್ ಅರ್ಥಾತ್ ನಿವಾರಣೆಯಾಗುತ್ತದೆ. ಚರ್ಮ ಮೃದುವಾಗಿ ತೇವಾಂಶ ವೃದ್ಧಿಯಾಗುತ್ತದೆ. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ, ತಾಜಾ ಹಾಗೂ ಮೃದುತ್ವದಿಂದ ಮೊಗ ಹೊಳೆಯುತ್ತದೆ. ಇದೇ ರೀತಿಯಲ್ಲಿ ಕೈಕಾಲು ಕುತ್ತಿಗೆ ಮೊದಲಾದ ಭಾಗಗಳಲ್ಲಿ ಚರ್ಮ ಒಣಗಿದಾಗ, ಕಾಂತಿಹೀನವಾದಾಗ ಯಾವುದೇ ರಾಸಾಯನಿಕಗಳ ಲೇಪಗಳನ್ನು ಬಳಸುವ ಬದಲು ಕ್ಯಾರೆಟ್‌ನ ಈ ಮಾಯಿಶ್ಚರೈಸಿಂಗ್ ಮಾಸ್ಕ್ ಲೇಪಿಸಿದರೆ ಉತ್ತಮ ಪರಿಣಾಮ ಉಂಟಾಗುತ್ತದೆ. ಹೀಗೆ ಅಡುಗೆ ಮನೆಯಲ್ಲಿಯೇ ಕ್ಯಾರೆಟ್‌ನ “ಬ್ಯೂಟಿ ರೆಸಿಪಿ’ಗಳನ್ನು ಪರಿಣಾಮಕಾರಿಯಾಗಿ ತಯಾರಿಸಬಹುದು. – ಡಾ| ಅನುರಾಧಾ ಕಾಮತ್