ಪರಿಚಿತರೊಬ್ಬರು ದೂರದ ಮುಂಬೈಯಲ್ಲಿ ಪತಿಯ ಉದ್ಯೋಗ ನಿಮಿತ್ತ ನೆಲೆಸಿದ್ದರು.ಅವರಪತಿ ಹೆತ್ತವರಿಗೆ ಒಬ್ಬನೇ ಮಗ, ಉಳಿದಂತೆ ಮೂವರು ಸಹೋದರಿಯರು. ಪತಿ ತೀರಿದನಂತರ ಆ ತಾಯಿ, ಹೆಣ್ಣು ಮಕ್ಕಳ ಮನೆಯಲ್ಲಿ ವಾಸವಿದ್ದರು. ಸಂಪ್ರದಾಯಸ್ಥರಾದ ಅವರಿಗೆ ವೃದ್ಧಾಪ್ಯವನ್ನು ಮಗನ ಮನೆಯಲ್ಲಿ ಕಳೆಯುವಹಂಬಲ.
ಮುಂಬೈ ವಾಸ ಅಮ್ಮನಿಗೆ ಹಿಡಿಸದುಎಂದು ಸಮಜಾಯಿಷಿ ನೀಡಿದ ಮಗ, ರಿಟೈರ್ಡ್ ಮೆಂಟ್ ನಂತರ ತಾವು ಊರಲ್ಲೇ ನೆಲೆಸುತ್ತೇವೆ. ಆಗ ತಮ್ಮ ಜೊತೆಗೇ ಇರಬಹುದು; ಈಗ ಹೆಣ್ಣುಮಕ್ಕಳ ಮನೆಯಲ್ಲೇ ಇರು ಎಂದು ಒಪ್ಪಿಸಿದ್ದರು. ಅಲ್ಲಿ ಚೆನ್ನಾಗೇನೋಡಿಕೊಳ್ತಿದ್ದರು ಕೂಡಾ, ಆ ತಾಯಿಗೆಮಗನ ಮನೆ ತನ್ನ ಹಕ್ಕಿನದು; ಇದೇನಿದ್ದರೂ ಅಳಿಯನ ಮನೆ ಎನ್ನುವ ಋಣ ಭಾವ. ಮಗ ಊರಿಗೆ ಬಂದು ನೆಲೆಸುವ ದಿನಕ್ಕಾಗಿ ಆಕೆಎದುರು ನೋಡುತ್ತಿದ್ದರು. ಆ ತಾಯಿಯಹಂಬಲ ಸುತ್ತಮುತ್ತಲಿನ ಎಲ್ಲರಿಗೆ ತಿಳಿದಿದ್ದೇ.ವರ್ಷದ ನಂತರ ಮಗನಿಗೆ ನಿವೃತ್ತಿಯಾಗಿತ್ತು.ತಮ್ಮ ಬರವಿಗಾಗಿ ಕಾದಿದ್ದ ವೃದ್ಧ ತಾಯಿಯತ್ತ ಆತ ತಿರುಗಿಯೂ ನೋಡಲಿಲ್ಲ.
ಮೊದಮೊದಲು ಮುಂಬೈ ವಾಸದ ಕಷ್ಟಗಳನ್ನೆಲ್ಲ ತಾಯಿಯೆದುರು ಪೋಣಿಸುತಿದ್ದ ಮಗ, ಸೊಸೆ,ಊರು ಸ್ವರ್ಗ, ಅಲ್ಲಿಗೆ ಯಾವಾಗಬರುತ್ತೇವೋ, ಊರಿನ ತಾಜಾ ತರಕಾರಿ, ಸಿಹಿ,ಖಾರದ ತಿನಿಸು, ಅಮ್ಮ ಮಾಡ್ತಿದ್ದ ಕಡಿಗೆ ಪಲ್ಯ,ಸಾರು ಉಣ್ಣಲು ತುದಿಗಾಲಲ್ಲಿ ನಿಂತಿದ್ದೇವೆಎಂದು ಸಿಹಿ ಸಿಹಿಯಾಗಿ ಮಾತಾಡುತ್ತಿದ್ದಅವರು ಅತ್ತ ಕಾಲಿಡಲೇ ಇಲ್ಲ. ಹೆಣ್ಣುಮಕ್ಕಳು ಅಣ್ಣನ ಮೊಬೈಲ್ ಗೆ ಕರೆ ಮಾಡಿ ತಾಯಿಗೆ ಕೊಟ್ಟಾಗೆಲ್ಲ ಅವರದು ಒಂದೇ ಉತ್ತರ.
ವರ್ಷಗಳ ಕಾಲ ಇಲ್ಲೇ ಇದ್ದು ಈಗ ಇದೇ ನಮ್ಮೂರು ಅನ್ನಿಸ್ತಿದೆ. ಇಲ್ಲೇ ಇರ್ತೆವೆ.ಸೊಸೆಯನ್ನು ಸ್ನೇಹಿತೆ ಮೆತ್ತಗೆ ಅನುನಯಿಸಿದಾಗ ಆಕೆ ಗುಟ್ಟು ಬಿಟ್ಟು ಕೊಟ್ಟಿದ್ದಳು: ಮಗ ರಿಟೈರ್ಡ್ ಆದಾಗ ಊರಿಗೆ ಬರ್ತಾನೆ.ಅವನು ಮನೆ ಮಾಡಿ ಕರಕೊಂಡು ಹೋಗ್ತಾನೆ. ಮಗನ ಮನೆಯಲ್ಲಿತೇìನೆ ಆ ಮೇಲಿಂದ. ಎಂದು ಎಂದಿನಿಂದಲೋ ಅತ್ತೆ ಕಾಯ್ತಿದಾರೆ. ಇಲ್ಲಿ ಬಂದು ಕೂತ್ರೆ ಅವರ ಚಾಕರಿ ಮಾಡುವುದಾದರೂ ಯಾರು? ಅದಕ್ಕೇ ನಾವುಊರಿಗೆ ಹೋಗುವುದಿಲ್ಲ. ನಿವೃತ್ತಿಯ ನಂತರವೂ ಇಲ್ಲೇ ಇರ್ತೇವೆ.
– ಕೃಷ್ಣವೇಣಿ ಕಿದೂರು