ಬೆಂಗಳೂರು: ಸರಕು ಸಾಗಣೆ ಜಾಲದಲ್ಲಿ ಭಾರತದ ಮುಂಚೂಣಿ ಕಂಪೆನಿಯಾದ ಇಕಾರ್ಟ್ ತನ್ನ ಸರಕು ಸಾಗಣೆ ಸೇವೆಗಳನ್ನು ಜಿಪಿಎಸ್ ಸೌಲಭ್ಯ ಇರುವ ಏಳು ಸಾವಿರಕ್ಕೂ ಹೆಚ್ಚಿನ ಟ್ರಕ್ ಗಳ ಮೂಲಕ ಭಾರತದಾದ್ಯಂತ ನೀಡುವುದಾಗಿ ಇಂದು ಘೋಷಿಸಿದೆ.
ಕಂಪನಿಯು ಬ್ಯಾಕ್ ಟು ಬ್ಯಾಕ್ ಸರಕು ಸಾಗಣೆ ಸೇವೆಗಳನ್ನು ರಸ್ತೆ ಹಾಗೂ ವಾಯುಮಾರ್ಗದ ಮೂಲಕ ಒದಗಿಸಲಿದೆ. ವಿವಿಧ ಬ್ರ್ಯಾಂಡ್ಗಳಿಗೆ, ಉತ್ಪನ್ನಗಳ ತಯಾರಕರಿಗೆ, ರಿಟೇಲ್ ವ್ಯಾಪಾರಿಗಳಿಗೆ ದೇಶದಾದ್ಯಂತ ಸೇವೆಗಳನ್ನು ಒದಗಿಸಲಿದೆ. ಇದಕ್ಕೆ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿದೆ.
ವಾಯುಮಾರ್ಗದ ಮೂಲಕ ನೀಡಲಾಗುವ ಸರಕು ಸಾಗಣೆ ಸೇವೆಯು ಪ್ರಮುಖ ಉತ್ಪನ್ನಗಳನ್ನು ತ್ವರಿತವಾಗಿ, ದೇಶದಾದ್ಯಂತ ತಲುಪಿಸುವ ಸೌಲಭ್ಯವನ್ನು ಕಲ್ಪಿಸುತ್ತದೆ.
ಇದನ್ನೂ ಓದಿ:ನ್ಯಾಯಬೆಲೆ ಅಂಗಡಿಯಲ್ಲೇ ಟೊಮೇಟೊ ಮಾರಾಟ ಮಾಡಲು ಮುಂದಾದ ತಮಿಳುನಾಡು ಸರಕಾರ
ಹೊಸದಾಗಿ ಆರಂಭಿಸಲಾಗಿರುವ ಸೇವೆಗಳು ಉದ್ಯಮಗಳಿಗೆ ಒಟ್ಟು 21 ಪ್ರಮುಖ ವಿಮಾನ ನಿಲ್ದಾಣಗಳ ಮೂಲಕ ಸರಕು ಸಾಗಣೆಗೆ ಅವಕಾಶ ಕಲ್ಪಿಸಲಿವೆ. ಇಕಾರ್ಟ್ ಕಂಪನಿಯು ತನ್ನ ಆಧುನಿಕ ತಂತ್ರಜ್ಞಾನ ಮತ್ತು ಸರಕು ಸಾಗಣೆ ವ್ಯವಸ್ಥೆಯ ಮೂಲಕ ದೇಶದಾದ್ಯಂತ ಇರುವ 80 ಕೇಂದ್ರಗಳಿಂದ ರಸ್ತೆ ಮಾರ್ಗದಲ್ಲಿ ಸರಕು ಸಾಗಣೆ ಸೇವೆ ಒದಗಿಸಲಿದೆ. ಈ ಕೇಂದ್ರಗಳ ಮೂಲಕ ಕಂಪನಿಯು ಪ್ರಮುಖ ಸರಕು ಸಾಗಣೆ ಕಾರಿಡಾರ್‌ಗಳನ್ನು ಸಂಪರ್ಕಿಸಲಿದೆ. ಏಳು ಸಾವಿರಕ್ಕೂ ಹೆಚ್ಚು ಟ್ರಕ್‌ಗಳು ಇರುವ ಜಾಲವು ಈ ಸೇವೆಗಳಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಪ್ರತಿ ಟ್ರಕ್ ಕೂಡ ದಿನವೊಂದಕ್ಕೆ ಸರಾಸರಿ 800 ಕಿ.ಮೀ. ಸಾಗುತ್ತದೆ.
ಜಿಪಿಎಸ್ ಸಂಪರ್ಕ ಹೊಂದಿರುವ ಟ್ರಕ್‌ಗಳ ಬೃಹತ್ ಜಾಲ, ಡಿಜಿಲಾಕ್ ಸೌಲಭ್ಯವಿರುವ ಟ್ರಕ್‌ಗಳು, ಬೇಡಿಕೆ ಹೆಚ್ಚಿರುವ ಅವಧಿಯಲ್ಲಿಯೂ ಸೇವೆ ಒದಗಿಸುವ ಭರವಸೆ, ಸರಕುಗಳು ಸಮಯಮಿತಿಯಲ್ಲಿ ತಲುಪುತ್ತವೆ ಎಂಬ ಖಚಿತ ಭರವಸೆ ನೀಡುತ್ತವೆ ಎಂದು ಪ್ರಕಟಣೆ ತಿಳಿಸಿದೆ.