Advertisement

ಕ್ಯಾರಿಕೇಚರ್‌ ಕಚಗುಳಿ 

12:15 AM Jan 19, 2019 | |

ಕ್ಯಾರಿಕೇಚರ್‌ಗಳು ವ್ಯಕ್ತಿಯ ಪ್ರತಿರೂಪಗಳೇನೋ ನಿಜ. ಆದರೆ, ಅದರಲ್ಲಿ ಆ ವ್ಯಕ್ತಿಯ ವಿಶಿಷ್ಟ ಹಾವಭಾವಗಳನ್ನು ಪ್ರತಿಬಿಂಬಿಸುವುದಿದೆಯಲ್ಲ, ಕಲಾವಿದನಿಗೆ ನಿಜಕ್ಕೂ ಅದು ನಾಜೂಕಿನ ಕೆಲಸ. ಪ್ರತಿಭಾವಂತ ಯುವ ಕಲಾವಿದ, ಸ್ಪರ್ಷ ಧಹರವಾಲ್‌ ಈ ಕಲಾಸಾಹಸದಲ್ಲಿ ನಿಪುಣರು.

Advertisement

ಪ್ರತಿ ವ್ಯಕ್ತಿಗೂ ಒಂದು ಮುಖಭಾವವು ಸಿಗ್ನೇಚರ್‌ ಆಗಿ, ನೈಸರ್ಗಿಕ ರೂಪದಲ್ಲಿ ಬಂದಿರುತ್ತೆ. ಆ ಸಿಗ್ನೇಚರ್‌ ಅನ್ನು ಅಪಹರಿಸಿ, ಅದನ್ನು ಕ್ಯಾನ್ವಾಸ್‌ ನಲ್ಲಿ ಪರಿಪೂರ್ಣವಾಗಿ ಒಡಮೂಡಿಸುವುದರಲ್ಲಿ ಸ್ಪರ್ಷ, ಸಿದಟಛಿಹಸ್ತರು. ರಾಜಕೀಯ ವ್ಯಂಗ್ಯಚಿತ್ರ, ಕಾಮಿಕ್‌ ಡ್ರಾಯಿಂಗ್‌ ಮತ್ತು ಸ್ಟೋರಿ ಬೋರ್ಡ್‌ ಇಲ್ಲಸ್ಟೇಷನ್‌ಗಳಲ್ಲೂ ಛಾಪು ಮೂಡಿಸಿದ ಕಲಾವಿದ ಇವರು. ಸ್ಪರ್ಷ ಅವರು ಎಷ್ಟು ಸಲೀಸಾಗಿ ಡಿಜಿಟಲ್‌ ರೂಪದಲ್ಲಿ ಕಾಟೂìನ್‌, ಕ್ಯಾರಿಕೇಚರ್‌, ಗ್ರಾಫಿಕ್‌ ಡಿಸೈನ್‌ ತಯಾರಿಸುತ್ತಾರೋ, ಅಷ್ಟೇ ಸಲೀಸಾಗಿ ತಮ್ಮ ಕೈಚಳಕದಿಂದಲೂ ರಚಿಸಬಲ್ಲರು. ಲೆಡ್‌ ಪೆನ್ಸಿಲ್‌, ಚಾರ್‌ಕೋಲ್‌, ಪೆನ್‌, ಬ್ರಷ್‌ ಮತ್ತು ಎಲ್ಲ ರೀತಿಯ ಬಣ್ಣಗಳನ್ನು ಬಳಸುವಲ್ಲೂ ನಿಪುಣರು. ಜಾಗತಿಕ ಮಟ್ಟದಕ್ಯಾರಿಕೇಚರ್‌ ಸ್ಪಿರಿಟ್‌ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ವಿರಾಟ್‌ ಕೊಹ್ಲಿ, ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ಧೋನಿಯ ಕ್ಯಾರಿಚೇರ್‌ಗಳು ಮನಕ್ಕೆ ಮುದ  ‌ನೀಡುವಂಥವು.

ಯಾವಾಗ?: ಜ.19,
ಶನಿವಾರ, ಬೆ.10
ಎಲ್ಲಿ?: ಭಾರತೀಯ ವ್ಯಂಗ್ಯ
ಚಿತ್ರ ಗ್ಯಾಲರಿ, ಎಂ.ಜಿ. ರಸ್ತೆ
„„ಸಂಪರ್ಕ: 9980091428

Advertisement

Udayavani is now on Telegram. Click here to join our channel and stay updated with the latest news.

Next